Meghalaya TMC Manifesto 2023: ಮೇಘಾಲಯದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಟಿಎಂಸಿ: ನೀಡಿರುವ ಭರವಸೆಗಳೇನು?

ತೃಣಮೂಲ ಕಾಂಗ್ರೆಸ್ ಮುಂಬರುವ ಮೇಘಾಲಯ ವಿಧಾನಸಭಾ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು. ಹಲವು ಭರವಸೆಗಳನ್ನು ನೀಡಿದೆ. ಟಿಎಂಸಿಯು ಪ್ರಣಾಳಿಕೆಯಲ್ಲಿ ಐದು ವರ್ಷಗಳಲ್ಲಿ 3 ಲಕ್ಷ ಉದ್ಯೋಗವನ್ನು ಸೃಷ್ಟಿಸುವುದಾಗಿ ಹೇಳಿದೆ.

Meghalaya TMC Manifesto 2023: ಮೇಘಾಲಯದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಟಿಎಂಸಿ: ನೀಡಿರುವ ಭರವಸೆಗಳೇನು?
ಟಿಎಂಸಿ ಪ್ರಣಾಳಿಕೆImage Credit source: ANI
Follow us
ನಯನಾ ರಾಜೀವ್
|

Updated on: Jan 25, 2023 | 3:24 PM

ತೃಣಮೂಲ ಕಾಂಗ್ರೆಸ್ ಮುಂಬರುವ ಮೇಘಾಲಯ ವಿಧಾನಸಭಾ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು. ಹಲವು ಭರವಸೆಗಳನ್ನು ನೀಡಿದೆ. ಟಿಎಂಸಿಯು ಪ್ರಣಾಳಿಕೆಯಲ್ಲಿ ಐದು ವರ್ಷಗಳಲ್ಲಿ 3 ಲಕ್ಷ ಉದ್ಯೋಗವನ್ನು ಸೃಷ್ಟಿಸುವುದಾಗಿ ಹೇಳಿದೆ. ಯುವ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಈ ಯೋಜನೆಯಲ್ಲಿ 21-40 ವರ್ಷದೊಳಗಿನ ಪ್ರತಿ ನಿರುದ್ಯೋಗಿ ಯುವಕರಿಗೆ ಮಾಸಿಕ 1 ಸಾವಿರ ರೂ ನೀಡಲಾಗುವುದು ಎಂದು ತಿಳಿಸಿದೆ. ಮಹಿಳಾ ಸಬಲೀಕರಣದ ಉದ್ದೇಶದಿಂದ ಪ್ರತಿ ಮನೆಗಳಿಗೆ 1 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುವುದು, ಪ್ರಣಾಳಿಕೆಯು ಅಂಗವಿಕಲರು, ಒಂಟಿ ತಾಯಂದಿರು, ವಿಧವೆಯರು ಹಾಗೂ ಹಿರಿಯ ನಾಗರಿಕರಿಗೆ ಸಮಾಜ ಕಲ್ಯಾಣ ಪಿಂಚಣಿಗಳ ಹೆಚ್ಚಳದೊಂದಿಗೆ ಎಲ್ಲರಿಗೂ ಸಾಮಾಜಿಕ ಭದ್ರತೆಯ ಭರವಸೆಯನ್ನು ನೀಡಿತು.

ಟಿಎಂಸಿ ಎಲ್ಲರಿಗೂ ಇ-ಪಡಿತರ ಕಾರ್ಡ್​ಗಳನ್ನು ಮತ್ತು ಯೋಜನೆಯಲ್ಲಿ ಒಳಗೊಂಡಿರುವ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಲು ಎಲ್ಲಾ ಜಿಲ್ಲೆಗಳಲ್ಲಿ ಮರು ಸಮೀಕ್ಷೆ ಮಾಡುವ ಭರವಸೆ ನೀಡಿದೆ. ಹೊಸ ಯೋಜನೆಗಳನ್ನು ಪರಿಚಯಿಸುವ ಮೂಲಕ ರಾಜ್ಯದ ಎಲ್ಲಾ ರೈತರಿಗೆ 10 ಸಾವಿರ ರೂ.ಗಳ ಆರ್ಥಿಕ ನೆರವು ನೀಡಲಾಗುವುದು.

ಆರೋಗ್ಯ ಕ್ಷೇತ್ರದ ಮೇಲೆ ಕೇಂದ್ರೀಕರಿಸಿದ ಪ್ರಣಾಳಿಕೆಯು ಪ್ರತಿ ಬ್ಲಾಕ್​ನಲ್ಲಿ ತಾಯಿ ಹಾಗೂ ಮಕ್ಕಳ ಆರೈಕೆ ಕೇಂದ್ರಗಳನ್ನು ಸಮರ್ಥ ಪೋಷಕ ಮತ್ತು ಪ್ರಸವೋತ್ತರ ಸೇವೆಗಳನ್ನು ಒದಗಿಸುವ ಭರವಸೆ ನೀಡಿದೆ.

ನಾಗರಿಕ ಸೌಲಭ್ಯಗಳಲ್ಲಿ ಟಿಎಂಸಿಯು ಎಲ್ಲಾ ಮನೆಗಳಿಗೆ ಪೈಪ್​ಲೈನ್ ಕುಡಿಯುವ ನೀರಿನ ಸಂಪರ್ಕವನ್ನು ಸುಗಮಗೊಳಿಸುವುದಾಗಿ ಭರವಸೆ ನೀಡಿದೆ. ರಾಜ್ಯದ ಎಲ್ಲಾ 6459 ಗ್ರಾಮಗಳನ್ನು ಬ್ಲಾಕ್ ಟಾಪ್ ಮೋಟಾರಬಲ್ ರಸ್ತೆಗಳೊಂದಿಗೆ ಸಂಪರ್ಕಿಸಲಾಗುವುದು ಮತ್ತು ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಿದೆ.

ಮೇಘಾಲಯದಲ್ಲಿ ವಿಧಾನಸಭಾ ಚುನಾವಣೆಯು ಫೆಬ್ರವರಿ 27 ರಂದು ನಡೆಯಲಿದೆ, ಮುಂಬರುವ ಚುನಾವಣೆಗೆ ಟಿಎಂಸಿಯ ಸಿದ್ಧತೆಗಳ ಕುರಿತು ಪಕ್ಷದ ರಾಷ್ಟ್ರೀಯ ವಕ್ತಾರ ಪ್ರಕಾಶ್ ಮಜುಂದಾರ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಆಚೆಗೂ ತನ್ನ ರಾಜಕೀಯ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ತೃಣಮೂಲ ತ್ರಿಪುರಾ ಚುನಾವಣೆಗೆ ಸಂಬಂಧಿಸಿದಂತೆ ಸಂದಿಗ್ಧ ಸ್ಥಿತಿಯಲ್ಲಿರಬಹುದು ಆದರೆ ಮಮತಾ ಬ್ಯಾನರ್ಜಿ ಎರಡು ಬಾರಿ ಮೇಘಾಲಯಕ್ಕೆ ಭೇಟಿ ನೀಡಿರುವುದರಿಂದ ಭರವಸೆ ಇದೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ