SC on Hindu Marriage: ಹಿಂದೂ ಸಂಪ್ರದಾಯದಂತೆ ನಡೆಯದ ಮದುವೆ ಅಸಿಂಧು: ಸುಪ್ರೀಂ

Hindu marriage validity: ಹಿಂದೂ ವಿವಾಹ ಕಾಯ್ದೆಯಡಿ ಸೂಚಿಸಲಾದ ಸಾಂಪ್ರದಾಯಿಕ ಆಚರಣೆಗಳು ಮತ್ತು ಸಮಾರಂಭಗಳು ಶ್ರದ್ಧೆಯಿಂದ, ಕಟ್ಟುನಿಟ್ಟಾಗಿ ಮತ್ತು ಧಾರ್ಮಿಕವಾಗಿರಬೇಕು ಎಂದು ಹೇಳಿದೆ. ಒಂದು ವೇಳೆ ಇವುಗಳನ್ನು ಅನುಸರಿಸಲು ವಿಫಲವಾದರೆ ಆ ಮದುವೆಯನ್ನು ನೋಂದಾಯಿಸಿದ ನಂತರವೂ ಅಮಾನ್ಯವೆಂದು ಘೋಷಿಸಲಾಗುತ್ತದೆ ಎಂದು ಕಟ್ಟುನಿಟ್ಟಾಗಿ ಹೇಳಿದೆ.

SC on Hindu Marriage: ಹಿಂದೂ ಸಂಪ್ರದಾಯದಂತೆ ನಡೆಯದ ಮದುವೆ ಅಸಿಂಧು: ಸುಪ್ರೀಂ
Follow us
ಅಕ್ಷಯ್​ ಪಲ್ಲಮಜಲು​​
| Updated By: Vimal Kumar

Updated on:May 02, 2024 | 12:38 PM

ಹಿಂದೂ ಧರ್ಮದಲ್ಲಿ ನಡೆಯುವ ವಿವಾಹವು (Hindu marriage) ಅದೊಂದು ಪವಿತ್ರವಾದ ಪ್ರಕ್ರಿಯೇ ಹೊರತು ಹಾಡು ಮತ್ತು ನೃತ್ಯ ಭೋಜನಕ್ಕೆ ಮಾತ್ರ ಸೀಮಿತವಲ್ಲ ಎಂದು ಸುಪ್ರೀ ಕೋರ್ಟ್​​ ಹೇಳಿದೆ. ಹಿಂದೂ ವಿವಾಹ ಕಾಯ್ದೆಯಡಿ ಸೂಚಿಸಲಾದ ಸಾಂಪ್ರದಾಯಿಕ ಆಚರಣೆಗಳು ಮತ್ತು ಸಮಾರಂಭಗಳು ಶ್ರದ್ಧೆಯಿಂದ, ಕಟ್ಟುನಿಟ್ಟಾಗಿ ಮತ್ತು ಧಾರ್ಮಿಕವಾಗಿರಬೇಕು ಎಂದು ಹೇಳಿದೆ. ಒಂದು ವೇಳೆ ಇವುಗಳನ್ನು ಅನುಸರಿಸಲು ವಿಫಲವಾದರೆ ಆ ಮದುವೆಯನ್ನು ನೋಂದಾಯಿಸಿದ ನಂತರವೂ ಅಮಾನ್ಯವೆಂದು ಘೋಷಿಸಲಾಗುತ್ತದೆ ಎಂದು ಕಟ್ಟುನಿಟ್ಟಾಗಿ ಹೇಳಿದೆ.

ಈ ಬಗ್ಗೆ ಕಾಯಿದೆಯ ಸೆಕ್ಷನ್ 7 ‘ಹಿಂದೂ ವಿವಾಹದ ಆಚರಣೆಗಳ ಬಗ್ಗೆ ಹೇಳುತ್ತದೆ. ಮದುವೆಯ ಸಿಂಧುತ್ವಕ್ಕಾಗಿ ಅದನ್ನು ಅನುಸರಿಸಬೇಕು. ಒಂದು ವೇಳೆ ಇದನ್ನು ಪಾಲಿಸದಿದ್ದಾರೆ, ಕಾನೂನಿನ ದೃಷ್ಟಿಯಲ್ಲಿ ಮದುವೆಯನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಹೇಳಿದೆ. ಸೆಕ್ಷನ್ 7 ಹೇಳುವಂತೆ ಹಿಂದೂ ವಿವಾಹವನ್ನು ಯಾವುದೇ ಸಾಂಪ್ರದಾಯಿಕ ವಿಧಿಗಳು ಮತ್ತು ಸಮಾರಂಭಗಳಿಗೆ ಅನುಗುಣವಾಗಿ ನಡೆಸಬಹುದು ಎಂದು ಹೇಳಿದೆ.

ಈ ಆದೇಶವನ್ನು ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ನೀಡಿದೆ. ಹಿಂದೂ ವಿವಾಹವು ‘ಸಂಸ್ಕಾರ’ ಮತ್ತು ಭಾರತೀಯ ಸಮಾಜಕ್ಕೆ ಒಂದು ಶೋಭೆಯನ್ನು ತರುವ ಮೌಲ್ಯಯುತವಾದ ಸಂಸ್ಕಾರವಾಗಿದೆ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್​​​ ಈ ಆದೇಶವನ್ನು ನೀಡಲು ಈ ಪ್ರಕರಣ ಕಾರಣವಾಗಿದೆ. ಇಬ್ಬರು ದಂಪತಿಗಳ ವಿವಾಹ ಮಾನ್ಯವಾಗಿದ್ದರು. ಅವರು ಹಿಂದೂ ಧರ್ಮದ ಸಂಪ್ರದಾಯದಂತೆ ಮದುವೆಯಾಗಿಲ್ಲ. ಅದಕ್ಕಾಗಿ ಅವರ ವಿಚ್ಛೇದನ ಪ್ರಕರಣದ ವಿಚಾರಣೆಯನ್ನು ತಡೆಹಿಡಿದಿದೆ. ಈ ವಿಚಾರಣೆ ವೇಳೆ ಕೋರ್ಟ್​​​ ವಿವಾಹ ಕಾಯ್ದೆ ಹಾಗೂ ಕಾನೂನಿ ಪ್ರಕಾರ ಹಿಂದೂ ವಿವಾಹ ಹೇಗಿರಬೇಕು ಎಂದು ಹೇಳಿದೆ. ಯುವಕರು ಮತ್ತು ಯುವತಿಯರು ಮದುವೆ ಮಾಡಿಕೊಳ್ಳುವ ಮೊದಲು ವಿವಾಹದ ಸಂಪ್ರಾದಾಯಗಳನ್ನು ಹಾಗೂ ಅದರ ಕಟ್ಟುಪಡುಗಳನ್ನು ತಿಳಿದುಕೊಳ್ಳಬೇಕು ಹಾಗೂ ಅದರ ಬಗ್ಗೆ ಯೋಚನೆ ಮಾಡಬೇಕು ಎಂದು ಪೀಠವು ಹೇಳಿದೆ.

ಮದುವೆ ಎನ್ನುವುದು, ಹಾಡು, ಡ್ಯಾನ್ಸ್​​​​, ಊಟ, ಮಾತ್ರವಲ್ಲ ಹಾಗೂ ಒತ್ತಡದಿಂದ ವರದಕ್ಷಿಣೆ ನೀಡುವುದು ಸರಿಯಲ್ಲ, ಇದು ಕೊನೆಗೆ ಕ್ರಿಮಿನಲ್ ಮೊಕದ್ದಮೆ ಕಾರಣವಾಗುತ್ತದೆ. ಮದುವೆ ಎನ್ನುವುದು ವ್ಯಾಪಾರವಲ್ಲ, ಇದು ಭಾರತೀಯ ಸಮಾಜದ ಮೂಲ ಹಾಗೂ ಮುಂದಿನ ನಿಮ್ಮ ವಿಕಸಿತ ಕುಟುಂಬಕ್ಕೆ ಸ್ಥಾನಮಾನ ನೀಡುವ ಹಾದಿಯಾಗಿದೆ. ಹಾಗಾಗಿ ಈ ಬಗ್ಗೆ ಒಂದು ಬಾರಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದೆ.

ಇದನ್ನೂ ಓದಿ: ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕೈಬಿಟ್ಟ ಆರೋಗ್ಯ ಇಲಾಖೆ, ಕಾರಣವೇನು?

ವಿವಾಹ ಎನ್ನುವುದು ಜೀವಗಳನ್ನು ಒಗ್ಗೂಡಿಸುವ, ಸಮಾನ, ಒಮ್ಮತದ ಮತ್ತು ಆರೋಗ್ಯಕರ ಸಮ್ಮಿಲ ಎಂದು ಪೀಠ ಹೇಳಿದೆ. ಹಿಂದೂ ವಿವಾಹವು ಸಂತಾನ ಹಾಗೂ ಕುಟುಂಬವನ್ನು ಬಳಸಪಡಿಸುವ ಘಟಕ ಹಾಗೂ ವಿವಿಧ ಸಮುದಾಯಗಳಲ್ಲಿ ಭ್ರಾತೃತ್ವದ ಮನೋಭಾವವನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:12 am, Thu, 2 May 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್