ಬಿಜೆಪಿಯ ಬಿ ಟೀಮ್, ಔರಂಗಜೇಬನಿಗೆ ತಲೆಬಾಗುವ ಪಕ್ಷದೊಂದಿಗೆ ಮೈತ್ರಿ ಸಾಧ್ಯವಿಲ್ಲ: ಶಿವಸೇನೆ ನಾಯಕರ ಸ್ಪಷ್ಟ ನಿರ್ಧಾರ
ಅಸಾದುದ್ದೀನ್ ಓವೈಸಿ ಪಕ್ಷದೊಂದಿಗೆ ಮೈತ್ರಿಗೆ ಸಂಬಂಧಪಟ್ಟು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲೇ ಮೈತ್ರಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷ, ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಶಿವಸೇನೆ-ಕಾಂಗ್ರೆಸ್-ಎನ್ಸಿಪಿ ಮೈತ್ತಿ)ಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಇಂಗಿತವನ್ನು ಎಐಎಂಐಎಂ ಸಂಸದರೊಬ್ಬರು ವ್ಯಕ್ತಪಡಿಸಿದ್ದರು. ಆದರೆ ಶಿವಸೇನೆ (Shiv Sena) ಅದನ್ನು ನೇರಾನೇರ ತಿರಸ್ಕರಿಸಿದೆ. ಈ ಬಗ್ಗೆ ಶನಿವಾರ ಪ್ರತಿಕ್ರಿಯೆ ನೀಡಿದ್ದ ಶಿವಸೇನೆ ಸಂಸದ ಸಂಜಯ್ ರಾವತ್, ಔರಂಗಜೇಬನಿಗೆ ತಲೆಬಾಗುವ ಪಕ್ಷದೊಟ್ಟಿಗೆ ಎಂದಿಗೂ ಮೈತ್ರಿ ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಹಾಗೇ ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಾವತ್, ಎಐಎಂಐಎಂ ಒಂದು ಬಿಜೆಪಿಯ ಬಿ ಟೀಮ್. ಅದರೊಂದಿಗೆ ಸ್ನೇಹ ಸಾಧ್ಯವಾಗದು ಎಂದಿದ್ದಾರೆ.
ಅಸಾದುದ್ದೀನ್ ಓವೈಸಿ ಪಕ್ಷದೊಂದಿಗೆ ಮೈತ್ರಿಗೆ ಸಂಬಂಧಪಟ್ಟು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲೇ ಮೈತ್ರಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ನಾವು ನಮ್ಮ ಪಕ್ಷವನ್ನು ಛತ್ರಪತಿ ಶಿವಾಜಿ ಮಹಾರಾಜ ಮತ್ತು ಸಂಭಾಜಿ ಮಹಾರಾಜ್ ಸಿದ್ಧಾಂತ, ಮೌಲ್ಯವನ್ನು ಅಳವಡಿಸಿಕೊಂಡು ಕಟ್ಟಿದ್ದೇವೆ. ಹೀಗಿರುವಾಗ ಔರಂಗಜೇಬನ ಸಮಾಧಿಯೆದುರು ತಲೆಬಾಗುವ ಪಕ್ಷದೆದುರು ಯಾಕೆ ಮೈತ್ರಿ ಮಾಡಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಶಿವಸೇನೆ, ಎನ್ಸಿಪಿ ಸೇರಿ ಸರ್ಕಾರ ರಚನೆಯಾಗಿದೆ. ಅಲ್ಲಿ ಇನ್ನು ನಾಲ್ಕನೇ ಪಕ್ಷ ಸೇರಲು ಅವಕಾಶವಿಲ್ಲ ಎಂದಿದ್ದಾರೆ.
ಉದ್ಧವ್ ಠಾಕ್ರೆ ಹೇಳಿದ್ದೇನು?
ಎಐಎಂಐಎಂ ಪಕ್ಷ ಮಹಾವಿಕಾಸ್ ಅಘಾಡಿ ಸೇರ್ಪಡೆ ಕುರಿತಂತೆ ಶಿವಸೇನೆ ಮುಖ್ಯಸ್ಥ, ಮಹಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಪಕ್ಷದ ಸಂಸದರು, ಶಾಸಕರು, ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಠಾಕ್ರೆ, ಓವೈಸಿ ಪಕ್ಷದೊಂದಿಗೆ ಮೈತ್ರಿ ಸಾಧ್ಯವೇ ಇಲ್ಲ. ಶಿವಸೇನೆ ಒಂದು ಬಲಿಷ್ಠವಾದ ರಾಷ್ಟ್ರೀಯ ಪಕ್ಷ. ಹಿಂದುತ್ವದ ಪರ ಪಕ್ಷ ಮತ್ತು ನಮ್ಮ ಪಕ್ಷಕ್ಕೆ ನಮ್ಮದೇ ಆದ ಸ್ಪಷ್ಟ ಸಿದ್ಧಾಂತವಿದೆ. ಇದನ್ನು ರೂಪಿಸಿಕೊಟ್ಟವರು ಬಾಳಾಸಾಹೇಬ್ ಠಾಕ್ರೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಎಐಎಂಐಎಂ ಜತೆ ಮೈತ್ರಿ ಸಂಬಂಧ ಯಾರಿಗೂ, ಯಾವುದೇ ಗೊಂದಲ ಬೇಡ, ಅದು ಆಗದ ಮಾತು ಎಂದು ಹೇಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ಅವರು ಮೊದಲಿಗೆ ಮೈತ್ರಿ ಮಾತನಾಡಿದವರು. ಮಹಾರಾಷ್ಟ್ರದಲ್ಲಿ ಮುಂಬರುವ ಸ್ಥಳೀಯ ಆಡಳಿತಗಳ ಚುನಾವಣೆಯಲ್ಲಿ ನಮ್ಮ ಪಕ್ಷ ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಯನ್ನು ಸೇರ್ಪಡೆಯಾಗುವ ಆಶಯವಿದೆ ಎಂದಿದ್ದರು. ಈ ಸಂಬಂಧ ಅವರು ಎನ್ಸಿಪಿ ಹಿರಿಯ ಮುಖಂಡರೊಬ್ಬರೊಂದಿಗೂ ಮಾತನಾಡಿದ್ದರು. ಆದರೆ ಶಿವಸೇನೆ ಇದನ್ನು ಸ್ಪಷ್ಟವಾಗಿ ನಿರಕಾರಿಸಿದೆ. ಎಐಎಂಐಎಂ ಕಾಂಗ್ರೆಸ್-ಎನ್ಸಿಪಿ ಮೈತ್ರಿಯೊಂದಿಗೆ ತಾವೂ ಸೇರುವುದಾಗಿ ಹೇಳುತ್ತಿದೆ. ಆದರೆ ಮಹಾವಿಕಾಸ್ ಅಘಾಡಿ ರಚಿತವಾಗಿರುವುದು ಕಾಂಗ್ರೆಸ್-ಎನ್ಸಿಪಿ ಮತ್ತು ಶಿವಸೇನೆ ಮೈತ್ರಿಯಿಂದ. ಓವೈಸಿ ಪಕ್ಷವನ್ನು ನಮ್ಮ ಮೈತ್ರಿಗೆ ಸೇರಿಸಿಕೊಳ್ಳಲು ನಮಗೆ ಒಪ್ಪಿಗೆಯಿಲ್ಲ ಎಂದು ಹೇಳಿದೆ.