ನಾಗಾಸಾಧುಗಳ ನೋಡಿ ಬಟ್ಟೆ ಬಿಚ್ಚಿ ಮರಳಿನಲ್ಲಿ ಉರುಳಾಡಿದ್ದ ವಿದೇಶಿ ಮಹಿಳೆ

ಇದು 2001ರಲ್ಲಿ ನಡೆದ ಕುಂಭಮೇಳದಲ್ಲಿ ನಡೆದ ಘಟನೆ ಅಂದು ಎಲ್ಲಾ ವರ್ಷಗಳಂತೆ ನಾಗಾಸಾಧುಗಳು ಮೊದಲ ರಾಜಸ್ನಾನ ಮಾಡಲು ನಡಿ ಬಳಿ ಬಂದಿದ್ದರು. ಇದೇ ಸಮಯದಲ್ಲಿ ವಿದೇಶಿ ಮಹಿಳೆಯೊಬ್ಬರು ನಾಗಾಸಾಧುಗಳನ್ನು ನೋಡಿದ ತಕ್ಷಣ ತನ್ನ ಬಟ್ಟೆಗಳನ್ನೆಲ್ಲಾ ತೆಗೆದು ನದಿಗೆ ಹಾರಿದ್ದಳು. ಬಳಿಕ ಸ್ನಾನ ಮಾಡಿ ಬಂದು ಮರಳಿನಲ್ಲಿ ಉರುಳಾಡಿದ್ದಳು. ಈಗ ಮಹಾಕುಂಭದ ಸಮಯದಲ್ಲಿ ಈ ಮಹಿಳೆಯ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

ನಾಗಾಸಾಧುಗಳ ನೋಡಿ ಬಟ್ಟೆ ಬಿಚ್ಚಿ ಮರಳಿನಲ್ಲಿ ಉರುಳಾಡಿದ್ದ ವಿದೇಶಿ ಮಹಿಳೆ
ನಾಗಾಸಾಧುಗಳುImage Credit source: NDTV
Follow us
ನಯನಾ ರಾಜೀವ್
|

Updated on:Jan 22, 2025 | 11:39 AM

ಮಹಾಕುಂಭದಲ್ಲಿ ನಾಗಾಸಾಧುಗಳು ಪವಿತ್ರ ಸ್ನಾನ ಮಾಡಿದ ಬಳಿಕವೇ ಉಳಿದ ಭಕ್ತರು ಪುಣ್ಯಸ್ನಾನ ಮಾಡಲು ಅವಕಾಶ ನೀಡುವುದು ವಾಡಿಕೆ. ಈ ಮಹಾಕುಂಭವಲ್ಲ 2001ರ ಕುಂಭಮೇಳದಲ್ಲಿ ನಡೆದ ಘಟನೆಯೊಂದು ಈಗ ಮತ್ತೆ ಸದ್ದು ಮಾಡುತ್ತಿದೆ. ಕುಂಭ ಮೇಳದ ಮೊದಲನೇ ದಿನ, ನಾಗಾಸಾಧುಗಳು ರಾಜಸ್ನಾನ ಮಾಡಲು ಆಗಮಿಸಿದ್ದರು.

ಹರಹರ ಮಹಾದೇವ್ ಎಂದು ಜಪಿಸುತ್ತಿದ್ದರು. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಇಳಿದ ತಕ್ಷಣ ಸುಮಾರು 25-30ರ ಆಸು ಪಾಸಿನ ವಿದೇಶಿ ಮಹಿಳೆ ಕೂಡ ತಕ್ಷಣ ತನ್ನ ಬಟ್ಟೆಗಳನ್ನು ತೆಗೆಯಲು ಆರಂಭಿಸಿದಳು, ಜನರು ಅರ್ಥಮಾಡಿಕೊಳ್ಳುವ ಮೊದಲೇ  ನೀರಿಗೆ ಹಾರಿದ್ದಳು.

ಸ್ವಲ್ಪ ಸಮಯದ ನಂತರ, ಮಹಿಳೆ ಸ್ನಾನ ಮುಗಿಸಿ ಹೊರಬಂದು ಸಂಗಮ ಬಳಿಯ ಮರಳಿನ ರಾಶಿಯ ಮೇಲೆ ಉರುಳಲು ಪ್ರಾರಂಭಿಸಿದಳು. ನಾಗಾಗಳನ್ನು ನೋಡಿದ ಅವಳು ತನ್ನ ಬೆತ್ತಲೆ ದೇಹಕ್ಕೆ ಮರಳನ್ನು ಉಜ್ಜಲು ಪ್ರಾರಂಭಿಸಿದಳು. ಅವಳನ್ನು ನೋಡಲು ಜನಸಾಗರವೇ ನೆರೆದಿತ್ತು. ನಂತರ ಕೆಲವು ಪೊಲೀಸ್ ಅಧಿಕಾರಿಗಳು ಅಲ್ಲಿಗೆ ಬಂದು ಆಕೆಗೆ ಕಂಬಳಿ ಹೊದಿಸಿ ತಮ್ಮೊಂದಿಗೆ ಕರೆದೊಯ್ದರು.

ಮತ್ತಷ್ಟು ಓದಿ: ಮಹಾಕುಂಭ ಮೇಳಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಸುಧಾಮೂರ್ತಿ

ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಆ ಮಹಿಳೆಯ ಚಿತ್ರಗಳನ್ನು ಪ್ರಕಟಿಸಿದೆ. ಆಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವಿತ್ತು. ರಾಜನಾಥ್ ಸಿಂಗ್ ಸಿಎಂ ಆಗಿದ್ದು, ಲಾಲ್ಜಿ ಟಂಡನ್ ಅವರಿಗೆ ಕುಂಭಮೇಳದ ಜವಾಬ್ದಾರಿ ನೀಡಲಾಗಿತ್ತು. ಮಹಿಳೆಯ ಚಿತ್ರಗಳನ್ನು ಪ್ರಕಟಿಸಿದ್ದಕ್ಕಾಗಿ ಲಾಲ್ಜಿ ಟಂಡನ್ ಮಾಧ್ಯಮಗಳ ವಿರುದ್ಧ ಕೋಪಗೊಂಡರು.

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾ ಕುಂಭ ಮೇಳದಲ್ಲಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದು 8.81 ಕೋಟಿಗೂ ಹೆಚ್ಚು ಭಕ್ತರು ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮಹಾಕುಂಭ ಮೇಳದ ಕೇಂದ್ರಬಿಂದುವೆಂದರೆ ಪವಿತ್ರ ಸ್ನಾನ ಅಥವಾ ಅಮೃತ ಸ್ನಾನ.

ಉತ್ತರ ಪ್ರದೇಶದ ಪ್ರಯಾಗ್‌ನಲ್ಲಿ 144 ವರ್ಷಗಳಿಗೆ ಒಮ್ಮೆ ನಡೆಯುವ ಈ ಮೇಳದ ವಿಶೇಷವೆಂದರೆ ಅದು ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುವುದು ಒಂದಾಗಿದೆ. ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ವಿಶೇಷವಾಗಿದೆ. ಸಣ್ಣ ದೋಣಿಯ ಮೂಲಕ ಹಿಂದೂ ತೀರ್ಥಯಾತ್ರೆಗಳನ್ನು ಇಲ್ಲಿನ ತ್ರಿವೇಣಿ ಸಂಗಮಕ್ಕೆ ಕರೆದುಕೊಂಡು ಹೋಗುವುದಕ್ಕೆ ವ್ಯವಸ್ಥೆ ಇದೆ. ಪುರೋಹಿತರು ಸಹ ಇಲ್ಲಿ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಇಲ್ಲಿ ತ್ರಿವೇಣಿ ಸಂಗಮ ಎನ್ನುವುದು ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಸಮಾಗಮವಾಗಿದೆ. ಈ ಸಂಗಮದಲ್ಲಿ ನೀವು ಸ್ನಾನ ಮಾಡುವುದರಿಂದ ಪುನರ್‌ಜನ್ಮಗಳ ಪಾಪ ಕಳೆಯುತ್ತದೆ ಎನ್ನುವುದು ನಂಬಿಕೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:36 am, Wed, 22 January 25

ದೊಡ್ಮನೆಯಲ್ಲಿ ‘ಮಜಾ ಟಾಕೀಸ್’ ತಂಡದ ಎಂಟ್ರಿ; ಎಲ್ಲಾ ಜಾಲಿ ಜಾಲಿ
ದೊಡ್ಮನೆಯಲ್ಲಿ ‘ಮಜಾ ಟಾಕೀಸ್’ ತಂಡದ ಎಂಟ್ರಿ; ಎಲ್ಲಾ ಜಾಲಿ ಜಾಲಿ
ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಟೀಮ್ ಇಂಡಿಯಾ
ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಟೀಮ್ ಇಂಡಿಯಾ
Daily Devotional: ಕಾಲಾಷ್ಠಮಿಯ ಮಹತ್ವ ಹಾಗೂ ವಿಶೇಷತೆ ತಿಳಿಯಿರಿ
Daily Devotional: ಕಾಲಾಷ್ಠಮಿಯ ಮಹತ್ವ ಹಾಗೂ ವಿಶೇಷತೆ ತಿಳಿಯಿರಿ
ಮೇಷ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲವಿದೆ
ಮೇಷ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲವಿದೆ
ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ