ಪಶ್ಚಿಮ ಬಂಗಾಳ: ಕಾಂಗ್ರೆಸ್‌ನ ಏಕೈಕ ಶಾಸಕ ಬೇರಾನ್ ಬಿಸ್ವಾಸ್ ಟಿಎಂಸಿಗೆ ಸೇರ್ಪಡೆ

ಇಂದು ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ನಡೆಯುತ್ತಿರುವ ಜೋನೋ ಸಂಜೋಗ್ ಯಾತ್ರೆ ವೇಳೆ ಸಾಗರದಿಘಿ ಕಾಂಗ್ರೆಸ್ ಶಾಸಕ ಬೇರೊನ್ ಬಿಸ್ವಾಸ್ ನಮ್ಮ ಪಕ್ಷ ಸೇರಿದರು. ನಾವು ಅವರನ್ನು ತೃಣಮೂಲ ಕಾಂಗ್ರೆಸ್ ಕುಟುಂಬಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.

ಪಶ್ಚಿಮ ಬಂಗಾಳ: ಕಾಂಗ್ರೆಸ್‌ನ ಏಕೈಕ ಶಾಸಕ ಬೇರಾನ್ ಬಿಸ್ವಾಸ್ ಟಿಎಂಸಿಗೆ ಸೇರ್ಪಡೆ
ಬೇರಾನ್ ಬಿಸ್ವಾಸ್
Follow us
ರಶ್ಮಿ ಕಲ್ಲಕಟ್ಟ
|

Updated on: May 29, 2023 | 8:17 PM

ಕೋಲ್ಕತ್ತಾ: ಪಶ್ಚಿಮ ಬಂಗಾಳ (West Bengal) ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಏಕೈಕ ಶಾಸಕ ಬೇರಾನ್ ಬಿಸ್ವಾಸ್ (Bayron Biswas)  ಸೋಮವಾರ ಆಡಳಿತ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದರು. ಸಾಗರ್ದಿಘಿ ಶಾಸಕ ಬಿಸ್ವಾಸ್ ಅವರು ಟಿಎಂಸಿಗೆ ಸೇರ್ಪಡೆ ಆದ ಕೂಡಲೇ, ರಾಜ್ಯದಲ್ಲಿ ಆಡಳಿತಾರೂಢ ಪಕ್ಷವನ್ನು ವಿರೋಧಿಸಬೇಕೇ ಅಥವಾ ಕೇಂದ್ರದಲ್ಲಿ ಬಿಜೆಪಿಯನ್ನು ವಿರೋಧಿಸಬೇಕೇ ಎಂಬುದನ್ನು ಕಾಂಗ್ರೆಸ್ ನಿರ್ಧರಿಸಬೇಕು ಎಂದು ಬ್ಯಾನರ್ಜಿ ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರ ಪ್ರಾಬಲ್ಯದ ಕ್ಷೇತ್ರದಲ್ಲಿ ಗೆದ್ದು ಸುಮಾರು ಮೂರು ತಿಂಗಳ ನಂತರ, ಆ ಪ್ರದೇಶದಲ್ಲಿ ಬೀಡಿ ವ್ಯಾಪಾರದ ದೊರೆ ಎಂದೇ ಕರೆಯಲ್ಪಡುವ ಬಿಸ್ವಾಸ್, ಪಶ್ಚಿಮ ಮೇದಿನಿಪುರ ಜಿಲ್ಲೆಯ ಘಟಾಲ್ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ತನ್ನ ಗೆಲುವಿನಲ್ಲಿ ಕಾಂಗ್ರೆಸ್ ಗೆ ಯಾವುದೇ ಪಾತ್ರವಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಇಂದು ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ನಡೆಯುತ್ತಿರುವ ಜೋನೋ ಸಂಜೋಗ್ ಯಾತ್ರೆ ವೇಳೆ ಸಾಗರದಿಘಿ ಕಾಂಗ್ರೆಸ್ ಶಾಸಕ ಬೇರೊನ್ ಬಿಸ್ವಾಸ್ ನಮ್ಮ ಪಕ್ಷ ಸೇರಿದರು. ನಾವು ಅವರನ್ನು ತೃಣಮೂಲ ಕಾಂಗ್ರೆಸ್ ಕುಟುಂಬಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಬಿಜೆಪಿಯ ವಿಭಜಕ ಮತ್ತು ತಾರತಮ್ಯ ರಾಜಕಾರಣದ ವಿರುದ್ಧ ಹೋರಾಡುವ ನಿಮ್ಮ ಸಂಕಲ್ಪವನ್ನು ಬಲಪಡಿಸಲು ನೀವು ಸರಿಯಾದ ವೇದಿಕೆಯನ್ನು ಆರಿಸಿದ್ದೀರಿ. ಒಟ್ಟಾಗಿ, ನಾವು ಗೆಲ್ಲುತ್ತೇವೆ ಎಂದು ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದೆ.

2021 ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಖಾತೆಯನ್ನು ತೆರೆಯಲು ವಿಫಲವಾದ ಕಾರಣ ಸಾಗರದಿಘಿ ಕ್ಷೇತ್ರದಿಂದ  ಬಿಸ್ವಾಸ್ ಅವರ ಗೆಲುವು ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಪ್ರಾತಿನಿಧ್ಯವನ್ನು ಪಡೆಯಲು ಸಹಾಯ ಮಾಡಿತು. ಬಂಗಾಳದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಒಳ ಒಪ್ಪಂದಿಂದ ರೂಪುಗೊಂಡ ಅನೈತಿಕ ಮೈತ್ರಿ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಬಿಸ್ವಾಸ್ ಸೇರ್ಪಡೆಯೊಂದಿಗೆ, ಈ ಕಾಮನಬಿಲ್ಲು ಮೈತ್ರಿ ಈಗ ಸೋತಿದೆ. ಕಾಂಗ್ರೆಸ್ ಯಾರ ವಿರುದ್ಧ ಹೋರಾಡಬೇಕು ಎಂಬುದನ್ನು ನಿರ್ಧರಿಸಬೇಕು. ಬಂಗಾಳದಲ್ಲಿ ಟಿಎಂಸಿಯನ್ನು ವಿರೋಧಿಸುವ ಮೂಲಕ ಕೇಂದ್ರದಲ್ಲಿ ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಅವರು ಹೇಳಲು ಸಾಧ್ಯವಿಲ್ಲ, ಈ ದ್ವಂದ್ವ ನೀತಿ ನಿಲ್ಲಬೇಕು ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

ಇದನ್ನೂ ಓದಿ: Interview: ಜಮ್ಮು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಮೋದಿ ಮಾಸ್ಟರ್​ ಪ್ಲಾನ್ ಜಿ20 ಸಭೆ; ಸಚಿವ ಕಿಶನ್ ರೆಡ್ಡಿ

ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬಂಗಾಳದಲ್ಲಿ ಬಿಜೆಪಿ ವಿರುದ್ಧ ಹೋರಾಡುವ ಏಕೈಕ ಶಕ್ತಿ ಎಂದು ಭಾವಿಸಿದ ಬಿಸ್ವಾಸ್ ಅವರು ಟಿಎಂಸಿಗೆ ಸೇರಿದರು ಎಂದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಮುಗಿಸಲು ಟಿಎಂಸಿ ಯತ್ನಿಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದರು.

ನಾವು ಬಂಗಾಳದಲ್ಲಿ ಬಿಜೆಪಿ ವಿರುದ್ಧ ಮಾತ್ರ ಹೋರಾಡಿದ್ದೇವೆ ಎಂದು ಭಾವಿಸಿದ ಬಿಸ್ವಾಸ್ ಅವರು ನಮ್ಮೊಂದಿಗೆ ಸೇರಲು ಬಯಸಿದ್ದರು. ನಮಗೆ ಕಾಂಗ್ರೆಸ್ ನಾಯಕರನ್ನು ಬೇಟೆಯಾಡುವ ಉದ್ದೇಶವಿಲ್ಲ. ನಾನು ಹಾಗೆ ಮಾಡಬೇಕಾದರೆ, ಮುರ್ಷಿದಾಬಾದ್ ಜಿಲ್ಲೆಯ ಜನಸಂಪರ್ಕ ಅಭಿಯಾನದ ಸಮಯದಲ್ಲಿ ನಾನು ಅವರನ್ನು ಸೇರಲು ಹೇಳಬಹುದಿತ್ತು. ಅನೇಕ ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಸಂಸದರು ಟಿಎಂಸಿ ನಾಯಕತ್ವದೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ ಬಂಗಾಳದ ಆಡಳಿತ ಪಕ್ಷವು ಪ್ರತಿಪಕ್ಷಗಳ ಒಗ್ಗಟ್ಟಿನ ಸಲುವಾಗಿತನ್ನ ಬಾಗಿಲು ಮುಚ್ಚಿದೆ ಎಂದು ಅಭಿಷೇಕ್ ಹೇಳಿದ್ದಾರೆ.

ಕಾಂಗ್ರೆಸ್ ಅನ್ನು ತ್ಯಜಿಸಿದ “ದೇಶದ್ರೋಹಿ” ಎಂಬ ಆರೋಪಗಳನ್ನು ನಿರಾಕರಿಸಿದ ಬಿಸ್ವಾಸ್, ಸಾಗರದಿಘಿ ವಿಧಾನಸಭಾ ಭಾಗದಲ್ಲಿ ಕಾಂಗ್ರೆಸ್‌ನ ಸಂಘಟನೆ ಅಷ್ಟೊಂದು ಬಲಿಷ್ಠವಾಗಿದ್ದರೆ 2021ರಲ್ಲಿ ಆ ಸ್ಥಾನವನ್ನು ಪಕ್ಷ ಗೆಲ್ಲುತ್ತಿತ್ತು. ಆದರೆ ಅದು ಆಗಲಿಲ್ಲ. ನನ್ನ ಒಲವಿನಿಂದಲೇ ನಾನು ಆ ಸ್ಥಾನವನ್ನು ಗೆದ್ದಿದ್ದೇನೆ. ಬಿಜೆಪಿ ವಿರುದ್ಧ ಹೋರಾಟದಿಂದ ಬಂಗಾಳದ ಕಾಂಗ್ರೆಸ್ ವಿಮುಖವಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ