AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಡ್​ ಬ್ಲಡೆಡ್ ಮರ್ಡರ್: ಆತ ಸತ್ತಿದ್ದು 10 ಬಾರಿ ಹಾವು ಕಚ್ಚಿದ್ದರಿಂದಲ್ಲ, ಅದು ಹೆಂಡತಿಯ ಪ್ಲ್ಯಾನ್

ಎರಡು ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಮೀರತ್​ನಲ್ಲಿ ವ್ಯಕ್ತಿಯೊಬ್ಬರು ಹಾವು ಕಚ್ಚಿ ಸಿತ್ತಿದ್ದಾರೆಂಬ ವರದಿ ಓಡಾಡಿತ್ತು. ಅವರಿಗೆ ಹಾವು ಕಚ್ಚಿರುವುದು ಸತ್ಯವಾಗಿದ್ದರೂ ಸಾವು ಉಸಿರುಕಟ್ಟುವಿಕೆಯಿಂದ ಸಂಭವಿಸಿದೆ ಎನ್ನುವ ವಿಚಾರ ಮರಣೋತ್ತರ ವರದಿಯಲ್ಲಿ ಬಹಿರಂಗಗೊಂಡಿದೆ. ಅಮಿತ್ ಬೆಡ್​ ಮೇಲೆ ಶವವಾಗಿ ಮಲಗಿದ್ದ, ಪಕ್ಕದಲ್ಲಿ ಹಾವಿತ್ತು, ಕೂಡಲೇ ಹಾವಾಡಿಗನನ್ನು ಕರೆಸಿ ಹಾವನ್ನು ಹಿಡಿಸಲಾಯಿತು. ಅಷ್ಟರೊಳಗೆ ದೇಹ ಹಸಿರುಗಟ್ಟಿತ್ತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಅಷ್ಟರೊಳಗೆ ಉಸಿರುಚೆಲ್ಲಿದ್ದ.

ಕೋಲ್ಡ್​ ಬ್ಲಡೆಡ್ ಮರ್ಡರ್: ಆತ ಸತ್ತಿದ್ದು 10 ಬಾರಿ ಹಾವು ಕಚ್ಚಿದ್ದರಿಂದಲ್ಲ, ಅದು ಹೆಂಡತಿಯ ಪ್ಲ್ಯಾನ್
ಹಾವು
ನಯನಾ ರಾಜೀವ್
|

Updated on:Apr 17, 2025 | 2:27 PM

Share

ಮೀರತ್, ಏಪ್ರಿಲ್​ 17: ಹಾವು(Snake) ಕಡಿತದಿಂದ ವ್ಯಕ್ತಿ ಸತ್ತಿದ್ದಾನೆಂದು ಬಿಂಬಿತವಾಗಿದ್ದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಮರಣೋತ್ತರ ಪರೀಕ್ಷೆ ವೇಳೆ ಅದು ಕೊಲೆ ಎಂದು ತಿಳಿದುಬಂದಿದೆ. ಮೀರತ್​ನಲ್ಲಿ ಮತ್ತೊಂದು ಕೊಲೆ ನಡೆದಿದೆ. ಮೀರತ್​ನ ಅಕ್ಬರ್​ಪುರ್ ಸಾದತ್ ಗ್ರಾಮದ ಅಮಿತ್ ಎಂಬಾತ ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆಯಾಗಿದ್ದ. ಆತನ ಹಾಸಿಗೆ ಮೇಲೆ ಹಾವಿತ್ತು, ಕೈಯಲ್ಲಿ ಹಾವು ಹಚ್ಚಿದ್ದ 10 ಗಾಯಗಳಿತ್ತು. ಹೀಗಾಗಿ ಮೇಲ್ನೋಟಕ್ಕೆ ಅದು ಹಾವು ಕಡಿತದಿಂದಾದ ಸಾವೆಂದು ಹೇಳಿದ್ದರೂ ಕೂಡ ಹಾವು ಕಚ್ಚಿ ಓಡಿ ಹೋಗದೆ ಅಲ್ಲೇ ಇರುವುದು ಅನುಮಾನ ಸೃಷ್ಟಿಸಿತ್ತು. ಅಮಿತ್ ಬೆಡ್​ ಮೇಲೆ ಶವವಾಗಿ ಮಲಗಿದ್ದ, ಪಕ್ಕದಲ್ಲಿ ಹಾವಿತ್ತು, ಕೂಡಲೇ ಹಾವಾಡಿಗನನ್ನು ಕರೆಸಿ

ಹಾವನ್ನು ಹಿಡಿಸಲಾಯಿತು. ಅಷ್ಟರೊಳಗೆ ದೇಹ ಹಸಿರುಗಟ್ಟಿತ್ತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಅಷ್ಟರೊಳಗೆ ಉಸಿರುಚೆಲ್ಲಿದ್ದ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು, ಅಲ್ಲಿ ಬಂದ ವರದಿಯಲ್ಲಿ ಅಮಿತ್ ಸಾವು ಹಾವಿನ ಕಡಿತದಿಂದಾಗಿಲ್ಲ, ಹಾವು ಕಡಿದಿರುವ 10 ಗಾಯಗಳಿವೆ, ಅದರ ಜತೆಗೆ ದೇಹದಲ್ಲೂ ಬೇರೆ ಗಾಯಗಳಿವೆ. ಉಸಿರುಗಟ್ಟಿಸುವಿಕೆಯಿಂದ ಅವರ ಸಾವು ಸಂಭವಿಸಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ
Image
ಆಸ್ಪತ್ರೆಯಲ್ಲಿದ್ದರೂ ಬಿಡದೆ 5 ವರ್ಷದಲ್ಲಿ 11 ಬಾರಿ ಯುವತಿಗೆ ಕಚ್ಚಿದ ಹಾವು
Image
ಘೋಷಿತ ಕಾಯಿಲೆಗಳ ಪಟ್ಟಿಗೆ ಹಾವು ಕಡಿತ ಸೇರ್ಪಡೆ: ಆರೋಗ್ಯ ಇಲಾಖೆ
Image
ಕನಸಿನಲ್ಲಿ ಹಾವು ಕಚ್ಚಿದರೆ ಅದು ಏನನ್ನು ಸೂಚಿಸುತ್ತದೆ?
Image
Laughing Snake video : ಮುಗುಳ್ನಗೆ ಬೀರುವ ಹಾವನ್ನು ನೋಡಿದ್ದೀರಾ? ಈ ಹಾವು ಬಿದ್ದು ಬಿದ್ದು ನಗ್ತಾ ಇದೆ ನೋಡಿ, ಮನಸಾರೆ ನೀವೂ ನಗಬಹುದು!

ಆಗ ಪೊಲೀಸರು ತನಿಖೆ ಆರಂಭಿಸಿದ್ದರು. ಸಾವಿಗೆ ಉಸಿರುಗಟ್ಟುವಿಕೆ ಕಾರಣ ಎಂದು ಹೇಳಲಾಗಿದ್ದರೂ, ಅಪರಾಧದ ನಿಖರವಾದ ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತಮ್ಮ ತನಿಖೆಯನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ. ಹಾವು ಕಡಿತದ ಕಥೆಯ ಬಗ್ಗೆ ಗ್ರಾಮಸ್ಥರು ಮೊದಲೇ ಅನುಮಾನಗಳನ್ನು ವ್ಯಕ್ತಪಡಿಸಿದ್ದರು, ಹಾವು ಕಡಿತ ಸಾವು ಮುಚ್ಚಿ ಹಾಕುವ ಕಟ್ಟು ಕಥೆಯಂತಿತ್ತು.

ಮತ್ತಷ್ಟು ಓದಿ: 10 ಬಾರಿ ಕಚ್ಚಿ ವ್ಯಕ್ತಿಯ ಕೊಂದು ಶವದ ಪಕ್ಕದಲ್ಲಿಯೇ ಬೆಳಗ್ಗೆವರೆಗೂ ಮಲಗಿತ್ತು ಹಾವು

ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದ್ದೇನು? ಅಮಿತ್ ಪತ್ನಿ ರವಿತಾ, ಅಮಿತ್ ಅವರ ಆಪ್ತ ಸ್ನೇಹಿತನೂ ಆಗಿದ್ದ ತನ್ನ ಪ್ರಿಯಕರ ಅಮರದೀಪ್ ಸಹಾಯದಿಂದ ಅವರ ಕೊಲೆಗೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ರವಿತಾ ಅಮರದೀಪ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾಳೆಂದು ಗ್ರಾಮೀಣ ಎಸ್ಪಿ ರಾಕೇಶ್ ಕುಮಾರ್ ಮಿಶ್ರಾ ಬಹಿರಂಗಪಡಿಸಿದ್ದಾರೆ, ಇದು ಅಂತಿಮವಾಗಿ ಅಮಿತ್ ಅವರಿಗೆ ತಿಳಿದುಬಂದಿತ್ತು, ಈ ವಿಚಾರವಾಗಿ ಜಗಳಗಳು ಆಗಾಗ ನಡೆಯುತ್ತಿದ್ದರು.

ತನ್ನ ಗಂಡನನ್ನು ಕೊಲ್ಲಲು ಮತ್ತು ಅನುಮಾನ ಬರದಂತೆ ತಡೆಯಲು, ರವಿತಾ ಎಚ್ಚರಿಕೆಯಿಂದ ಕೊಲೆಗೆ ಸಂಚು ರೂಪಿಸಿದ್ದಳು. 1,000 ರೂ.ಗೆ ಹಾವನ್ನು ಖರೀದಿಸಿ, ಅಮಿತ್ ಅವರನ್ನು ಕತ್ತು ಹಿಸುಕಿ ಕೊಂದು, ನಂತರ ಹಾವನ್ನು ಅವನ ದೇಹದ ಕೆಳಗೆ ಇಟ್ಟಿದ್ದಳು.

ಮಾರ್ಚ್​ 29ರಂದು ಮೀರತ್​ನಲ್ಲಿ ಸೌರಭ್ ಎಂಬಾತನನ್ನು ಪತ್ನಿ ಪ್ರಿಯಕರನ ಸಹಾಯದಿಂದ ಕೊಂದು ದೇಹವನ್ನು ತುಂಡಾಗಿ ಕತ್ತರಿಸಿ, ಪ್ಲಾಸ್ಟಿಕ್​ ಡ್ರಮ್​ನಲ್ಲಿರಿಸಿ ಸಿಮೆಂಟ್​ನಿಂದ ಸೀಲ್ ಮಾಡಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:23 pm, Thu, 17 April 25

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ