ನವದೆಹಲಿ: ಭಾರತದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಅಗತ್ಯ ಔಷಧಿಗಳ ಬೆಲೆಯನ್ನು ಏಪ್ರಿಲ್ ತಿಂಗಳಿಂದ ಹೆಚ್ಚಿಸಲಿದೆ. ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯ (ಎನ್‌ಎಲ್‌ಇಎಂ) ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯುಪಿಐ) ಶೇ 10.7ರಷ್ಟು ಹೆಚ್ಚಳವನ್ನು ಘೋಷಿಸಿರುವುದರಿಂದ ಗ್ರಾಹಕರು ಏಪ್ರಿಲ್ನಿಂದ ಕೆಲವು ಅಗತ್ಯ ಔಷಧಿಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಇದರ ಅನುಸಾರ ಪ್ಯಾರಸಿಟಮಾಲ್ (Paracetamol), ಅಜಿಥ್ರೊಮೈಸಿನ್, ಫೆನೋಬಾರ್ಬಿಟೋನ್, ಸಿಪ್ರೊಫ್ಲೋಕ್ಸಾಸಿನ್ ಹೈಡ್ರೋಕ್ಲೋರೈಡ್, ಫೆನಿಟೋಯಿನ್ ಸೋಡಿಯಂ ಮತ್ತು ಮೆಟ್ರೋನಿಡಜೋಲ್ನಂತಹ ಒಟ್ಟು 800 ಜೀವ ಉಳಿಸುವ ಅಥವಾ ಅತ್ಯಗತ್ಯ ಔಷಧಿಗಳ ಬೆಲೆ ಏಪ್ರಿಲ್ 1ರಿಂದ ಹೆಚ್ಚಾಗಲಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಆರ್ಥಿಕ ಸಲಹೆಗಾರರ ಕಚೇರಿ ಒದಗಿಸಿದ ಸಗಟು ಬೆಲೆ ಸೂಚ್ಯಂಕ (WPI) ಡೇಟಾದ ಪ್ರಕಾರ, ಜ್ವರ, ಸೋಂಕುಗಳು, ಚರ್ಮ ರೋಗಗಳು, ಅಧಿಕ ರಕ್ತದೊತ್ತಡ, ರಕ್ತಹೀನತೆ ಮತ್ತು ಹೃದಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯಲ್ಲಿ ಸುಮಾರು 800 ನಿಗದಿತ ಔಷಧಿಗಳ ಬೆಲೆಗಳು ಏಪ್ರಿಲ್ 1ರಿಂದ ಶೇ. 10.7ರಷ್ಟು ಏರಿಕೆಯಾಗಲಿವೆ.
“ಔಷಧಗಳ (ಬೆಲೆ ನಿಯಂತ್ರಣ) ಆದೇಶ, 2013ರ ನಿಬಂಧನೆಗಳಿಗೆ ಅನುಸಾರವಾಗಿ ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲಾಗಿದೆ” ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಭಾರತದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಶುಕ್ರವಾರ ರಾಷ್ಟ್ರೀಯ ಅಗತ್ಯ ಔಷಧಿಗಳ (ಎನ್‌ಎಲ್‌ಇಎಂ) ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯುಪಿಐ) ಶೇ. 10.7ರಷ್ಟು ಬೆಲೆ ಏರಿಕೆಯನ್ನು ಘೋಷಿಸಿರುವುದರಿಂದ ಗ್ರಾಹಕರು ಕೆಲವು ಅಗತ್ಯ ಔಷಧಿಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: Vegetable Price: ಗಗನಕ್ಕೇರಿದ ಮೆಣಸಿನಕಾಯಿ ಬೆಲೆ; ತರಕಾರಿ ದರ ಹೇಗಿದೆ? ಇಲ್ಲಿದೆ ವಿವರ
Paracetamol: ದಿನವೂ ಪ್ಯಾರಾಸಿಟಮಾಲ್ ತಿನ್ನುವುದರಿಂದ ಹೃದಯಾಘಾತ, ಬಿಪಿ ಅಪಾಯ ಹೆಚ್ಚು!
Published On - 1:51 pm, Sat, 26 March 22