ಹೈದರಾಬಾದ್: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಗಣಿಗಾರಿಕೆ ಸಚಿವರ ಸಮಾವೇಶವನ್ನು ಉದ್ಘಾಟಿಸಿ ಜೋಶಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದಂತೆ, ಆಯಾ ರಾಜ್ಯ ಗಣಿ ಇಲಾಖೆಯ ಸರಕಾರಿ ಕಂಪನಿಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಜೊತೆ ಚರ್ಚಿಸಿ ಸಮಾವೇಶ ಆಯೋಜಿಸಲಾಗಿದೆ. ಎಲ್ಲ ರಾಜ್ಯಗಳ ಪಾಲ್ಗೊಳ್ಳುವಿಕೆ ಮುಖ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಶ್ರದ್ದೆಯಿಂದ ಕೆಲಸ ಮಾಡಿದರೆ 2047 ರೊಳಗೆ ಭಾರತ ಅಭಿವೃದ್ದಿ ಹೊಂದಿದ ಭಾರತವಾಗುವುದರಲ್ಲಿ ಅನುಮಾನ ಬೇಡ ಎಂದು ಪ್ರಲ್ಹಾದ್ ಜೋಶಿ (Union Minister of Coal and Mines Pralhad Joshi ) ಅಭಿಪ್ರಾಯಪಟ್ಟರು.
ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತ ಹೊಸ ಮೈಲುಗಲ್ಲು ಸಾಧಿಸುತ್ತಿದೆ. ಕಲ್ಲಿದ್ದಲು ಉತ್ಪಾದನೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಶೇ 8% ರಷ್ಟು ಹೆಚ್ಚಳವಾಗಿದ್ದು, ಆಗಸ್ಟ್ 2022ರವರೆಗೆ 58 MT ಯಷ್ಟಾಗಿದೆ ಎಂದು ಸಮ್ಮೇಳನದಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಭಾರತದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ. ಖನಿಜ ಕ್ಷೇತ್ರದಲ್ಲಾದ ಸುಧಾರಣೆ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆಯ ಪಾತ್ರವು ಮುಖ್ಯವಾಗಿದೆ. ಕಳೆದ ವರ್ಷ ಹರಾಜಾದ ಗಣಿಗಳಿಂದ ಸರಕಾರಕ್ಕೆ ಒಟ್ಟು 25,170 ಕೋಟಿ ಆದಾಯ ಬಂದಿದೆ ಎಂದು ಜೋಶಿ ತಿಳಿಸಿದರು.
Inaugurated the 2-days long National Mining Ministers’ Conclave in Hyderabad. This Conclave has been organised in the spirit of cooperative federalism, as per the direction of PM @narendramodi ji, with participation from State Departments, autonomous bodies & Govt companies. pic.twitter.com/42rHP5Ws9k
— Pralhad Joshi (@JoshiPralhad) September 9, 2022