ಎಲ್ಲಾ ಪ್ಲ್ಯಾನ್ ಪ್ರಕಾರವೇ ನಡೆದಿತ್ತು: ಪ್ರಿಯಕರನೊಂದಿಗೆ ಸೇರಿ ಗಂಡನನ್ನು ರವಿತಾ ಕೊಂದಿದ್ಹೇಗೆ?

ಪ್ರಿಯಕರನೊಂದಿಗೆ ಸೇರಿ ರವಿತಾ ತನ್ನ ಗಂಡನನ್ನು ಕೊಂದಿದ್ದೇಕೆ, ಆಕೆಗೆ ಗಂಡನ ಮೇಲಿದ್ದ ದ್ವೇಷವೇನು ಎನ್ನುವ ಕುರಿತು ಆಕೆ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾಳೆ. ಅಮಿತ್​ನನ್ನು ಕತ್ತು ಹಿಸುಕಿ ಕೊಂದೆವು, ತಾನು ಅಮಿತ್ ನ ಕೈಗಳನ್ನು ಹಿಡಿದು ಬಾಯಿ ಮುಚ್ಚಿದೆ. ಅಮರ್‌ದೀಪ್ ಕತ್ತು ಹಿಸುಕಿ ಆತನನ್ನು ಕೊಲೆ ಮಾಡಿದ್ದ. ಹಾವು ಕಡಿತದಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದ್ದೆವು. ಹಾವು ಎಲ್ಲಿಂದ ಬಂತು ಮತ್ತು ಅದರ ಬೆಲೆ ಎಷ್ಟು ಎಂದು ಕೇಳಿದಾಗ, ಹಾವನ್ನು ತಂದವರು ಅಮರದೀಪ್ ಮಾತ್ರ ಏಕೆಂದರೆ ಅದು ಅವರಿಗೆ ಮಾತ್ರ ತಿಳಿದಿದೆ ಎಂದು ರವಿತಾ ಹೇಳಿದರು.

ಎಲ್ಲಾ ಪ್ಲ್ಯಾನ್ ಪ್ರಕಾರವೇ ನಡೆದಿತ್ತು:  ಪ್ರಿಯಕರನೊಂದಿಗೆ ಸೇರಿ ಗಂಡನನ್ನು ರವಿತಾ ಕೊಂದಿದ್ಹೇಗೆ?
ಆರೋಪಿ
Image Credit source: India Today

Updated on: Apr 18, 2025 | 2:28 PM

ಮೀರತ್ ಏಪ್ರಿಲ್ 18: ರವಿತಾ ಎಂಬ ಮಹಿಳೆ ತನ್ನ ಪ್ರಿಯಕರ ಅಮರ್​ದೀಪ್ ಸೇರಿ ಆಕೆಯ ಗಂಡ ಅಮಿತ್​ನನ್ನು ಪ್ಲ್ಯಾನ್​ ಮಾಡಿ ಹತ್ಯೆ(Murder) ಮಾಡಿದ್ದರು. ಹಾವು ಕಚ್ಚಿ ಸತ್ತಿದ್ದಾರೆಂದು ಬಿಂಬಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು. ಆಕೆ ಪತಿಯನ್ನು ಕೊಂದಿದ್ಹೇಗೆ ಎಂಬುದರ ಕುರಿತು ಎಳೆ ಎಳೆಯಾಗಿ ಸತ್ಯ ಬಾಯ್ಬಿಟ್ಟಿದ್ದಾಳೆ.

ರವಿತಾ ತನ್ನ ಪ್ರಿಯಕರನೊಂದಿಗೆ ಸೇರಿ ಅಮಿತ್​ನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಳು. ಆರೋಪದಿಂದ ತಪ್ಪಿಸಿಕೊಳ್ಳಲು ಹಾವಿನಿಂದ ಕಚ್ಚಿಸಿದ್ದಳು. ಹಾವು ಅಮಿತ್ ಮೇಲೆ 10 ಬಾರಿ ದಾಳಿ ಮಾಡಿತ್ತು ಆದರೆ ಹಾವಿಗೆ ಆತ ಸತ್ತಿದ್ದಾನೆಂದೇನು ಗೊತ್ತಿತ್ತು.

ಈಗ ರವಿತಾ ತಾನು ಮಾಡಿದ ಅಪರಾಧ ಒಪ್ಪಿಕೊಂಡಿದ್ದಾಳೆ. ತನ್ನ ಗಂಡನನ್ನು ಏಕೆ ಕೊಂದಳು ಎಂಬುದನ್ನೂ ಹೇಳಿದ್ದಾಳೆ. ಎಲ್ಲದಕ್ಕೂ ಅಮಿತ್​ನನ್ನೇ ದೂಷಿಸಿದ್ದಾಳೆ. ಆಕೆ ಮತ್ತು ಅಮರ್​ದೀಪ್ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪತಿ ತನ್ನೊಂದಿಗೆ ಜಗಳವಾಡುತ್ತಿದ್ದ, ಹೊಡೆಯುತ್ತಿದ್ದ, ಕೆಟ್ಟದಾಗಿ ವರ್ತಿಸುತ್ತಿದ್ದ. ಅಹಸ್ಯಕರ ರೀತಿಯಲ್ಲಿ ಮಾತನಾಡುತ್ತಿದ್ದ ಹೀಗಾಗಿ ಗಂಡನನ್ನು ಕೊಂದೆ ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ
ಆತ ಸತ್ತಿದ್ದು 10 ಬಾರಿ ಹಾವು ಕಚ್ಚಿದ್ದರಿಂದಲ್ಲ, ಅದು ಹೆಂಡತಿಯ ಪ್ಲ್ಯಾನ್
ಆಸ್ಪತ್ರೆಯಲ್ಲಿದ್ದರೂ ಬಿಡದೆ 5 ವರ್ಷದಲ್ಲಿ 11 ಬಾರಿ ಯುವತಿಗೆ ಕಚ್ಚಿದ ಹಾವು
ಘೋಷಿತ ಕಾಯಿಲೆಗಳ ಪಟ್ಟಿಗೆ ಹಾವು ಕಡಿತ ಸೇರ್ಪಡೆ: ಆರೋಗ್ಯ ಇಲಾಖೆ
Laughing Snake video : ಮುಗುಳ್ನಗೆ ಬೀರುವ ಹಾವನ್ನು ನೋಡಿದ್ದೀರಾ? ಈ ಹಾವು ಬಿದ್ದು ಬಿದ್ದು ನಗ್ತಾ ಇದೆ ನೋಡಿ, ಮನಸಾರೆ ನೀವೂ ನಗಬಹುದು!

ಮತ್ತಷ್ಟು ಓದಿ: 10 ಬಾರಿ ಕಚ್ಚಿ ವ್ಯಕ್ತಿಯ ಕೊಂದು ಶವದ ಪಕ್ಕದಲ್ಲಿಯೇ ಬೆಳಗ್ಗೆವರೆಗೂ ಮಲಗಿತ್ತು ಹಾವು

ಅಮಿತ್​ನನ್ನು ಕತ್ತು ಹಿಸುಕಿ ಕೊಂದೆವು, ತಾನು ಅಮಿತ್ ನ ಕೈಗಳನ್ನು ಹಿಡಿದು ಬಾಯಿ ಮುಚ್ಚಿದೆ. ಅಮರ್‌ದೀಪ್ ಕತ್ತು ಹಿಸುಕಿ ಆತನನ್ನು ಕೊಲೆ ಮಾಡಿದ್ದ. ಹಾವು ಕಡಿತದಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದ್ದೆವು. ಹಾವು ಎಲ್ಲಿಂದ ಬಂತು ಮತ್ತು ಅದರ ಬೆಲೆ ಎಷ್ಟು ಎಂದು ಕೇಳಿದಾಗ, ಹಾವನ್ನು ತಂದವರು ಅಮರದೀಪ್ ಮಾತ್ರ ಏಕೆಂದರೆ ಅದು ಅವರಿಗೆ ಮಾತ್ರ ತಿಳಿದಿದೆ ಎಂದು ರವಿತಾ ಹೇಳಿದರು.

ರವಿತಾ ಮೂರು ಮಕ್ಕಳ ತಾಯಿ, 8 ವರ್ಷಗಳ ಹಿಂದೆ ಅಮಿತ್ ಜತೆ ಆಕೆಯ ಮದುವೆಯಾಗಿತ್ತು. ಅಮರ್​ದೀಪ್​ ಜತೆ ಪ್ರೀತಿಯಲ್ಲಿ ಬಿದ್ದಾಗಿನಿಂದ ಮನೆ, ಕುಟುಂಬ ಮಕ್ಕಳ ಬಗ್ಗೆ ಕಾಳಜಿವಹಿಸುತ್ತಿರಲಿಲ್ಲ. ತನ್ನ ಕೈಯಿಂದಲೇ ತುಂಬಿದ ಕುಟುಂಬವನ್ನು ನಾಶಮಾಡಿ ಜೈಲು ಪಾಲಾಗಿದ್ದಾಳೆ.

ಘಟನೆ ಏನು?
ಅಮಿತ್ ಪೋಷಕರು ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಅಮಿತ್ ಸಾವನ್ನಪ್ಪಿದ್ದ, ಆತನ ಬಳಿ ಹಾವು ಕದಲದೇ ಮಲಗಿದ್ದ ಕಾರಣ ಜತೆಗೆ ಕೈ ಮೇಲೆ 10 ಕಡೆ ಹಾವು ಕಚ್ಚಿದ ಗುರುತಿದ್ದ ಕಾರಣ, ಆತ ಹಾವು ಕಚ್ಚಿಯೇ ಸತ್ತಿರಬೇಕು ಎಂದುಕೊಳ್ಳಲಾಯಿತು. ರವಿತಾ ಪ್ಲ್ಯಾನ್ ಕೂಡ ಅದೇ ಆಗಿತ್ತು. ಆದರೆ ಹಾವು ಕಚ್ಚಿದ ಮೇಲೆ ಓಡಿ ಹೋಗದೆ ಅಲ್ಲೇ ಯಾಕೆ ಇತ್ತು ಎನ್ನುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

ಪೊಲೀಸರು ಬಂದು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕೊಂಡೊಯ್ದಾಗ ಆತ ಸಾವನ್ನಪ್ಪಿದ್ದು, ಹಾವು ಕಡಿತದಿಂದಲ್ಲ ಉಸಿರುಗಟ್ಟಿಸುವಿಕೆಯಿಂದ ಎಂಬುದು ತಿಳಿದುಬಂದಿತ್ತು. ಮನೆಯ ಎಲ್ಲಾ ಸದಸ್ಯರ ತನಿಖೆ ನಡೆಸಿದಾಗ ರವಿತಾ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:26 pm, Fri, 18 April 25