AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯನ್ನು ಚುಡಾಯಿಸಿದ 7 ವರ್ಷದ ಬಾಲಕ, ತಮಾಷೆ ಎಂದು ಸುಮ್ಮನಿದ್ದರೆ ಕಿರುಕುಳವಾಗುತ್ತೆ ಎಂದ ಮಹಿಳೆ

ಮಹಿಳೆಯೊಬ್ಬರನ್ನು ಏಳು ವರ್ಷದ ಬಾಲಕ ಚುಡಾಯಿಸಿರುವ ಘಟನೆ ವರದಿಯಾಗಿದೆ. ಮಹಿಳೆ ಇನ್​​ಸ್ಟಾಗ್ರಾಂ(Instagram)ನಲ್ಲಿ ಪೋಸ್ಟ್​ ಮಾಡಿ ನಡೆದಿರುವ ಘಟನೆಯನ್ನು ವಿವರಿಸಿದ್ದಾರೆ. ಆಕೆ ಲಾಂಗ್ ಸ್ಕರ್ಟ್​ ಹಾಗೂ ಕೆಂಪು ಟಾಪ್ ಧರಿಸಿ ನಡೆಯುತ್ತಿರುವಾಗ ಆ ಬಾಲಕ ‘ಓ ಲಾಲ್ ಪರಿ’ ಎಂದು ಕಮೆಂಟ್ ಮಾಡಿದ್ದಾನೆ. ಆರಂಭದಲ್ಲಿ ತನಗೆ ಅಚ್ಚರಿಯಾಯಿತು ಏನು ತಿರುಗಿ ಹೇಳಬೇಕೆಂದೇ ಗೊತ್ತಾಗಲಿಲ್ಲ, ಸೊಸೈಟಿಯ ಭದ್ರತಾ ಸಿಬ್ಬಂದಿ ಕೂಡ ಅದನ್ನು ನೋಡಿ ನಗುತ್ತಿರುವುದು ಕಂಡೂ ಮತ್ತಷ್ಟು ಅಚ್ಚರಿಯಾಯಿತು.

ಮಹಿಳೆಯನ್ನು ಚುಡಾಯಿಸಿದ 7 ವರ್ಷದ ಬಾಲಕ, ತಮಾಷೆ ಎಂದು ಸುಮ್ಮನಿದ್ದರೆ ಕಿರುಕುಳವಾಗುತ್ತೆ ಎಂದ ಮಹಿಳೆ
ಮಹಿಳೆ Image Credit source: NDTV
ನಯನಾ ರಾಜೀವ್
|

Updated on: Aug 26, 2025 | 9:36 AM

Share

ಮಹಿಳೆಯೊಬ್ಬರನ್ನು ಏಳು ವರ್ಷದ ಬಾಲಕ ಚುಡಾಯಿಸಿರುವ ಘಟನೆ ವರದಿಯಾಗಿದೆ. ಮಹಿಳೆ ಇನ್​​ಸ್ಟಾಗ್ರಾಂ(Instagram)ನಲ್ಲಿ ಪೋಸ್ಟ್​ ಮಾಡಿ ನಡೆದಿರುವ ಘಟನೆಯನ್ನು ವಿವರಿಸಿದ್ದಾರೆ. ಆಕೆ ಲಾಂಗ್ ಸ್ಕರ್ಟ್​ ಹಾಗೂ ಕೆಂಪು ಟಾಪ್ ಧರಿಸಿ ನಡೆಯುತ್ತಿರುವಾಗ ಆ ಬಾಲಕ ‘ಓ ಲಾಲ್ ಪರಿ’ ಎಂದು ಕಮೆಂಟ್ ಮಾಡಿದ್ದಾನೆ. ಆರಂಭದಲ್ಲಿ ತನಗೆ ಅಚ್ಚರಿಯಾಯಿತು ಏನು ತಿರುಗಿ ಹೇಳಬೇಕೆಂದೇ ಗೊತ್ತಾಗಲಿಲ್ಲ, ಸೊಸೈಟಿಯ ಭದ್ರತಾ ಸಿಬ್ಬಂದಿ ಕೂಡ ಅದನ್ನು ನೋಡಿ ನಗುತ್ತಿರುವುದು ಕಂಡೂ ಮತ್ತಷ್ಟು ಅಚ್ಚರಿಯಾಯಿತು.

ಆಕೆ ಮತ್ತಷ್ಟು ಮುಂದಕ್ಕೆ ಹೋದಾಗ ಯಾರು ನೀನು, ನನ್ನ ಜತೆ ಬರ್ತೀಯಾ ಎಂದು ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆ. ಈ ಮಾತು ಕೇಳಿ ಮಹಿಳೆಗೆ ಕೋಪ ನೆತ್ತಿಗೇರಿ ಆ ಬಾಲಕನಿಗೆ ಬೈದಿದ್ದಾರೆ, ಆ ಸಮಯದಲ್ಲಿ ಭದ್ರತಾ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಆ ಹುಡುಗನಿಗೆ ಕ್ಷಮೆ ಯಾಚಿಸುವಂತೆ ಸೂಚಿಸಿದರು. ಆದರೆ ಆತ ಒಲ್ಲದ ಮನಸ್ಸಿನಿಂದಲೇ ಕ್ಷಮಿಸಿ ಎಂದು ಹೇಳಿ ಅಲ್ಲಿಂದ ಓಡಿ ಹೋಗಿದ್ದಾನೆಂದು ಮಹಿಳೆ ತಿಳಿಸಿದ್ದಾರೆ.

ಬೀದಿಗಳಲ್ಲಿ ಪುಂಡ-ಪೋಕರಿಗಳು ಹೆಣ್ಣುಮಕ್ಕಳನ್ನು ಚುಡಾಯಿಸಲು ಬಳಸುವ ಅದೇ ಸಾಲನ್ನು ಆರು-ಏಳು ವರ್ಷದ ಮಕ್ಕಳು ಬಳಸುತ್ತಿದ್ದಾರೆ ಎಂದರೆ ಈ ಸಮಾಜ ಎತ್ತ ಸಾಗುತ್ತಿದೆ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಭದ್ರತಾ ಸಿಬ್ಬಂದಿ ಬಾಲಕನ ಮಾತು ಕೇಳಿ ನಕ್ಕರೂ ಕೂಡ ನನಗೆ ಅದು ತಮಾಷೆ ಅನ್ನಿಸಲಿಲ್ಲ.

ಇನ್​​ಸ್ಟಾಗ್ರಾಂ ಪೋಸ್ಟ್​

View this post on Instagram

A post shared by Kiran Grewal (@quirkey_lyf)

ತಮಾಷೆ ಎಂದು ಸುಮ್ಮನಿದ್ದರೆ ನಂತರ ಅದು ಕಿರುಕುಳವಾಗಿ ಮುಂದುವರೆದೀತು ಎಂದು ಕಿರಣ್ ಗ್ರೆವಾಲ್ ಬರೆದಿದ್ದಾರೆ. ಭದ್ರತಾ ಸಿಬ್ಬಂದಿಯು ಆ ಬಾಲಕ ಉತ್ತಮ ಕುಟುಂಬದಿಂದ ಬಂದವನು, ಯಾವುದೇ ದುರುದ್ದೇಶವಿಲ್ಲ, ತಮಾಷೆಗಾಗಿ ಮಾಡಿದ್ದಾನೆಂದು ಹೇಳುವ ಮೂಲಕ ಪರಿಸ್ಥಿತಿ ಶಾಂತವಾಗಿಸಲು ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ನೊಯ್ಡಾ ವರದಕ್ಷಿಣೆ ಕಿರುಕುಳ ಪ್ರಕರಣ; ನಿಕ್ಕಿಯನ್ನು ಸುಟ್ಟು ಕೊಲ್ಲಲು 1 ತಿಂಗಳಿಂದ ರೆಡಿಯಾಗಿತ್ತು ಪ್ಲಾನ್!

ಈ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು, ಈ ಘಟನೆಯು ಭಾರತದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಪೋಷಕರ ಬಗ್ಗೆ ಕಳವಳ ವ್ಯಕ್ತಪಡಿಸಿತು.ಹಾಗೆಯೇ ನೀವು ಆ ಬಾಲಕನನ್ನು ತಡೆದು ಪೋಷಕರನ್ನು ಕರೆಸಿ ನಡೆದಿದ್ದನ್ನು ವಿವರಿಸಬೇಕಿತ್ತು ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ