AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PMUY Ujjwala Yojana 2021: ಉಜ್ವಲ ಯೋಜನೆ 2.0ಕ್ಕೆ ಇಂದು ಮಧ್ಯಾಹ್ನ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ..

Pradhan Mantri Ujjwala Yojana-PMUY Ujjwala 2.0: ಪ್ರಧಾನಿ ನರೇಂದ್ರ ಮೋದಿಯವರು ಇಂದು ಉಜ್ವಲ 2.0ಗೆ ಚಾಲನೆ ನೀಡುತ್ತಿದ್ದಾರೆ. ಅದರಡಿಯಲ್ಲಿ ಫಲಾನುಭವಿಗಳಿಗೆ 10 ದಶಲಕ್ಷ ಎಲ್​ಪಿಜಿ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. 

PMUY Ujjwala Yojana 2021: ಉಜ್ವಲ ಯೋಜನೆ 2.0ಕ್ಕೆ ಇಂದು ಮಧ್ಯಾಹ್ನ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ..
ಪ್ರಧಾನಿ ನರೇಂದ್ರ ಮೋದಿ
TV9 Web
| Edited By: |

Updated on:Aug 10, 2021 | 10:26 AM

Share

ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ಇಂದು ಮಧ್ಯಾಹ್ನ 12.30ಕ್ಕೆ ಉಜ್ವಲ ಯೋಜನೆ 2.0 (Ujjwala scheme 2.0)ಗೆ ವಿಡಿಯೋ ಕಾನ್ಫರೆನ್ಸ್​ (Video Conferencing)ಮೂಲಕ ಚಾಲನೆ ನೀಡಲಿದ್ದಾರೆ. ಇಂದು ಉತ್ತರ ಪ್ರದೇಶದ ಮಹೋಬಾ ಜಿಲ್ಲೆ (Uttar Pradesh Mehoba District) ಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಗೆ ಚಾಲನೆ ನೀಡಲಿದ್ದು, ತನ್ನಿಮಿತ್ತ, ಇಲ್ಲಿನ ಫಲಾನುಭವಿಗಳು ಎಲ್​ಪಿಜಿ ಗ್ಯಾಸ್​ ಸಂಪರ್ಕ (LPG Gas Connection) ಪಡೆಯಲಿದ್ದಾರೆ. ಹಾಗೇ, ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದವನ್ನೂ ನಡೆಸಲಿದ್ದಾರೆ. ಈ ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮತ್ತು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್​ ಸಿಂಗ್​ ಪುರಿ ಭಾಗವಹಿಸಲಿದ್ದಾರೆ.  

ಏನಿದು ಉಜ್ವಲ ಯೋಜನೆ?  ಮೊಟ್ಟ ಮೊದಲಿಗೆ ಈ ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಪ್ರಾರಂಭವಾಗಿದ್ದು, 2016ರ ಮೇ 1ರಂದು. ಅಂದು ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಹಳ್ಳಿಗಳಲ್ಲಿ ಇನ್ನೂ ಮಹಿಳೆಯರು ಉರುವಲನ್ನೇ ಉಪಯೋಗಿಸಿ ಅಡುಗೆ ಮಾಡುತ್ತಿದ್ದಾರೆ. ಆ ಕಷ್ಟವನ್ನು ತಪ್ಪಿಸಿ, ಗ್ರಾಮೀಣ ಪ್ರದೇಶಗಳಿಗೂ ಎಲ್​ಪಿಜಿ ಗ್ಯಾಸ್​ ಕನೆಕ್ಷನ್​ ಕೊಡುವ ಉದ್ದೇಶದೊಂದಿಗೆ, ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಈ ಉಜ್ವಲ ಯೋಜನೆಯನ್ನು ಪರಿಚಯಿಸಿತು.

ಮೊದಲ ಬಾರಿ ಉದ್ಘಾಟನೆಯಾದ ಉಜ್ವಲ 1.0ರಡಿ, ಬಡತನ ರೇಖೆಗಿಂತ ಕಡಿಮೆ ಇರುವ ಮಹಿಳೆಯರಿಗೆ ಎಲ್​ಪಿಜಿ ಗ್ಯಾಸ್ ಸೌಲಭ್ಯ ಒದಗಿಸುವ ಗುರಿ ಇತ್ತು. 2020ರ ಮಾರ್ಚ್​​ ಹೊತ್ತಿಗೆ ಬಿಪಿಎಲ್​ ವ್ಯಾಪ್ತಿಗೆ ಬರುವ, 50 ಮಿಲಿಯನ್​ ಮಹಿಳೆಯರ ಕುಟುಂಬಕ್ಕೆ ಎಲ್​ಪಿಜಿ ಗ್ಯಾಸ್​ ಸಂಪರ್ಕ ಕೊಡುವುದು ಇದರ ಉದ್ದೇಶವಾಗಿತ್ತು. ಆದರೆ 2018ರಲ್ಲಿ ಈ ಉಜ್ವಲ 1.0ರಡಿ ಇನ್ನೂ ಏಳುವರ್ಗದ ಅಂದರೆ, ಎಸ್​ಸಿ/ಎಸ್​ಟಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿರುವವರು, ಅಂತ್ಯೋದಯ ಅನ್ನ ಯೋಜನೆಯ (AAY) ಫಲಾನುಭವಿಗಳು, ಅರಣ್ಯ ನಿವಾಸಿಗಳು, ಅತ್ಯಂತ ಹಿಂದುಳಿದ ವರ್ಗಗಳನ್ನೂ ಉಜ್ವಲ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಯಿತು.

ಉಜ್ವಲ ಯೋಜನೆ ವ್ಯಾಪ್ತಿಗೆ ಇಷ್ಟು ವರ್ಗಗಳನ್ನು ಸೇರ್ಪಡೆಗೊಳಿಸಿದ ಬಳಿಕ ಮಾರ್ಚ್​ 2020ರ ಹೊತ್ತಿಗೆ, 80 ದಶಲಕ್ಷ ಕುಟುಂಬದ ಮಹಿಳೆಯರಿಗೆ ಎಲ್​ಪಿಜಿ ಸಂಪರ್ಕ ಕೊಡಬೇಕು ಎಂಬ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿತ್ತು. ಆದರೆ ಈ ಗುರಿಯನ್ನು ಕೇಂದ್ರ ಆಗಸ್ಟ್​ 2019ರಲ್ಲೇ ತಲುಪುವ ಮೂಲಕ ಸಾಧನೆ ಮಾಡಿತು.  2021ರ ಜುಲೈ 30ರ ಲೆಕ್ಕಾಚಾರದಂತೆ, ಇಲ್ಲಿಯವರೆಗೆ 79,995,022 ಫಲಾನುಭವಿಗಳಿಗೆ ಉಜ್ವಲ ಯೋಜನೆಯಡಿ ಗ್ಯಾಸ್​ ಸಂಪರ್ಕ ಸಿಕ್ಕಿದೆ.

ಈಗೆಷ್ಟು ಗುರಿ? ಪ್ರಧಾನಿ ನರೇಂದ್ರ ಮೋದಿಯವರು ಇಂದು ಉಜ್ವಲ 2.0ಗೆ ಚಾಲನೆ ನೀಡುತ್ತಿದ್ದಾರೆ. ಅದರಡಿಯಲ್ಲಿ ಫಲಾನುಭವಿಗಳಿಗೆ 10 ದಶಲಕ್ಷ ಎಲ್​ಪಿಜಿ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ.  ಈ ಹೆಚ್ಚುವರಿ ಸಂಪರ್ಕಕ್ಕೆ ಸಂಬಂಧಪಟ್ಟ ನಿಬಂಧನೆಗಳನ್ನು 2021-22ರ ಬಜೆಟ್​​ನಲ್ಲಿ ಘೋಷಿಸಲಾಗಿತ್ತು.

ಇದನ್ನೂ ಓದಿ: ಪ್ರಾಚೀನ ವಸ್ತುಗಳೆಂದು ನಂಬಿಸಿ ವಂಚಿಸಲು ಯತ್ನಿಸ್ತಿದ್ದ ಐವರು ಆರೋಪಿಗಳು ಅರೆಸ್ಟ್, ಮೂವರು ಪರಾರಿ

ಜೆಪಿ ನಗರದಲ್ಲಿ ಅಪಾರ ಪ್ರಮಾಣದ ಆನೆ ದಂತ, ವನ್ಯ ಜೀವಿಗಳ ಚರ್ಮ, ಮೂಳೆ ವಶ ಆರೋಪಿ ಬಂಧನ- ಚಿತ್ರಗಳಿವೆ

Published On - 9:56 am, Tue, 10 August 21

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್