Singapore: ಸಿಂಗಾಪುರದ ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅವರನ್ನು ಭೇಟಿ ಮಾಡಿದ ಸಚಿವ ಧರ್ಮೇಂದ್ರ ಪ್ರಧಾನ್; ಕೌಶಲ್ಯ ಅಭಿವೃದ್ಧಿಯ ಕುರಿತು ಮಾತುಕತೆ

ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಿಂಗಾಪುರದ ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅವರನ್ನು ಭೇಟಿ ಮಾಡಿ, ಕೌಶಲ್ಯ ಅಭಿವೃದ್ಧಿಯಲ್ಲಿ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

Singapore: ಸಿಂಗಾಪುರದ ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅವರನ್ನು ಭೇಟಿ ಮಾಡಿದ ಸಚಿವ ಧರ್ಮೇಂದ್ರ ಪ್ರಧಾನ್; ಕೌಶಲ್ಯ ಅಭಿವೃದ್ಧಿಯ ಕುರಿತು ಮಾತುಕತೆ
ಸಿಂಗಾಪುರದ ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅವರನ್ನು ಭೇಟಿ ಮಾಡಿದ ಸಚಿವ ಪ್ರಧಾನ್
Image Credit source: Twitter

Updated on: May 30, 2023 | 9:46 AM

ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಮೇ 29 ರಂದು ಸಿಂಗಾಪುರದ (Singapore) ಉಪ ಪ್ರಧಾನಿ ಲಾರೆನ್ಸ್ ವಾಂಗ್ (Deputy Prime Minister Lawrence Wong) ಅವರನ್ನು ಭೇಟಿ ಮಾಡಿದರು. ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣದ ಕ್ಷೇತ್ರಗಳಲ್ಲಿ ಆಳವಾದ ತೊಡಗಿಸಿಕೊಳ್ಳುವಿಕೆ ಸೇರಿದಂತೆ ಉಭಯ ರಾಷ್ಟ್ರಗಳ ನಡುವಿನ ಅಸ್ತಿತ್ವದಲ್ಲಿರುವ ಸಹಕಾರದ ಕುರಿತು ಚರ್ಚೆ ನಡೆಸಿದರು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಮೂರು ದಿನಗಳ ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನ್ ಅವರು, ಹಣಕಾಸು ಖಾತೆಯನ್ನು ಹೊಂದಿರುವ ವಾಂಗ್ ಅವರೊಂದಿಗೆ ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದರು. “ಕೌಶಲ್ಯ ಅಭಿವೃದ್ಧಿ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣದಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚು ಪ್ರಭಲಗೊಳಿಸುವುದರ ಕುರಿತು ಚರ್ಚಿಸಲಾಗಿದೆ” ಎಂದು ಸಿಂಗಾಪುರದಲ್ಲಿರುವ ಭಾರತದ ಹೈಕಮಿಷನ್ ಲಿಂಕ್ಡ್‌ಇನ್‌ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಭೇಟಿಯ ಸಮಯದಲ್ಲಿ, ಸಚಿವ ಪ್ರಧಾನ್ ಅವರು ಹಿರಿಯ ಸಚಿವ ಥರ್ಮನ್ ಸೇರಿದಂತೆ ಷಣ್ಮುಗರತ್ನಂ, ವಿದೇಶಾಂಗ ಸಚಿವ ಡಾ ವಿವಿಯನ್ ಬಾಲಕೃಷ್ಣನ್, ವ್ಯಾಪಾರ ಮತ್ತು ಕೈಗಾರಿಕಾ ಸಚಿವ ಗಾನ್ ಕಿಮ್ ಯೋಂಗ್ ಮತ್ತು ಶಿಕ್ಷಣ ಸಚಿವ ಚಾನ್ ಚುನ್ ಸಿಂಗ್ ಸೇರಿ ಹಲವು ಸಿಂಗಾಪುರ ಸರ್ಕಾರದ ವಿವಿಧ ಪ್ರಮುಖ ಮಂತ್ರಿಗಳನ್ನು ಭೇಟಿಯಾಗಲಿದ್ದಾರೆ.

ಪ್ರಧಾನ್ ಅವರು ಸಿಂಗಾಪುರ್ ಸ್ಪೆಕ್ಟ್ರಾ ಸೆಕೆಂಡರಿ ಸ್ಕೂಲ್, ನ್ಯಾನ್ಯಾಂಗ್ ಟೆಕ್ನಾಲಜಿಕಲ್ ಯೂನಿವರ್ಸಿಟಿ (NTU), ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಶನ್ ಅಂಡ್ ಎಜುಕೇಷನಲ್ ಸರ್ವೀಸಸ್ (ITES), ಮತ್ತು ಸಿಂಗಾಪುರ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ & ಡಿಸೈನ್ (SUTD) ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಲಿದ್ದಾರೆ. ಅದಲ್ಲದೆ, ಸ್ಕಿಲ್ಸ್ ಫ್ಯೂಚರ್ ಆಂದೋಲನದ ಅನುಷ್ಠಾನಕ್ಕೆ ಚಾಲನೆ ನೀಡುವ ಸಿಂಗಾಪುರ ಸರ್ಕಾರದ ಅಡಿಯಲ್ಲಿನ ನೋಡಲ್ ಏಜೆನ್ಸಿಯಾದ ಸ್ಕಿಲ್ಸ್ ಫ್ಯೂಚರ್ ಸಿಂಗಾಪುರ್ (ಎಸ್‌ಎಸ್‌ಜಿ) ಯೊಂದಿಗೆ ಪ್ರಧಾನ್ ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಕಾಂಗ್ರೆಸ್‌ನ ಏಕೈಕ ಶಾಸಕ ಬೇರಾನ್ ಬಿಸ್ವಾಸ್ ಟಿಎಂಸಿಗೆ ಸೇರ್ಪಡೆ

“ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನ್ ಅವರು ಭಾರತೀಯ ಡಯಾಸ್ಪೊರಾ ಮತ್ತು ಒಡಿಯಾ ಅಸೋಸಿಯೇಷನ್‌ನ ಸದಸ್ಯರನ್ನು ಭೇಟಿ ಮಾಡಲಿದ್ದಾರೆ. ಸಚಿವರು ಸಿಂಗಾಪುರದಲ್ಲಿ ಐಐಟಿ ಮತ್ತು ಐಐಎಂ ಹಳೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ” ಎಂದು ಹೇಳಿಕೆ ತಿಳಿಸಿದೆ. ಭಾರತ ಮತ್ತು ಸಿಂಗಾಪುರ ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ದೀರ್ಘಾವಧಿಯ ಪಾಲುದಾರಿಕೆಯನ್ನು ಹೊಂದಿವೆ. ನಮ್ಮ G20 ಪ್ರೆಸಿಡೆನ್ಸಿಯ ಅಡಿಯಲ್ಲಿ ಶಿಕ್ಷಣ ಕಾರ್ಯನಿರತ ಗುಂಪಿನ ಒಂದು ಕೇಂದ್ರೀಕೃತ ಕ್ಷೇತ್ರವೆಂದರೆ ನಿರಂತರ ಕಲಿಕೆ ಮತ್ತು ಕೆಲಸದ ಭವಿಷ್ಯವನ್ನು ಉತ್ತೇಜಿಸುವುದು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ