Mann Ki Baat: 2024ರ ಮೊದಲ ಮನ್​ಕಿ ಬಾತ್​, ಮಹಿಳಾ ಸಶಕ್ತೀಕರಣ, ರಾಮ ಮಂದಿರ ಸೇರಿ ಹಲವು ವಿಷಯಗಳ ಬಗ್ಗೆ ಮೋದಿ ಮಾತು

ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮವು ದೇಶದ ಕೋಟ್ಯಂತರ ಜನರನ್ನು ಬೆಸೆದಿದೆ. ಎಲ್ಲರ ಭಾವನೆಯೂ ಒಂದೇ , ಎಲ್ಲರ ಭಕ್ತಿಯೂ ಒಂದೇ, ಎಲ್ಲರ ಮಾತಿನಲ್ಲೂ ರಾಮನೇ ಇದ್ದಾನೆ. ನಾಡಿನ ಹಲವಾರು ಜನರು ರಾಮಭಜನೆಗಳನ್ನು ಹಾಡಿ ರಾಮನಿಗೆ ಸಮರ್ಪಿಸಿದ್ದಾರೆ. ಜನವರಿ 22ರಂದು ಸಂಜೆ ಇಡೀ ದೇಶವು ರಾಮಜ್ಯೋತಿ ಬೆಳಗಿಸಿ ದೀಪಾವಳಿಯನ್ನು ಆಚರಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ.

Mann Ki Baat: 2024ರ ಮೊದಲ ಮನ್​ಕಿ ಬಾತ್​, ಮಹಿಳಾ ಸಶಕ್ತೀಕರಣ, ರಾಮ ಮಂದಿರ ಸೇರಿ ಹಲವು ವಿಷಯಗಳ ಬಗ್ಗೆ ಮೋದಿ ಮಾತು
ನರೇಂದ್ರ ಮೋದಿ

Updated on: Jan 28, 2024 | 11:52 AM

ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮವು ದೇಶದ ಕೋಟ್ಯಂತರ ಜನರನ್ನು ಬೆಸೆದಿದೆ. ಎಲ್ಲರ ಭಾವನೆಯೂ ಒಂದೇ , ಎಲ್ಲರ ಭಕ್ತಿಯೂ ಒಂದೇ, ಎಲ್ಲರ ಮಾತಿನಲ್ಲೂ ರಾಮನೇ ಇದ್ದಾನೆ. ನಾಡಿನ ಹಲವಾರು ಜನರು ರಾಮಭಜನೆಗಳನ್ನು ಹಾಡಿ ರಾಮನಿಗೆ ಸಮರ್ಪಿಸಿದ್ದಾರೆ. ಜನವರಿ 22ರಂದು ಸಂಜೆ ಇಡೀ ದೇಶವು ರಾಮಜ್ಯೋತಿ ಬೆಳಗಿಸಿ ದೀಪಾವಳಿಯನ್ನು ಆಚರಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ.

ಈ ವರ್ಷ ಮೊದಲ ಮನ್​ ಕಿ ಬಾತ್​ನಲ್ಲಿ ಮಾತಣಾಡಿದ ಅವರು,  ಈ ಬಾರಿಯ ಗಣರಾಜ್ಯೋತ್ಸವ ಪರೇಡ್​ ತುಂಬಾ ಅದ್ಭುತವಾಗಿತ್ತು, ಕೇಂದ್ರ ಭದ್ರತಾ ಪಡೆಗಳು,ದೆಹಲಿ ಪೊಲೀಸರ ಮಹಿಳಾ ತುಕಡಿಗಳು ಕರ್ತವ್ಯದ ಹಾದಿಯಲ್ಲಿ ಸಾಗಲು ಪ್ರಾರಂಭಿಸದಾಗ ಎಲ್ಲರ ಮನಸ್ಸಿನಲ್ಲೂ ಹೆಮ್ಮೆ ಮೂಡಿತ್ತು.

ಈ ಬಾರಿ 13 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡು ಗೌರವಿಸಲಾಗಿದೆ. ಬದಲಾಗುತ್ತಿರುವ ಭಾರತದಲ್ಲಿ ನಮ್ಮ ಹೆಣ್ಣುಮಕ್ಕಳು ಮತ್ತು ದೇಶದ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಸಾಧನೆ ಮಾಡುತ್ತಿದ್ದಾರೆ.
ಮೂರು ದಿನಗಳ ಹಿಂದೆ ದೇಶವು ಪದ್ಮ ಪ್ರಶಸ್ತಿಯನ್ನು ಘೋಷಿಸಿದೆ, ಇದರಲ್ಲಿ ತಳಮಟ್ಟದ ಜನರೊಂದಿಗೆ ಬೆರೆಯುವ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತರಲು ಶ್ರಮಿಸಿದವರಿಗೆ ಪದ್ಮ ಗೌರವವನ್ನು ನೀಡಲಾಯಿತು.

ಮತ್ತಷ್ಟು ಓದಿ: ಚಾಮರಾಜನಗರದ ಗ್ರಾಮೀಣ ಮಹಿಳೆ ವರ್ಷಾ ಜೀವನವನ್ನೇ ಬದಲಿಸಿತು ಮೋದಿ ಮನ್​ ಕೀ ಬಾತ್

ಮಕರ ಸಂಕ್ರಾಂತಿಯಿಂದ ಜನವರಿ 22 ರವರೆಗೆ ಸ್ವಚ್ಛತಾ ಅಭಿಯಾನವನ್ನು ನಡೆಸುವಂತೆ ನಾನು ದೇಶದ ಜನರನ್ನು ವಿನಂತಿಸಿದ್ದೆ. ಲಕ್ಷಗಟ್ಟಲೆ ಜನರು ಭಕ್ತಿಯಿಂದ ಕೂಡಿ ತಮ್ಮ ಪ್ರದೇಶದ ಧಾರ್ಮಿಕ ಸ್ಥಳಗಳನ್ನು ಸ್ವಚ್ಛಗೊಳಿಸಿದ್ದು ನನಗೆ ಸಂತಸ ತಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:48 am, Sun, 28 January 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us