ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಊಟದಲ್ಲಿ ಮಸಾಲೆ ವಡೆ

|

Updated on: Jan 22, 2025 | 2:06 PM

ಕರ್ನಾಟಕದಲ್ಲಿ ಅಂಬೊಡೆ ಎಂದೇ ಫೇಮಸ್ ಆಗಿರುವ ಮಸಾಲೆ ವಡೆ ಈಗ ತಿರುಪತಿಯಲ್ಲಿ ಸಿಗಲಿದೆ. ಈಗ, ತಿರುಮಲ ಶ್ರೀವಾರಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಇಲ್ಲಿನ ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಕೇಂದ್ರದ ಅನ್ನಪ್ರಸಾದ ಮೆನುವಿನಲ್ಲಿ ಪರಿಚಯಿಸಲಾದ ದಕ್ಷಿಣ ಭಾರತದ ಜನಪ್ರಿಯ ಖಾದ್ಯ ಮಸಾಲೆ ವಡಾವನ್ನು ಸವಿಯಬಹುದು.ಆ ನಂತರ ಭಕ್ತಾದಿಗಳು ಕೌಂಟರ್‌ಗಳಲ್ಲಿ ತಮಗೆ ಬೇಕಾದಷ್ಟು ಲಡ್ಡುಗಳನ್ನು ಖರೀದಿಸಬಹುದು.

ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಊಟದಲ್ಲಿ ಮಸಾಲೆ ವಡೆ
ಮಸಾಲೆ ವಡೆ
Image Credit source: Etv Bharat
Follow us on

ತಿರುಪತಿ ತಿಮ್ಮಪ್ಪನ ದೇವಸ್ಥಾನವು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಆದ್ದರಿಂದ ಶ್ರೀನಿವಾಸನ ದರ್ಶನ ಪಡೆಯಲು ದೇಶ, ವಿದೇಶಗಳಿಂದ ಜನರು ಬರುತ್ತಾರೆ. ತಿರುಪತಿ ಲಡ್ಡೆಂದರೆ ಎಲ್ಲರಿಗೂ ಪ್ರಿಯ. ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗೆ ಸ್ವಾಮಿಯ ಪ್ರಸಾದವಾಗಿ ಚಿಕ್ಕ ಲಡ್ಡುಗಳನ್ನು ನೀಡಲಾಗುತ್ತದೆ.

ಆ ನಂತರ ಭಕ್ತಾದಿಗಳು ಕೌಂಟರ್‌ಗಳಲ್ಲಿ ತಮಗೆ ಬೇಕಾದಷ್ಟು ಲಡ್ಡುಗಳನ್ನು ಖರೀದಿಸಬಹುದು. ಮತ್ತು ಸರತಿ ಸಾಲಿನಲ್ಲಿ ನಿಂತ ಸುಸ್ತಾಗಿರುವ ಭಕ್ತರಿಗೆ ಹೊಟ್ಟೆತುಂಬಾ ಊಟ ಹಾಕಲಾಗುತ್ತದೆ. ಈಗ ಭಕ್ತರಿಗಾಗಿ ನೀಡುವ ಅನ್ನ ಪ್ರಸಾದಕ್ಕೆ ಮಸಾಲೆ ವಡಾ ಕೂಡ ಸೇರ್ಪಡೆಯಾಗಿದೆ.

ಹೌದು, ಟಿಟಿಡಿ ವಿಶ್ವಸ್ಥ ಮಂಡಳಿಯ ನಿರ್ಣಯದಂತೆ ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಕೇಂದ್ರದ ಮೆನುವಿನಲ್ಲಿ ಮಸಾಲೆ ವಡೆ ಸೇರ್ಪಡೆಯಾಗಿದೆ. ಸೋಮವಾರದಿಂದ ಭಕ್ತರಿಗೆ ಬಡಿಸಲು ಆರಂಭಿಸಿದರು. ಮೊದಲ ದಿನ ಪ್ರಾಯೋಗಿಕವಾಗಿ ಐದು ಸಾವಿರ ವಡೆ ಬಡಿಸಲಾಯಿತು. ಇನ್ನೊಂದು ವಾರ ಪರಿಶೀಲನೆ ನಡೆಸಿ ಸಂಪೂರ್ಣ ಜಾರಿಯಾಗಲಿದೆ ಎಂದು ತಿಳಿಸಲಾಗಿದೆ.

ಮತ್ತಷ್ಟು ಓದಿ: ತಿರುಪತಿ ದೇವಸ್ಥಾನದ ಹುಂಡಿಯಿಂದ ಹಣ ಕದ್ದ ಭಕ್ತ; ಆಮೇಲೇನಾಯ್ತು?

ಅನೇಕ ಭಕ್ತರು ಅನ್ನಪ್ರಸಾದದ ಗುಣಮಟ್ಟ ಮತ್ತು ವಡೆ ಒದಗಿಸುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಇದೇ 10ರಿಂದ 19ರವರೆಗೆ ಶ್ರೀವಾರಿ ವೈಕುಂಠದ ಮೂಲಕ ಒಟ್ಟು 6.83 ಲಕ್ಷ ಮಂದಿ ದರ್ಶನ ಭಾಗ್ಯ ಪಡೆದರು.

ಪ್ರಾಯೋಗಿಕವಾಗಿ ಸೋಮವಾರ ಭಕ್ತಾದಿಗಳಿಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆ ತಯಾರಿಸಿದ 5000 ಮಸಾಲೆ ವಡಾಗಳನ್ನು ಬಡಿಸಲಾಯಿತು. ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಒಂದು ವಾರದವರೆಗೆ ಜನರಿಂದ ಪ್ರತಿಕ್ರಿಯೆಯನ್ನು ಪಡೆದ ನಂತರ ‘ಅನ್ನಪ್ರಸಾದ’ ಮೆನುವಿನಲ್ಲಿ ಸೇರ್ಪಡೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಿದೆ.

ಟಿಟಿಡಿ ಅಧ್ಯಕ್ಷರ ಶಿಫಾರಸ್ಸಿನಂತೆ ವಡಾವನ್ನು ಮೆನುವಿನಲ್ಲಿ ಸೇರಿಸಲು ಮಂಡಳಿ ನಿರ್ಧರಿಸಿದೆ. ಪ್ರಯೋಗಾರ್ಥವಾಗಿ ಭಕ್ತಾದಿಗಳಿಗೆ 5000 ಮಸಾಲೆ ವಡೆಗಳನ್ನು ಸಿಬ್ಬಂದಿ ಬಡಿಸಿದರು. ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆ ಮಸಾಲೆ ವಡೆಗಳನ್ನು ಮಾಡಲಾಗಿದೆ. ವಡೆಗಳು ರುಚಿಕರವಾಗಿವೆ ಎಂದು ಭಕ್ತರು ತೃಪ್ತಿ ವ್ಯಕ್ತಪಡಿಸಿದರು. ಹೊಸ ಮೆನುವನ್ನು ಸಂಪೂರ್ಣವಾಗಿ ಜಾರಿಗೊಳಿಸುವ ಮೊದಲು ಯಾವುದೇ ನ್ಯೂನತೆಗಳನ್ನು ಸರಿಪಡಿಸಲು ಎಲ್ಲಾ ವಿಮರ್ಶೆಗಳನ್ನು ಪರಿಗಣಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:59 pm, Wed, 22 January 25