ರಾಮಲಲ್ಲಾನ ವಿಗ್ರಹಗಳೆಲ್ಲವೂ ಚೆನ್ನಾಗಿವೆ, ಒಂದನ್ನು ಆಯ್ಕೆ ಮಾಡುವುದು ಕಷ್ಟ: ಚಂಪತ್ ರಾಯ್

|

Updated on: Dec 29, 2023 | 9:05 PM

ಇಂದು ಟ್ರಸ್ಟ್ ಸಭೆ ಇತ್ತು, ಎಲ್ಲಾ ಟ್ರಸ್ಟಿಗಳು ರಾಮಲಲ್ಲಾ ಪ್ರತಿಮೆಯನ್ನು ನೋಡಿದ್ದು ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಪ್ರತಿಮೆಯನ್ನು ತುಂಬಾ ಚೆನ್ನಾಗಿ ನಿರ್ಮಿಸಲಾಗಿದೆ. ಮೂರೂ ಪ್ರತಿಮೆಗಳನ್ನು ಎಷ್ಟು ಚೆನ್ನಾಗಿ ಮಾಡಲಾಗಿದೆ, ಒಂದನ್ನು ಆಯ್ಕೆ ಮಾಡುವುದು ಕಷ್ಟವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

ರಾಮಲಲ್ಲಾನ ವಿಗ್ರಹಗಳೆಲ್ಲವೂ ಚೆನ್ನಾಗಿವೆ, ಒಂದನ್ನು ಆಯ್ಕೆ ಮಾಡುವುದು ಕಷ್ಟ: ಚಂಪತ್ ರಾಯ್
ಚಂಪತ್ ರಾಯ್
Follow us on

ಅಯೋಧ್ಯೆ ಡಿಸೆಂಬರ್ 29 : ಅಯೋಧ್ಯೆಯ (Ayodhya) ರಾಮ ಮಂದಿರದ (Ram mandir) ಆಡಳಿತ ಮಂಡಳಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸದಸ್ಯರು (Shri Ram Janmabhoomi Teerth Kshetra)ಡಿಸೆಂಬರ್ 29 ರಂದು ದೇವಸ್ಥಾನದ ಗರ್ಭ ಗೃಹದಲ್ಲಿ ಪ್ರತಿಷ್ಠಾಪಿಸಲಿರುವ ವಿಗ್ರಹದ ಬಗ್ಗೆ ಚರ್ಚಿಸಲು ಸಭೆ ನಡೆಸಿದರು. ಪ್ರಮುಖವಾಗಿ ಮೂರು ವಿಗ್ರಹಗಳಿದ್ದು, ಒಂದನ್ನು ಅಂತಿಮಗೊಳಿಸಲಾಗುವುದು. ಟ್ರಸ್ಟ್‌ನ ಸದಸ್ಯರಾದ ಸ್ವಾಮಿ ಪರಮಾನಂದ ಅವರು ಟಿವಿ9 ಭಾರತವರ್ಷದೊಂದಿಗೆ ಮಾತನಾಡುತ್ತಾ, ಭಗವಾನ್ ರಾಮನ ಮೂರೂ ವಿಗ್ರಹಗಳು ಸುಂದರವಾಗಿವೆ. ಸಭೆಯಲ್ಲಿ ಟ್ರಸ್ಟ್ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಲಿಖಿತವಾಗಿ ಹಂಚಿಕೊಂಡರು. ಟ್ರಸ್ಟ್‌ನ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ್ ದಾಸ್ ಅವರೊಂದಿಗೆ ವಿಗ್ರಹವನ್ನು ಅಂತಿಮಗೊಳಿಸುವ ಕುರಿತು ಚರ್ಚೆ ನಡೆಸಲಾಯಿತು ಎಂದು ಅವರು ಹೇಳಿದರು.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾತನಾಡಿ, “ಇಂದು ಟ್ರಸ್ಟ್ ಸಭೆ ಇತ್ತು, ಎಲ್ಲಾ ಟ್ರಸ್ಟಿಗಳು ರಾಮಲಲ್ಲಾ ಪ್ರತಿಮೆಯನ್ನು ನೋಡಿದ್ದು ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಪ್ರತಿಮೆಯನ್ನು ತುಂಬಾ ಚೆನ್ನಾಗಿ ನಿರ್ಮಿಸಲಾಗಿದೆ. ಮೂರೂ ಪ್ರತಿಮೆಗಳನ್ನು ಎಷ್ಟು ಚೆನ್ನಾಗಿ ಮಾಡಲಾಗಿದೆ, ಒಂದನ್ನು ಆಯ್ಕೆ ಮಾಡುವುದು ಕಷ್ಟವಾಗಿದೆ ಎಂದಿದ್ದಾರೆ.


ಎಲ್ಲಾ ಮೂರು ವಿಗ್ರಹಗಳನ್ನು ದೇಶದ ಪ್ರಸಿದ್ಧ ಶಿಲ್ಪಿಗಳು ತಯಾರಿಸಿದ್ದಾರೆ. ಈ ಮೂರರಲ್ಲಿ ಒಂದನ್ನು ದೇವಾಲಯದಲ್ಲಿ ಇರಿಸಲಾಗುವುದು.

ಮೂರು ವಿಗ್ರಹಗಳ ಯಾವುವು?

ಮೂರರಲ್ಲಿ ಒಂದನ್ನು ಮೈಸೂರು ಮೂಲದ ಅರುಣ್ ಯೋಗಿರಾಜ್ ತಯಾರಿಸಿದ್ದಾರೆ. ಎರಡನೇ ವಿಗ್ರಹವನ್ನು ಬೆಂಗಳೂರಿನ ಜೆಎಲ್ ಭಟ್ ನಿರ್ಮಿಸಿದ್ದಾರೆ. ಅಂತೆಯೇ, ಮೂರನೆಯದನ್ನು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ನಿರ್ಮಿಸಿದ್ದಾರೆ. ಎಲ್ಲಾ ಮೂರು ವಿಗ್ರಹಗಳು ಭಗವಾನ್ ರಾಮನ ಬಾಲ್ಯವನ್ನು ಚಿತ್ರಿಸುತ್ತವೆ.

ಪ್ರತ್ಯೇಕ ಶಿಲ್ಪಿಗಳು ಮಾಡಿದ ಎಲ್ಲಾ ಮೂರು ವಿನ್ಯಾಸಗಳನ್ನು ಮೇಜಿನ ಮೇಲೆ ಇಡಲಾಗುತ್ತದೆ. ಹೆಚ್ಚು ಮತಗಳನ್ನು ಪಡೆಯುವ ಒಂದು ವಿಗ್ರಹವನ್ನು ಜನವರಿ 22 ರಂದು ದೇಗುಲದ ಮಹಾಮಸ್ತಕಾಭಿಷೇಕದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ:ಅಯೋಧ್ಯೆ ರಾಮಮಂದಿರಕ್ಕೆ ಕಾಶಿ ಮತ್ತು ಪ್ರಯಾಗ್ ರಾಜ್ ಭಿಕ್ಷುಕರಿಂದ 4 ಲಕ್ಷ ದೇಣಿಗೆ

ಆಯ್ಕೆಯ ಮಾನದಂಡ

ಮೂರೂ ವಿಗ್ರಹಗಳು 51 ಇಂಚು ಎತ್ತರವಿದ್ದು, ಅವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಲಾಗುವುದು ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಬುಧವಾರ ಹೇಳಿದ್ದಾರೆ. ಮೂರು ವಿಗ್ರಹಗಳಲ್ಲಿ ಅತ್ಯುತ್ತಮವಾದ ದೈವಿಕ ಸತ್ವವನ್ನು ಹೊಂದಿರುವ ಮತ್ತು ಮಗುವಿನ ರೂಪವನ್ನು ಹೊಂದಿರುವ ವಿಗ್ರಹವನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಜನವರಿ 22 ರಂದು ರಾಮ ಮಂದಿರದ ಉದ್ಘಾಟನೆಗೆ ಮುನ್ನ ವಿವಿಧ ಕಾರ್ಯಕ್ರಮಗಳು ಜನವರಿ 16 ರಂದು ಪ್ರಾರಂಭವಾಗಲಿದೆ. ರಾಮಮಂದಿರವನ್ನು ಮೋದಿ  ಉದ್ಘಾಟಿಸಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ