ಮಧ್ಯಪ್ರದೇಶ: ಶಾಲೆಯ ಹಾಸ್ಟೆಲ್ನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಮಧ್ಯಪ್ರದೇಶದ ಹಾಸ್ಟೆಲ್ನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಆಕೆಗೆ ಮಂಪರು ಬರುವ ಔಷಧವನ್ನು ಆಹಾರದಲ್ಲಿ ಬೆರೆಸಿ ಆಕೆಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಧ್ಯಪ್ರದೇಶದ ಪ್ರಸಿದ್ಧ ಖಾಸಗಿ ಶಾಲೆ(School)ಯೊಂದರ ಹಾಸ್ಟೆಲ್ನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಕುರಿತು ಎಸ್ಐಟಿ ರಚಿಸಲು ಮುಖ್ಯಮಂತ್ರಿ ಮೋಹನ್ ಯಾದವ್ ಆದೇಶಿಸಿದ್ದಾರೆ. ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ಟಾರಿ ಮಾತನಾಡಿ,ಮಧ್ಯಪ್ರದೇಶದಲ್ಲಿ ದೌರ್ಜನ್ಯ, ಅತ್ಯಾಚಾರ ಸೇರಿದಂತೆ ಗಂಭೀರ ಅಪರಾಧಗಳು ಹೆಚ್ಚಾಗಿವೆ.
ಈ ಸಂಬಂಧ ದೂರು ಸ್ವೀಕರಿಸಿದ ಬಳಿಕ ಪೊಲೀಸರು ಮಂಗಳವಾರ ರಾತ್ರಿ ಮೂವರ ವಿರುದ್ಧ ಪೋಕ್ಸೋ ಹಾಗೂ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಪರಾಧಕ್ಕೂ ಮುನ್ನ ಬಾಲಕಿಗೆ ಡ್ರಗ್ಸ್ ನೀಡಲಾಗಿತ್ತೆ ಎಂಬುದನ್ನು ಅಧಿಕಾರಿಗಳ ಬಳಿ ಕೇಳಿದಾಗ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ. ಹಾಸ್ಟೆಲ್ ವಾರ್ಡನ್ ಸೇರಿದಂತೆ ಮೂವರು ಶಂಕಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಬಾಲಕಿಯ ತಾಯಿ ನೀಡಿದ ದೂರಿನ ಪ್ರಕಾರ, ಎಂಟು ವರ್ಷದ ಮಗುವನ್ನು ಏಪ್ರಿಲ್ 19 ರಂದು ಭೋಪಾಲ್‌ನ ಖಾಸಗಿ ಬೋರ್ಡಿಂಗ್ ಶಾಲೆಯಲ್ಲಿ 2 ನೇ ತರಗತಿಗೆ ಸೇರಿಸಲಾಯಿತು. ಭಾನುವಾರ ವಿಡಿಯೋ ಕಾಲ್ ಮಾಡಿದ್ದ ಬಾಲಕಿ ಅಳಲು ಶುರು ಮಾಡಿದ್ದಳು ಬಳಿಕ ರಕ್ತಸ್ರಾವವಾಗುತ್ತಿರುವ ಬಗ್ಗೆಯೂ ಹೇಳಿದ್ದಳು. ಬಳಿಕ ವಾರ್ಡನ್ ಅರ್ಧಕ್ಕೆ ಕಾಲ್ ಕಟ್ ಮಾಡಿದ್ದರು. ಬೆಳಗಾಗುತ್ತಿದ್ದಂತೆ ತಾಯಿ ಮಗಳನ್ನು ಭೇಟಿಯಾಗಲು ಶಾಲೆಗೆ ಬಂದಿದ್ದಳು. ವಾರ್ಡನ್ ಅನ್ನ ಮತ್ತೆ ದಾಲ್ ತಿಂದು ಮಲಗಿದ್ದಾಳೆ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ:ನೆಲಮಂಗಲ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಅರೆಸ್ಟ್
ಗಂಟೆಗಳ ಬಳಿಕ ಎದ್ದ ಬಾಲಕಿ ಗಡ್ಡಧಾರಿಯೊಬ್ಬ ಆಕೆಯನ್ನು ರೂಮಿಗೆ ಕರೆದೊಯ್ದು ಏನೋ ಮಾಡಿದ್ದಾನೆ, ಆ ಕೋಣೆಯಲ್ಲಿ ಮತ್ತೊಬ್ಬ ವ್ಯಕ್ತಿಯೂ ಕೂಡ ಇದ್ದ ಎಂಬುದನ್ನು ತಿಳಿಸಿದ್ದಾಳೆ. ಬಳಿಕ ಪ್ರಜ್ಞೆ ತಪ್ಪಿ ಬಿದ್ದಿದ್ದಾಗಿ ತಿಳಿಸಿದ್ದಾಳೆ.
ಮರುದಿನ ಬೆಳಗ್ಗೆ ನನಗೆ ಪ್ರಜ್ಞೆ ಬಂದಾಗ ನಾನು ನನ್ನ ಕೋಣೆಯಲ್ಲಿದ್ದೆ, ತುಂಬಾ ಹೊಟ್ಟೆನೋವಿತ್ತು ಈ ಬಗ್ಗೆ ವಾರ್ಡನ್ಗೆ ತಿಳಿಸಿದೆ ಆದರೆ ಅವರು ನನಗೆ ಬೆದರಿಕೆ ಹಾಕಿದ್ದರು ಎಂದು ಬಾಲಕಿ ಹೇಳಿಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಭೋಪಾಲ್‌ನ ಜೈ ಪ್ರಕಾಶ್ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿಯ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.
ಆರೋಪಿಗಳನ್ನು ಗುರುತಿಸಲು ಹಾಸ್ಟೆಲ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಶಾಲೆಯ ಮಾಲೀಕರು ಆರೋಪವನ್ನು ತಳ್ಳಿಹಾಕಿದ್ದಾರೆ ಮತ್ತು ಈ ಬಗ್ಗೆ ನ್ಯಾಯಯುತ ತನಿಖೆಗೆ ಒತ್ತಾಯಿಸಿದ್ದಾರೆ.
ನಾವು ಕಳೆದ 28 ವರ್ಷಗಳಿಂದ ಶಾಲೆಯನ್ನು ನಡೆಸುತ್ತಿದ್ದೇವೆ. ಮಹಿಳೆ ಸೋಮವಾರ ತನ್ನ ಮಗಳನ್ನು ಕರೆದೊಯ್ದಿದ್ದರು ಆಕೆ ಬಾಲಕಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಂತೆ ಕಾಣುತ್ತಿತ್ತು ಎಂದು ಹೇಳಿದ್ದಾರೆ. ಅತ್ಯಾಚಾರ ದೃಢಪಟ್ಟು 24 ಗಂಟೆ ಕಳೆದರೂ ಪೊಲೀಸರು ದೂರು ದಾಖಲಿಸಿಲ್ಲ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ