ರಾಮನ ಆದರ್ಶ, ಸದ್ಗುಣಗಳನ್ನು ಕಲಿಸಲಿದೆ ವಾರಣಾಸಿಯ ‘ಸ್ಕೂಲ್ ಆಫ್ ರಾಮ್’

ಶಾಲೆಯ ಸಂಸ್ಥಾಪಕರ ದಿನದಂದು ನಾವು ಗ್ರಂಥಾಲಯವನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಯಾವುದೇ ವ್ಯಕ್ತಿಯು ವಿಶ್ವದ ಯಾವುದೇ ಭಾಷೆಯಲ್ಲಿ ಅಥವಾ ರಾಮಾಯಣದಲ್ಲಿ ಭಗವಾನ್ ರಾಮನಿಗೆ ಸಂಬಂಧಿಸಿದ ಸಾಹಿತ್ಯದ ಪುಸ್ತಕವನ್ನು...

ರಾಮನ ಆದರ್ಶ, ಸದ್ಗುಣಗಳನ್ನು ಕಲಿಸಲಿದೆ ವಾರಣಾಸಿಯ 'ಸ್ಕೂಲ್ ಆಫ್ ರಾಮ್'
ರಾಮ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 20, 2022 | 1:49 PM

ಭಗವಾನ್ ರಾಮನ ಆದರ್ಶಗಳು ಮತ್ತು ಸದ್ಗುಣಗಳನ್ನು ಪಸರಿಸಲು ಮೀಸಲಾಗಿರುವ ವರ್ಚುವಲ್ ವೇದಿಕೆಯಾದ ವಾರಣಾಸಿಯ (Varanasi) ‘ಸ್ಕೂಲ್ ಆಫ್ ರಾಮ್’ (School of Ram)ವಿಶ್ವದ ಹಲವಾರು ಭಾಷೆಗಳಲ್ಲಿ ರಾಮನಿಗೆ ಸಂಬಂಧಿಸಿದ ಕಥೆಗಳು ಮತ್ತು ಸಾಹಿತ್ಯವನ್ನು ಹೊಂದಿರುವ ಗ್ರಂಥಾಲಯವನ್ನು ಸ್ಥಾಪಿಸಲಿದೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ (BHU) ಬಿಎ ಅಂತಿಮ ವರ್ಷದ ವಿದ್ಯಾರ್ಥಿ ಪ್ರಿನ್ಸ್ ತಿವಾರಿ ಅವರ ಕನಸಿನ ಕೂಸಾಗಿರುವ, ‘ಸ್ಕೂಲ್ ಆಫ್ ರಾಮ್’ ಮಹಾಕಾವ್ಯ ರಾಮಾಯಣದಲ್ಲಿ ಉಲ್ಲೇಖಿಸಲಾದ ವಿವಿಧ ಆಡಳಿತ ಸೂತ್ರಗಳನ್ನು ಜನರಿಗೆ ತಿಳಿಸಲು ಒಂದು ತಿಂಗಳ ಅವಧಿಯ ಉಚಿತ ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭಿಸಿದೆ.  “ಶಾಲೆಯ ಸಂಸ್ಥಾಪಕರ ದಿನದಂದು ನಾವು ಗ್ರಂಥಾಲಯವನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಯಾವುದೇ ವ್ಯಕ್ತಿಯು ವಿಶ್ವದ ಯಾವುದೇ ಭಾಷೆಯಲ್ಲಿ ಅಥವಾ ರಾಮಾಯಣದಲ್ಲಿ ಭಗವಾನ್ ರಾಮನಿಗೆ ಸಂಬಂಧಿಸಿದ ಸಾಹಿತ್ಯದ ಪುಸ್ತಕವನ್ನು ಶಾಲೆಗೆ ನೀಡುವ ಮೂಲಕ ಜೀವನ ನಿರ್ವಹಣೆಯ ಈ ಸೂತ್ರಗಳನ್ನು ಕಲಿಯಬಹುದು” ಎಂದು ತಿವಾರಿ ಹೇಳಿದರು.   ಶಾಲೆಯು ಒಂದು ತಿಂಗಳ ಕಾಲ ನಿರ್ವಹಣೆಯ ಸೂತ್ರಗಳ ಬಗ್ಗೆ ತರಬೇತಿ ನೀಡುತ್ತದೆ. ನಿರ್ವಹಣೆಯ ಸೂತ್ರಗಳನ್ನು ಕಲಿಯುವುದರಿಂದ ಜೀವನದಲ್ಲಿ ಯಶಸ್ಸು ಪಡೆಯಬಹುದು ಎಂದು ತಿವಾರಿ ಹೇಳಿದ್ದಾರೆ.

ಪ್ರತಿ ದಾನಿಗಳ ಹೆಸರು ಪುಸ್ತಕದ ಮುಖಪುಟದಲ್ಲಿ ಇರುತ್ತದೆ. ರಾಮಾಯಣ ಗ್ರಂಥಾಲಯವು ಮುಖ್ಯವಾಗಿ ಕಾಶಿಯಲ್ಲಿರುತ್ತದೆ ಆದರೆ ಅದರ ಕೇಂದ್ರವು ಜೈಪುರದಲ್ಲಿರುತ್ತದೆ. ಆಸಕ್ತರ ಅನುಕೂಲಕ್ಕಾಗಿ ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳ ಎಲ್ಲಾ ವಿವರಗಳನ್ನು ಒಳಗೊಂಡ ವೆಬ್‌ಸೈಟ್ ಕೂಡ ಇದೆ. ರಾಮನ ಕುರಿತು ಸಂಶೋಧನೆ ನಡೆಸುವವರಿಗೂ ಈ ಗ್ರಂಥಾಲಯ ನೆರವಾಗಲಿದೆ.

ಇದನ್ನೂ ಓದಿ: ‘ನಿಜವಾದ ದೇಶಪ್ರೇಮಿಗಳು ದುಡ್ಡು ಕೊಟ್ಟು RRR ಚಿತ್ರ ನೋಡ್ಬೇಕು’: ಸಿಎಂ ಬೊಮ್ಮಾಯಿ ಬಹಿರಂಗ ಮನವಿ

Published On - 1:45 pm, Sun, 20 March 22