AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲಾನ್ ಮಸ್ಕ್ ಮತ್ತು ನರೇಂದ್ರ ಮೋದಿ ಫೋನ್ ಕರೆ; ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡೂ ದೇಶಗಳ ಸಹಭಾಗಿತ್ವ ಹೆಚ್ಚಿಸಲು ಮಾತುಕತೆ

Narendra Modi speaks with Elon Musk: ಇಲಾನ್ ಮಸ್ಕ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಏಪ್ರಿಲ್ 18, ಶುಕ್ರವಾರದಂದು ದೂರವಾಣಿಯಲ್ಲೇ ಮಾತುಕತೆ ನಡೆಸಿದ್ದಾರೆ. ತಂತ್ರಜ್ಞಾನ ಮತ್ತು ಇನ್ನೋವೇಶನ್ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ನಡುವೆ ಸಹಭಾಗಿತ್ವ ಸಾಧಿಸುವ ಕುರಿತು ಚರ್ಚೆ ನಡೆದಿದೆ. ಇಲಾನ್ ಮಸ್ಕ್ ಅವರ ಟೆಸ್ಲಾ ಸಂಸ್ಥೆಯ ಇವಿ ಕಾರುಗಳು ಭಾರತದ ಮಾರುಕಟ್ಟೆಗೆ ಬರುತ್ತಿರುವ ಹೊತ್ತಿನಲ್ಲಿ ಈ ಮಾತುಕತೆ ನಡೆದಿದೆ.

ಇಲಾನ್ ಮಸ್ಕ್ ಮತ್ತು ನರೇಂದ್ರ ಮೋದಿ ಫೋನ್ ಕರೆ; ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡೂ ದೇಶಗಳ ಸಹಭಾಗಿತ್ವ ಹೆಚ್ಚಿಸಲು ಮಾತುಕತೆ
ಇಲಾನ್ ಮಸ್ಕ್, ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 18, 2025 | 3:02 PM

Share

ನವದೆಹಲಿ, ಏಪ್ರಿಲ್ 18: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಕಟವರ್ತಿ, ಸ್ಪೇಸ್ ಎಕ್ಸ್ ಸಿಇಒ ಇಲಾನ್ ಮಸ್ಕ್ ಅವರೊಂದಿಗೆ ನರೇಂದ್ರ ಮೋದಿ (Narendra Modi) ಇಂದು ಶುಕ್ರವಾರ ದೂರವಾಣಿಯಲ್ಲಿ ಮಾತನಾಡಿದ್ದಾರೆ. ತಂತ್ರಜ್ಞಾನ ಮತ್ತು ನಾವೀನ್ಯತೆಯ (tech and innovation) ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಸಹಭಾಗಿತ್ವ (collaboration) ಹಾಗು ಹೊಂದಾಣಿಕೆಯನ್ನು ಮತ್ತಷ್ಟು ಬಲಪಡಿಸುವುದು ಸೇರಿದಂತೆ ಹಲವು ವಿಚಾರಗಳನ್ನು ಇಬ್ಬರೂ ಈ ಮಾತುಕತೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಆದರೆ, ನಿರ್ದಿಷ್ಟವಾಗಿ ಯಾವ ಮಾತುಕತೆ ನಡೆಸಲಾಯಿತು ಎಂಬುದು ಗೊತ್ತಾಗಿಲ್ಲ. ಇಲಾನ್ ಮಸ್ಕ್ ಅವರ ಟೆಸ್ಲಾ ಕಾರುಗಳನ್ನು ಭಾರತದಲ್ಲಿ ಆಮದು ಮಾಡಲು ಎಲ್ಲಾ ಸಿದ್ಧತೆ ನಡೆದಿರುವ ಹೊತ್ತಿನಲ್ಲಿ ಈ ಮಾತುಕತೆ ನಡೆದಿರುವುದು ಕುತೂಹಲ ಮೂಡಿಸಿದೆ.

ಒಂದೆಡೆ ಭಾರತದಲ್ಲಿ ತಂತ್ರಜ್ಞಾನದ ಇಕೋಸಿಸ್ಟಂ ಬಲಿಷ್ಠಗೊಳ್ಳುತ್ತಿದೆ. ಮತ್ತೊಂದೆಡೆ, ಇಲಾನ್ ಮಸ್ಕ್ ಅವರ ಸಂಸ್ಥೆಗಳಿಂದ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಎರಡು ದೇಶಗಳ ಮಧ್ಯೆ ಹೊಂದಾಣಿಕೆ ಸಾಧ್ಯತೆಗಳನ್ನು ಇಬ್ಬರೂ ಚರ್ಚಿಸಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾದ ಅಬ್ಬಾಟ್ ಪೋರ್ಟ್​ನಲ್ಲಿನ NQXT ಟರ್ಮಿನಲ್ ಖರೀದಿಸಿದ ಅದಾನಿ ಕಂಪನಿ

ಇದನ್ನೂ ಓದಿ
Image
ಆಸ್ಟ್ರೇಲಿಯಾದಲ್ಲಿ ಪೋರ್ಟ್ ಟರ್ಮಿನಲ್​​ ಖರೀದಿಸಿದ ಅದಾನಿ ಪೋರ್ಟ್ಸ್
Image
ಟಾಟಾ ಸನ್ಸ್​​ನಿಂದ ಬ್ರಿಟನ್​​ನಲ್ಲಿ ಅತಿದೊಡ್ಡ ಬ್ಯಾಟರಿ ಫ್ಯಾಕ್ಟರಿ
Image
ಭಾರತದಿಂದ ಆಹಾರವಸ್ತುಗಳ ರಫ್ತಿನಲ್ಲಿ ದಾಖಲೆ ಏರಿಕೆ
Image
ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಭಾರತದ ಗಂಭೀರ ಹೆಜ್ಜೆ

ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್​​ವೊಂದರಲ್ಲಿ, ಮಸ್ಕ್ ಜೊತೆಗಿನ ದೂರವಾಣಿ ಮಾತುಕತೆ ವಿಚಾರ ಪ್ರಸ್ತಾಪಿಸಿದ್ದಾರೆ.

‘ಇಲಾನ್ ಮಸ್ಕ್ ಅವರೊಂದಿಗೆ ಮಾತನಾಡಿದೆ. ಈ ಹಲವು ವಿಷಯಗಳ ಬಗ್ಗೆ ಮಾತನಾಡಿದೆವು. ಈ ವರ್ಷದ ಆರಂಭದಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ನಮ್ಮ ಭೇಟಿ ವೇಳೆ ಚರ್ಚಿಸಲಾಗಿದ್ದ ವಿಷಯಗಳೂ ಸೇರಿದಂತೆ ಹಲವು ವಿಚಾರಗಳು ಬಂದವು. ತಂತ್ರಜ್ಞಾನ ಮತ್ತು ಇನ್ನೋವೇಶನ್ ಕ್ಷೇತ್ರದಲ್ಲಿ ಹೊಂದಾಣಿಕೆ ಸಾಧ್ಯತೆಯನ್ನು ಚರ್ಚಿಸಿದೆವು. ಈ ಕ್ಷೇತ್ರದಲ್ಲಿ ಅಮೆರಿಕದ ಜೊತೆ ಸಹಭಾಗಿತ್ವವನ್ನು ಹೆಚ್ಚಿಸಲು ಭಾರತ ಬದ್ಧವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎರಡು ತಿಂಗಳ ಹಿಂದೆ (ಫೆಬ್ರುವರಿ) ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಎರಡು ದಿನದ ಭೇಟಿ ಮಾಡಿದ್ದರು. ಮೊದಲ ದಿನವೇ ಅವರು ಇಲಾನ್ ಮಸ್ಕ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಇಲಾನ್ ಮಸ್ಕ್ ಅವರ ಮೂವರು ಮಕ್ಕಳಾದ ಎಕ್ಸ್, ಸ್ಟ್ರೈಡರ್ ಮತ್ತು ಅಜುರೆ ಅವರೂ ಇದ್ದರು. ಆಗ ಯಾವ ವಿಚಾರದ ಬಗ್ಗೆ ಚರ್ಚೆಯಾಯಿತು ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ಬ್ರಿಟನ್​​ನ ಅತಿದೊಡ್ಡ ಬ್ಯಾಟರಿ ಫ್ಯಾಕ್ಟರಿ ನಿರ್ಮಿಸಲಿರುವ ಭಾರತೀಯ ಕಂಪನಿ; ಟಾಟಾ ಸನ್ಸ್​​ಗೆ 750 ಮಿಲಿಯನ್ ಪೌಂಡ್ ಸಾಲ ಸೌಲಭ್ಯ

ಭಾರತದಲ್ಲಿ ಟೆಸ್ಲಾಗೆ ಮಾರುಕಟ್ಟೆ ಸೃಷ್ಟಿಸಲು ಇಲಾನ್ ಮಸ್ಕ್ ಯತ್ನ?

ಇಲಾನ್ ಮಸ್ಕ್ ಅವರ ಟೆಸ್ಲಾ ಸಂಸ್ಥೆಗೆ ಈಗ ಭಾರತದ ಮಾರುಕಟ್ಟೆ ಬಹಳ ಅಗತ್ಯವಾಗಿದೆ. ಚೀನಾದಲ್ಲಿ ಅಲ್ಲಿಯ ಕಂಪನಿಗಳೇ ಈಗ ಎಲೆಕ್ಟ್ರಿಕ್ ಕಾರು ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಿವೆ. ವಿಶ್ವದ ನಂಬರ್ ಒನ್ ಇವಿ ಸಂಸ್ಥೆಯಾದ ಬಿವೈಡಿ ಭಾರತಕ್ಕೆ ಬರಬಹುದು ಎನ್ನುವ ಸುದ್ದಿಯಂತೂ ಹರಿದಾಡುತ್ತಿದೆ. ಬಿವೈಡಿ ಇದನ್ನು ತಳ್ಳಿಹಾಕಿದರೂ, ಭವಿಷ್ಯದಲ್ಲಿ ಅದು ಬರುವ ಸಾಧ್ಯತೆ ಇಲ್ಲದಿಲ್ಲ.

ಚೀನಾದಲ್ಲಿ ಟೆಸ್ಲಾ ನಾಲ್ಕೈದು ಸ್ಥಾನಕ್ಕೆ ಕುಸಿದಿದೆ. ಈಗ ಭಾರತದ ಮಾರುಕಟ್ಟೆ ಬಹಳ ಅಗತ್ಯ ಎನಿಸಿದೆ. ಭಾರತದಲ್ಲಿ ಇವಿ ಬೆಳೆಯುತ್ತಿರುವ ಮಾರುಕಟ್ಟೆ. ಟೆಸ್ಲಾ ಸಂಸ್ಥೆ ಒಂದೆರಡು ವರ್ಷದ ಬಳಿಕ ಭಾರತದಲ್ಲಿ ಫ್ಯಾಕ್ಟರಿ ತೆರೆಯಬಹುದು. ಅಲ್ಲಿಯವರೆಗೆ, ರಿಯಾಯಿತಿ ಆಮದು ಸುಂಕದೊಂದಿಗೆ ಟೆಸ್ಲಾ ಕಾರುಗಳು ಭಾರತಕ್ಕೆ ಆಮದಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Fri, 18 April 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!