
ನವದೆಹಲಿ, ಸೆಪ್ಟೆಂಬರ್ 9: ಏಷ್ಯನ್ ವೆಂಚರ್ ಲೋಕೋಪಕಾರ ನೆಟ್‌ವರ್ಕ್ (AVPN) ಶೃಂಗಸಭೆಯನ್ನು ಹಾಂಗ್ ಕಾಂಗ್‌ನಲ್ಲಿ ಆಯೋಜಿಸಲಾಗಿತ್ತು. ಅದಾನಿ ಫೌಂಡೇಶನ್ (Adani Foundation) ಅಧ್ಯಕ್ಷೆ ಡಾ. ಪ್ರೀತಿ ಅದಾನಿ ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಅವರು ಲೋಕೋಪಕಾರದ ಸಾಂಪ್ರದಾಯಿಕ ವ್ಯಾಖ್ಯಾನವನ್ನು ಪ್ರಶ್ನಿಸಿದರು. ಹಾಗೇ, ಜವಾಬ್ದಾರಿ ಮತ್ತು ಪಾಲುದಾರಿಕೆ ದಾನಕ್ಕಿಂತ ಮುಖ್ಯ ಎಂದು ಅವರು ಹೇಳಿದರು. ಅವರ ಭಾಷಣವು ಹಾಜರಿದ್ದವರ ಹೃದಯಗಳನ್ನು ಗೆದ್ದಿತು. ಡಾ. ಪ್ರೀತಿ ಅದಾನಿ ತಮ್ಮ ಮುಖ್ಯ ಭಾಷಣದಲ್ಲಿ, ಸಾಮಾಜಿಕ ಅಭಿವೃದ್ಧಿಯ ಮುಂದಿನ ಹೆಜ್ಜೆ ಸಹಯೋಗದ ಮೇಲೆ ಮತ್ತು ಪ್ರತಿಯೊಂದು ಲೋಕೋಪಕಾರಿ ಸಂಸ್ಥೆ, NGO ಮತ್ತು ಪಾಲುದಾರರನ್ನು ಒಂದೇ ವೇದಿಕೆಗೆ ತರುವುದರ ಮೇಲೆ ಅವಲಂಬಿತವಾಗಿದೆ ಎಂದು ಅವರು ಒತ್ತಿ ಹೇಳಿದರು.
ಡಾ. ಪ್ರೀತಿ ಅದಾನಿ ಗುಜರಾತ್‌ನ ಕಚ್‌ನ ಕಥೆಯೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದರು. “ಮರುಭೂಮಿಯ ಬಂಜರು ಭೂಮಿಯಲ್ಲಿ ಒಬ್ಬ ಮಹಿಳೆ ಬೀಜಗಳನ್ನು ಬಿತ್ತುವುದನ್ನು ನಾನು ನೋಡಿದೆ. ಈ ಒಣ ಭೂಮಿಯಲ್ಲಿ ಅವಳು ಏಕೆ ಬೀಜಗಳನ್ನು ಬಿತ್ತುತ್ತಿದ್ದಾಳೆಂದು ನಾನು ಅವಳನ್ನು ಕೇಳಿದೆ. ಅದಕ್ಕೆ ಆ ಮಹಿಳೆ, ಒಂದು ದಿನ ಖಂಡಿತವಾಗಿಯೂ ಮಳೆ ಬರುತ್ತದೆ ಎಂದು ಉತ್ತರಿಸಿದಳು. ಭೂಮಿಯಲ್ಲಿ ಬೀಜವಿಲ್ಲದಿದ್ದರೆ ಮಳೆಯೂ ವ್ಯರ್ಥವಾಗುತ್ತದೆ. ಹೀಗಾಗಿ, ಬೀಜ ಬಿತ್ತುತ್ತಿದ್ದೇನೆ ಎಂದಳು” ಇಂತಹ ಚಿಂತನೆಯು ವಾಸ್ತವವಾಗಿ ಬದಲಾವಣೆಗೆ ಅಡಿಪಾಯವನ್ನು ಹಾಕುತ್ತದೆ ಎಂದು ಡಾ. ಪ್ರೀತಿ ಅದಾನಿ ಹೇಳಿದರು.
ಇದನ್ನೂ ಓದಿ: ಭೂತಾನ್‌ನಲ್ಲಿ ಅದಾನಿ ಪವರ್‌ನಿಂದ 570 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆ: ಡ್ರಕ್ ಗ್ರೀನ್ ಜತೆ ಒಪ್ಪಂದಕ್ಕೆ ಸಹಿ
ಡಾ. ಪ್ರೀತಿ ಅದಾನಿ ಅಹಮದಾಬಾದ್‌ನಲ್ಲಿ ದಂತವೈದ್ಯೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ, ಅವರು ತಮ್ಮ ಪತಿ ಗೌತಮ್ ಅದಾನಿಯವರ ರಾಷ್ಟ್ರ ನಿರ್ಮಾಣದ ಮಾರ್ಗವನ್ನು ಅನುಸರಿಸಲು ನಿರ್ಧರಿಸಿದರು. ಹೀಗಾಗಿ ತಮ್ಮ ಜೀವನವನ್ನು ಸಾಮಾಜಿಕ ಸೇವೆಗೆ ಮುಡಿಪಾಗಿಟ್ಟರು. ಪ್ರೀತಿ ತಮ್ಮ ಭಾಷಣದಲ್ಲಿ, ‘ನಿಜವಾದ ಅಭಿವೃದ್ಧಿಯು ಮೂಲಸೌಕರ್ಯ ಅಥವಾ ವ್ಯವಹಾರದಲ್ಲಿ ಮಾತ್ರ ಅಡಗಿಲ್ಲ. ಶಾಲೆಗಳು, ಆಸ್ಪತ್ರೆಗಳು ಮತ್ತು ಜೀವನೋಪಾಯಗಳ ಸುಸ್ಥಿರ ಅಭಿವೃದ್ಧಿಯಲ್ಲಿ ಅಡಗಿದೆ ಎಂದು ಗೌತಮ್ ಅದಾನಿ ನಂಬುತ್ತಾರೆ’ ಎಂದು ಹೇಳಿದರು. ಈ ಕಲ್ಪನೆಯನ್ನು ಆಧರಿಸಿ, ಅದಾನಿ ಫೌಂಡೇಶನ್ ಅನ್ನು 1996ರಲ್ಲಿ ಸ್ಥಾಪಿಸಲಾಯಿತು.
Billions are given every year in the name of philanthropy. Yet the gap between promise and progress keeps growing. At the AVPN Global Conference in Hong Kong, Dr. Priti Adani said: “This is not the time to clap. It is the time to commit.” 1/5 pic.twitter.com/qiSIvGE8NX
— 𝐌𝐚𝐧𝐨𝐣 𝐊𝐮𝐦𝐚𝐫 (@XGuruManoj) September 9, 2025
ಇದನ್ನೂ ಓದಿ: ಒಂದೇ ಒಂದು ನಿಷೇಧವು ಭಾರತದ ಡಿಜಿಟಲ್ ಆರ್ಥಿಕತೆಯನ್ನೇ ಸ್ಥಗಿತಗೊಳಿಸಬಹುದು: ಗೌತಮ್ ಅದಾನಿ ಎಚ್ಚರಿಕೆಯ ಕರೆಗಂಟೆ
ಕೇವಲ ದೇಣಿಗೆ ನೀಡುವುದರಿಂದ ಬದಲಾವಣೆ ಆಗುವುದಿಲ್ಲ. ನಿಜವಾದ ಬದಲಾವಣೆ ಎಂದರೆ ನಾವು ನೀಡಿದ ದೇಣಿಗೆ ಅಗತ್ಯವಿರುವವರನ್ನು ತಲುಪುವುದು. ಸರ್ಕಾರ, ವ್ಯವಹಾರ ಮತ್ತು ಸಮಾಜ ಒಟ್ಟಾಗಿ ಸೇರಿದರೆ, ತಲೆಮಾರುಗಳ ಮೇಲೆ ಪರಿಣಾಮ ಬೀರುವ ಬದಲಾವಣೆಗಳನ್ನು ನಾವು ಸೃಷ್ಟಿಸಬಹುದು. ಬರಗಾಲದಲ್ಲೂ ನಾವು ಬೀಜ ಬಿತ್ತುವ ಪೀಳಿಗೆಯಾಗಬೇಕು, ಏಕೆಂದರೆ ಅದು ಮಳೆ ಬರುತ್ತದೆ ಎಂದು ನಂಬಿಕೆಯಿರುತ್ತದೆ. ಆ ಮಳೆ ಬಂದಾಗ, ಯಾರೋ ಭರವಸೆಯ ಬೀಜಗಳನ್ನು ಬಿತ್ತಿದ್ದಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗುತ್ತದೆ ಎಂದರು.
ಅದಾನಿ ಫೌಂಡೇಶನ್:
ಅದಾನಿ ಫೌಂಡೇಶನ್ ಇಂದು ಭಾರತದ ಅತಿದೊಡ್ಡ ಸಾಮಾಜಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಸ್ಥೆ ಶಿಕ್ಷಣ, ಆರೋಗ್ಯ, ಪೋಷಣೆ, ಸುಸ್ಥಿರ ಉದ್ಯೋಗ, ಗ್ರಾಮೀಣ ಮೂಲಸೌಕರ್ಯ ಮತ್ತು ಹವಾಮಾನ ಬದಲಾವಣೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇಲ್ಲಿಯವರೆಗೆ, ಸಂಸ್ಥೆಯು 7000ಕ್ಕೂ ಹೆಚ್ಚು ಹಳ್ಳಿಗಳು ಮತ್ತು 96 ಲಕ್ಷ ಜನರನ್ನು ತಲುಪಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:10 pm, Tue, 9 September 25