AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೆಂಥಾ ದುಸ್ಥಿತಿ: ತಾಯಿಯ ಮೃತದೇಹವನ್ನು 2.5 ಕಿ.ಮೀ ದೂರವಿರುವ ಸ್ಮಶಾನಕ್ಕೆ ವ್ಹೀಲ್​ಚೇರ್​ನಲ್ಲಿ ಕೊಂಡೊಯ್ದ ಪುತ್ರ

ಅತ್ತ ತಾಯಿಯೂ ಬದುಕುಳಿಯಲಿಲ್ಲ, ಇತ್ತ ಅಂತ್ಯಕ್ರಿಯೆಗೆ ಸಹಾಯ ಮಾಡುವವರೂ ಯಾರೂ ಇಲ್ಲ. ಕೊನೆಗೆ ಪುತ್ರನೊಬ್ಬ ತನ್ನ ತಾಯಿಯ ಮೃತದೇಹವನ್ನು ವ್ಹೀಲ್​ಚೇರ್​ನಲ್ಲಿ ಕೊಂಡೊಯ್ದ ಮನಕಲಕುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಇದೆಂಥಾ ದುಸ್ಥಿತಿ: ತಾಯಿಯ ಮೃತದೇಹವನ್ನು 2.5 ಕಿ.ಮೀ ದೂರವಿರುವ ಸ್ಮಶಾನಕ್ಕೆ ವ್ಹೀಲ್​ಚೇರ್​ನಲ್ಲಿ ಕೊಂಡೊಯ್ದ ಪುತ್ರ
Wheel ChairImage Credit source: India Today
TV9 Web
| Updated By: ನಯನಾ ರಾಜೀವ್|

Updated on:Sep 09, 2022 | 4:25 PM

Share

ಅತ್ತ ತಾಯಿಯೂ ಬದುಕುಳಿಯಲಿಲ್ಲ, ಇತ್ತ ಅಂತ್ಯಕ್ರಿಯೆಗೆ ಸಹಾಯ ಮಾಡುವವರೂ ಯಾರೂ ಇಲ್ಲ. ಕೊನೆಗೆ ಪುತ್ರನೊಬ್ಬ ತನ್ನ ತಾಯಿಯ ಮೃತದೇಹವನ್ನು ವ್ಹೀಲ್​ಚೇರ್​ನಲ್ಲಿ ಕೊಂಡೊಯ್ದ ಮನಕಲಕುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನಲ್ಲಿ, 60 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು ವೀಲ್ ಚೇರ್‌ನಲ್ಲಿ ಅಂತ್ಯಕ್ರಿಯೆಗಾಗಿ ಕೊಂಡೊಯ್ದಿದ್ದಾನೆ. ವೃದ್ಧೆಯು ಸೋರಿಯಾಸಿಸ್​ ಎಂಬ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಯಾರೂ ಕೂಡ ಅಂತ್ಯಕ್ರಿಯೆಗೆ ಮುಂದೆಬರಲಿಲ್ಲ. ಮನಪಾರೈನಲ್ಲಿರುವ ಕಾರ್ಪೊರೇಷನ್ ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಈ ಕುರಿತು ಮಾಹಿತಿ ನೀಡಿದರು.

ಸ್ಮಶಾನವನ್ನು ನಿರ್ವಹಿಸುವ ಸ್ಥಳೀಯ ಲಯನ್ಸ್ ಕ್ಲಬ್ ಘಟಕದ ಟ್ರಸ್ಟಿ ಎನ್ ಶ್ರೀಧರನ್ ಅವರ ಪ್ರಕಾರ, “ಮನಪಾರೈ ಬಳಿಯ ಭಾರತಿಯಾರ್ ನಗರದಲ್ಲಿ ವಾಸಿಸುವ 60 ವರ್ಷದ ಎಲೆಕ್ಟ್ರಿಷಿಯನ್ ಮುರುಗಾನಂದಂ ಅವರು 84 ವರ್ಷದ ಮೃತ ತಾಯಿ ರಾಜೇಶ್ವರಿ ಅವರ ಶವವನ್ನು ವ್ಹೀಲ್​ಚೇರ್​ನಲ್ಲಿ ಸ್ಮಶಾನಕ್ಕೆ ತಂದಿದ್ದರು.

ಪಾರ್ಥಿವ ಶರೀರವನ್ನು ಗಾಲಿಕುರ್ಚಿಯಲ್ಲಿ ಸುಮಾರು 2.5 ಕಿ.ಮೀ. ಕೊಂಡೊಯ್ದಿದ್ದರು. ಶ್ರೀಧರನ್ ಮತ್ತಷ್ಟು ಹೇಳಿದರು, ಸೆಪ್ಟೆಂಬರ್ 8 ರಂದು ಬೆಳಿಗ್ಗೆ 6 ಗಂಟೆಗೆ ಹತ್ತಿರದ ಟೀ ಸ್ಟಾಲ್‌ನ ಮಾಲೀಕರಿಂದ ನನಗೆ ಕರೆ ಬಂತು. ಗಾಲಿಕುರ್ಚಿಯಲ್ಲಿದ್ದ ವ್ಯಕ್ತಿಯೊಬ್ಬರು ಶವವನ್ನು ಬಟ್ಟೆಯಲ್ಲಿ ಸುತ್ತಿ ತಂದು ಸ್ಮಶಾನದ ಮುಂದೆ ಕಾಯುತ್ತಿದ್ದಾರೆ ಎಂದು ಅವರು ನನಗೆ ತಿಳಿಸಿದರು. ನಾನು ಆ ಜಾಗಕ್ಕೆ ಓಡಿದೆ.”

ತಾಯಿ ಸೋರಿಯಾಸಿಸ್‌ನಿಂದ ಬಳಲುತ್ತಿದ್ದಾರೆ: ಶ್ರೀಧರನ್, “ಮುರುಗಾನಂದಂ ಅವರು ತಮ್ಮ ಪಾರ್ಶ್ವವಾಯು ಪೀಡಿತ ತಾಯಿ ದೀರ್ಘಕಾಲದ ಅನಾರೋಗ್ಯದಿಂದ ಮುಂಜಾನೆ 4 ಗಂಟೆಗೆ ನಿಧನರಾದರು ಮತ್ತು ಅವರ ಅಂತಿಮ ವಿಧಿಗಳನ್ನು ಮಾಡಬೇಕು ಎಂದು ಹೇಳಿದರು.

ತನ್ನ ತಾಯಿ ರಾಜೇಶ್ವರಿ ಹಲವು ವರ್ಷಗಳಿಂದ ಸೋರಿಯಾಸಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ತಾಯಿಗೆ ತೀವ್ರ ಅನಾರೋಗ್ಯ ಕಾಡಿದ ಪರಿಣಾಮ ಆಕೆಯನ್ನು ಮನೆಯಲ್ಲಿಯೇ ನೋಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಬಳಿಕ ರಾಜೇಶ್ವರಿ ಮೃತಪಟ್ಟಿದ್ದಾರೆ.

ಮರಣ ಪ್ರಮಾಣ ಪತ್ರ ಪಡೆದ ನಂತರ ಅಂತಿಮ ಸಂಸ್ಕಾರ ನಾವು ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸಿದ್ದೇವೆ ಮತ್ತು ರಾಜೇಶ್ವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಬಳಿಯೂ ದೃಢಪಡಿಸಿದ್ದೇವೆ.

ಮುರುಗಾನಂದಂ ಅವರ ಅಂತ್ಯಕ್ರಿಯೆಗೆ ಹಣವಿಲ್ಲ ಎಂದು ಹೇಳಿದ್ದಾರೆ. ಅದರ ನಂತರ ನಾವು ಸರ್ಕಾರ ಮತ್ತು ಅನೇಕ ಎನ್‌ಜಿಒಗಳು ಆರ್ಥಿಕವಾಗಿ ದುರ್ಬಲರಾದವರಿಗೆ ತಮ್ಮ ಪ್ರೀತಿಪಾತ್ರರ ಅಂತಿಮ ಸಂಸ್ಕಾರ ಮಾಡಲು ಸಹಾಯ ಮಾಡುತ್ತವೆ ಎಂದು ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Fri, 9 September 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್