ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ (Sariska Tiger Reserve) ನಿನ್ನೆ ಆರಂಭವಾದ ಭಾರೀ ಬೆಂಕಿ 10 ಚದರ ಕಿ.ಮೀ.ಗೂ ಹೆಚ್ಚು ಪ್ರದೇಶಕ್ಕೆ ವ್ಯಾಪಿಸಿದೆ. ಈ ಬೆಂಕಿ ಸುಮಾರು 1,800 ಫುಟ್ಬಾಲ್ ಮೈದಾನಗಳ ಗಾತ್ರವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಭಾರತೀಯ ವಾಯುಪಡೆಯ (IAF) ಹೆಲಿಕಾಪ್ಟರ್‌ಗಳು ಬೆಂಕಿಗೆ ತುತ್ತಾದ ಪ್ರದೇಶದ ಮೇಲೆ ನೀರನ್ನು ಸಿಂಪಡಿಸುತ್ತಿವೆ. ಸರಿಸ್ಕಾ ಮೀಸಲು ಪ್ರದೇಶದಲ್ಲಿ 20ಕ್ಕೂ ಹೆಚ್ಚು ಹುಲಿಗಳಿವೆ. ವಿಜ್ಞಾನಿಗಳು ಟ್ರ್ಯಾಕಿಂಗ್ ಮಾಡಲು ST-17 ಎಂಬ ಕೋಡ್ ನೇಮ್ ಹೊಂದಿರುವ ಹುಲಿಯ ಪ್ರದೇಶವನ್ನು ಬೆಂಕಿ ವ್ಯಾಪಿಸಿದೆ. ಈ ಬೆಂಕಿಯಿಂದಾಗಿ ಹುಲಿಗಳು ಉಸಿರುಗಟ್ಟಬಹುದು ಎಂದು ತಜ್ಞರು ಹೇಳಿದ್ದಾರೆ.
ಅಗ್ನಿಶಾಮಕ ದಳದವರು ಪರಿಸ್ಥಿತಿಯನ್ನು ಹತೋಟಿಗೆ ತರಲು ಇನ್ನೂ ಸಾಧ್ಯವಾಗಿಲ್ಲ. ಎರಡು ಐಎಎಫ್ ಹೆಲಿಕಾಪ್ಟರ್‌ಗಳು ರಾಜಸ್ಥಾನದ ಸಿಲಿಸೆರ್ ಸರೋವರದಿಂದ ನೀರನ್ನು ಸಂಗ್ರಹಿಸುತ್ತಿವೆ ಮತ್ತು ಸರೋವರದಿಂದ 43 ಕಿ.ಮೀ ದೂರದಲ್ಲಿರುವ ಸರಿಸ್ಕಾದಲ್ಲಿ ಕಾಡ್ಗಿಚ್ಚಿನ ಮೇಲೆ ನೀರನ್ನು ಸುರಿಯಲಾಗುತ್ತಿದೆ.
ಹುಲಿ ಸಂರಕ್ಷಿತ ಪ್ರದೇಶದ ಸಮೀಪವಿರುವ ಮೂರು ಗ್ರಾಮಗಳಲ್ಲಿ ಗಾಳಿಯ ಪರಿಸ್ಥಿತಿಯಿಂದಾಗಿ 24 ಗಂಟೆಗಳ ಕಾಲ ಹೈ ಅಲರ್ಟ್ ಘೋಷಿಸಲಾಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿದುಬಂದಿಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಭಾರತದ ಉತ್ತರ ಭಾಗಗಳಲ್ಲಿ ತೀವ್ರವಾದ ಶಾಖದ ಅಲೆ ಕಂಡುಬಂದಿದೆ.
ಸರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ ದೊಡ್ಡ ಪ್ರದೇಶಗಳಲ್ಲಿ ಹರಡಿದ ಬೆಂಕಿಯನ್ನು ನಿಯಂತ್ರಿಸಲು ಸಹಾಯ ಮಾಡಲು ಅಲ್ವಾರ್ ಜಿಲ್ಲಾಡಳಿತವು SOS ಅನ್ನು ಕಳುಹಿಸಿದ ನಂತರ ಅವರು ಎರಡು Mi-17 V5 ಹೆಲಿಕಾಪ್ಟರ್‌ಗಳನ್ನು ಕಳುಹಿಸಿದ್ದಾರೆ ಎಂದು IAF ಹೇಳಿಕೆಯಲ್ಲಿ ತಿಳಿಸಿದೆ.
At the behest of Alwar Dist admin to help control the spread of fire over large areas of #SariskaTigerReserve, @IAF_MCC has deployed two Mi 17 V5 heptrs to undertake #BambiBucket ops.
Fire Fighting Operations are underway since early morning today.#आपत्सुमित्रम pic.twitter.com/HhGEHsdYrS
— Indian Air Force (@IAF_MCC) March 29, 2022
ರಾಜಸ್ಥಾನದ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಂಭವಿಸಿದ ಭಾರೀ ಬೆಂಕಿಯು 5ರಿಂದ 7 ಚದರ ಕಿ.ಮೀ ಅರಣ್ಯವನ್ನು ಆವರಿಸಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗಿನಿಂದಲೇ ಬೆಂಕಿ ನಂದಿಸುವ ಯತ್ನ ನಡೆಯುತ್ತಿದೆ. ಸೋಮವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ಈ ಪ್ರದೇಶದಲ್ಲಿ ಹುಲಿ ಸಂಚಾರಕ್ಕೆ ಅಡ್ಡಿಯಾಗಿದೆ. 150-200 ಜನರು ಮತ್ತು 2 ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳೊಂದಿಗೆ ಬೆಂಕಿಯನ್ನು ನಂದಿಸುವ ಪ್ರಯತ್ನಗಳು ನಡೆಯುತ್ತಿವೆ.
ಎರಡು ದಿನಗಳ ಹಿಂದೆ ಬೆಂಕಿ ಕಾಣಿಸಿಕೊಂಡ ಬಗ್ಗೆ ನಮಗೆ ಮಾಹಿತಿ ನೀಡಲಾಗಿತ್ತು. ಬೆಂಕಿಯನ್ನು ನಿಯಂತ್ರಿಸಲು ಸ್ಥಳೀಯರ ಸಹಾಯ ಪಡೆದುಕೊಂಡೆವು. ಸದ್ಯಕ್ಕೆ ಒಟ್ಟು 9 ಚದರ ಕಿ.ಮೀ ವಿಸ್ತೀರ್ಣ ಹೊತ್ತಿ ಉರಿದಿದೆ. ನಾವು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ. ಬೆಂಕಿ ನಂದಿಸಿದ ನಂತರ ಹಾನಿಯ ಬಗ್ಗೆ ಖಚಿತ ಪಡಿಸಲಾಗುವುದು ಎಂದು ಅಲ್ವಾರ್ ಡಿಎಫ್‌ಒ ಸುದರ್ಶನ್ ಶರ್ಮಾ ತಿಳಿಸಿದ್ದಾರೆ.
ಬೆಂಕಿಯನ್ನು ನಂದಿಸಲು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಬೆಂಕಿ ಅಗಾಧವಾಗಿದ್ದರಿಂದ ಸ್ಥಳೀಯರ ಶ್ರಮ ಸಾಕಾಗಲಿಲ್ಲ. ಹಾಗಾಗಿ ಜೈಪುರದ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅವರು ಬೆಂಕಿಯನ್ನು ನಂದಿಸಲು ದೆಹಲಿಯಿಂದ ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದ್ದಾರೆ.
ಇದನ್ನೂ ಓದಿ: ಬೆಳಗಿನ ಜಾವ ಹೊತ್ತಿ ಉರಿದ ಗುಜರಿ ಗೋದಾಮಿನಲ್ಲಿ ಒಂದೇ ಒಂದು ಬೆಂಕಿ ನಂದಿಸುವ ಉಪಕರಣವಿಲಿಲ್ಲ!
ತೆಲಂಗಾಣದ ಟಿಂಬರ್ ಡಿಪೋದಲ್ಲಿ ತಡರಾತ್ರಿ ಭೀಕರ ಅಗ್ನಿ ಅವಘಡ; 11 ಕಾರ್ಮಿಕರು ಸಜೀವ ದಹನ