ಛತ್ತೀಸ್ಗಢ್ನಲ್ಲಿ ಎನ್ಕೌಂಟರ್; ಪ್ರಮುಖ ಮಾವೋವಾದಿ ನಾಯಕನೊಬ್ಬನ ಹತ್ಯೆ
ಭಾರತದಲ್ಲಿ ಗಡಿಯಲ್ಲಿ ಉಗ್ರರ ದಾಳಿ ಸಮಸ್ಯೆಯಾದರೆ ದೇಶದೊಳಗೆ ನಕ್ಸಲರು, ಮಾವೋವಾದಿಗಳ ಕಾಟ ಯಾವಾಗಲೂ ಇರುತ್ತದೆ. ಅದರಲ್ಲೂ ಛತ್ತೀಸಗಢ ನಕ್ಸಲ್ ಪೀಡಿತ ರಾಜ್ಯ.
ಛತ್ತೀಸ್ಗಡ್ನ ದಂತೇವಾಡಾ ಜಿಲ್ಲೆಯಲ್ಲಿ ಭದ್ರತಾ ಪಡೆ ಸಿಬ್ಬಂದಿ ಪ್ರಮುಖ ಮಾವೋವಾದಿ ನಾಯಕನೊಬ್ಬನನ್ನು ಹತ್ಯೆ ಮಾಡಿದ್ದಾರೆ. ಈ ಮಾವೋವಾದಿ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನು ಆಗಿದ್ದ. ಈತನ ತಲೆಗೆ 5 ಲಕ್ಷ ರೂಪಾಯಿ ಬಹುಮಾನ ಕಟ್ಟಲಾಗಿತ್ತು. ಅಂದರೆ ಈ ಮಾವೋವಾದಿಯ ಪತ್ತೆಗೆ ಸಹಾಯ ಮಾಡಿದವರಿಗೆ 5 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆಯಾಗಿತ್ತು. ಅಂಥವನನ್ನು ಶುಕ್ರವಾರ ಭದ್ರತಾ ಪಡೆ ಸಿಬ್ಬಂದಿ ಕೊಂದುಹಾಕಿದ್ದಾರೆ.
ಭಾರತದಲ್ಲಿ ಗಡಿಯಲ್ಲಿ ಉಗ್ರರ ದಾಳಿ ಸಮಸ್ಯೆಯಾದರೆ ದೇಶದೊಳಗೆ ನಕ್ಸಲರು, ಮಾವೋವಾದಿಗಳ ಕಾಟ ಯಾವಾಗಲೂ ಇರುತ್ತದೆ. ಅದರಲ್ಲೂ ಛತ್ತೀಸಗಢ ನಕ್ಸಲ್ ಪೀಡಿತ ರಾಜ್ಯ. ಹಾಗೇ, ಶುಕ್ರವಾರ ಸಂಜೆ 4ಗಂಟೆ ಹೊತ್ತಿಗೆ ಕೂಡ ಗೀಡಂ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯವೊಂದರಲ್ಲಿ ಜಿಲ್ಲಾ ಮೀಸಲು ಗಾರ್ಡ್ ಪೊಲೀಸರು ಮತ್ತು ಮಾವೋವಾದಿಗಳ ಮಧ್ಯೆ ಎನ್ಕೌಂಟರ್ ನಡೆದಿತ್ತು. ಗುಂಡಿನ ಚಕಮಕಿ ನಂತರ ರಾಮ್ಸು ಕೊರಮ್ ಎಂಬ ಮಾವೋವಾದಿಯ ಶವ ಸಿಕ್ಕಿದೆ. ಈತ ಹಲವು ಪ್ರಕರಣಗಳಲ್ಲಿ ಬೇಕಾದವನಾಗಿದ್ದ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಈತನಿಂದ 7.62 ಎಂಎಂ ಪಿಸ್ತೂಲ್, 5 ಕೆಜಿ ಐಇಡಿ ಸೇರಿ ಮತ್ತಿತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Puneeth Rajkumar: ಪುನೀತ್ ಕಾಣಿಸಿಕೊಂಡಿದ್ದ ‘ಗಂಧದ ಗುಡಿ’ ಬಿಡುಗಡೆ ಯಾವಾಗ?; ಇಲ್ಲಿದೆ ಮಾಹಿತಿ
Published On - 1:32 pm, Sat, 6 November 21