ದೆಹಲಿ: ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾದ ಪ್ರಮುಖ ಬಿಜೆಪಿ ನಾಯಕ ಮತ್ತು ಕೇಂದ್ರ ಖಾತೆ ರಾಜ್ಯ ರೈಲ್ವೆ ಇಲಾಖೆ ಸಚಿವರಾಗಿದ್ದ ಸುರೇಶ್ ಅಂಗಡಿ(65)ಯವರ ಸವಿ ನೆನೆಪಿಗೆ ದಿ.ಸುರೇಶ್ ಅಂಗಡಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ದೆಹಲಿಯಲ್ಲಿರುವ ವೀರಶೈವ ರುದ್ರಭೂಮಿ ಬಳಿ ದಿ.ಸುರೇಶ್ ಅಂಗಡಿ ಕುಟುಂಬಸ್ಥರಿಂದ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಸಂಸದೆ ಮಂಗಳಾ ಅಂಗಡಿ ಪತಿಯ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ. ಸಂಸದರಾದ ಡಿ.ವಿ.ಸದಾನಂದಗೌಡ, ನಳಿನ್ ಕುಮಾರ್ ಕಟೀಲು, ರಮೇಶ್ ಜಾರಕಿಹೊಳಿ ಸೇರಿದಂತೆ ರಾಜ್ಯದ ಸಂಸದರು ಈ ವೇಳೆ ಭಾಗಿಯಾಗಿದ್ದಾರೆ.
ಇಂದು ನವದೆಹಲಿಯಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಶ್ರೀ ಸುರೇಶ್ ಅಂಗಡಿ ಅವರ ಸಮಾಧಿ ಸ್ಥಳದಲ್ಲಿ ಶ್ರೀ ಸುರೇಶ್ ಅಂಗಡಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲ್ , ಸಂಸದರು ಹಾಗೂ ಶ್ರೀ ಸುರೇಶ್ ಅಂಗಡಿ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು ಎಂದು ಸಂಸದರಾದ ಡಿ.ವಿ.ಸದಾನಂದಗೌಡ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Mangala Angadi: ಪತಿ ಸುರೇಶ್ ಅಂಗಡಿಯವರಂತೆಯೇ ಕೆಲಸ ಮಾಡುತ್ತೇನೆ; ಸಂಸದೆ ಮಂಗಳಾ ಅಂಗಡಿ