ನವದೆಹಲಿ: ಕರ್ನಾಟಕದ ಹಿಜಾಬ್ ವಿವಾದಕ್ಕೆ (Hijab Row) ವಿದೇಶಗಳ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಸಮವಸ್ತ್ರ ವಿವಾದ ಕರ್ನಾಟಕ ಹೈಕೋರ್ಟ್ನಲ್ಲಿದೆ. ವಿವಾದ ಸಂವಿಧಾನದ ಚೌಕಟ್ಟಿನಲ್ಲಿ ಬಗೆಹರಿಯಲಿದೆ. ಹಿಜಾಬ್ ವಿವಾದಕ್ಕೆ ಬೇರೆಯವರ ಪ್ರೇರೆಣೆಯಿಂದ ಪ್ರತಿಕ್ರಿಯೆಗಳು ಬರುತ್ತಿವೆ. ಅಂತಹ ಪ್ರೇರೇಪಿತ ಹೇಳಿಕೆಗಳನ್ನ ನಾವು ಸ್ವಾಗತಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ (Ministry of External Affairs) ವಕ್ತಾರ ಅರಿಂದಾಮ್ ಬಗ್ಚಿ (Arindam Bagchi) ಪ್ರಕಟಣೆ ಹೊರಡಿಸಿದ್ದಾರೆ. ಇದಕ್ಕೂ ಮುನ್ನ ರಾಜ್ಯದ ಹಿಜಾಬ್ ವಿವಾದಕ್ಕೆ ಅಮೇರಿಕಾದ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿ ರಶಾದ್ ಹುಸೇನ್ ಟ್ವೀಟ್ ಮಾಡಿ ಪ್ರತಿಕ್ರಿಯೆ ಹಂಚಿಕೊಂಡಿದ್ದರು. ಅವರು ತಮ್ಮ ಟ್ವೀಟ್ನಲ್ಲಿ, ಧಾರ್ಮಿಕ ಉಡುಗೆಯ ಆಯ್ಕೆ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಸೇರಿದೆ. ಕರ್ನಾಟಕ ರಾಜ್ಯ ಧಾರ್ಮಿಕ ಉಡುಗೆಯನ್ನ ನಿರ್ಧರಿಸಬಾರದು. ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸುವುದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಮಹಿಳೆಯರು, ಹುಡುಗಿಯರನ್ನು ತುಳಿಯಲಾಗುತ್ತಿದೆ’ ಎಂದು ಟ್ವೀಟ್ನಲ್ಲಿ ತಿಳಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತದ ವಿದೇಶಾಂಗ ಸಚಿವಾಲಯ ಇಂತಹ ಹೇಳಿಕೆಗಳನ್ನು ಸ್ವಾಗತಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ ಯಾವುದೇ ದೇಶಗಳ ಹೆಸರನ್ನು ಉಲ್ಲೇಖಿಸಿಲ್ಲ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಾಮ್ ಬಗ್ಚಿ ಹಂಚಿಕೊಂಡ ಟ್ವೀಟ್ ಇಲ್ಲಿದೆ:
Our response to media queries on India’s reaction to comments by some countries on dress code in some educational institutions in Karnataka:https://t.co/Mrqa0M8fVr pic.twitter.com/pJlGmw82Kp
— Arindam Bagchi (@MEAIndia) February 12, 2022
ಕರ್ನಾಟಕದಲ್ಲಿ ಪ್ರಸ್ತುತ ಹಿಜಾಬ್ ವಿವಾದ ಜೋರಾಗಿದೆ. ಉಡುಪಿಯ ಕಾಲೇಜೊಂಡದರಲ್ಲಿ ಹುಟ್ಟಿಕೊಂಡ ವಿವಾದ ಈಗ ರಾಜ್ಯಾದ್ಯಂದ ಹರಡಿದೆ. ಇಂದು ಬೆಂಗಳೂರಿನಲ್ಲಿಯೂ ವಿವಾದದ ಕಿಡಿ ಕಾಣಿಸಿಕೊಂಡಿದೆ. ಕರ್ನಾಟಕ ಹೈಕೋರ್ಟ್ ಸದ್ಯ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಧಾರ್ಮಿಕ ಗುರುತುಗಳನ್ನು ಕಾಲೇಜು ಆವರಣದೊಳಗೆ ಬಳಸದಂತೆ ಮೌಖಿಕ ಆದೇಶ ನೀಡಿದೆ. ಈ ಕುರಿತ ಪೂರ್ಣ ವಿಚಾರಣೆ ನಡೆಯಬೇಕಿದೆ.
ಸದ್ಯ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹೈಕೋರ್ಟ್ ಕಾಲೇಜು ನಡೆಸುವಂತೆ ಸೂಚಿಸಿದ್ದರೂ, ಸರ್ಕಾರ ಫೆಬ್ರವರಿ 16ರವರೆಗೆ ಜೆಯನ್ನು ವಿಸ್ತರಿಸಿದೆ. ಪರೀಕ್ಷೆಗಳು ನಿಗದಿಯಂತೆ ನಡೆಯಲಿದ್ದು, ಆನ್ಲೈನ್ ತರಗತಿಗಳು ನಡೆಯುತ್ತವೆ ಎಂದು ಸರ್ಕಾರ ತಿಳಿಸಿದೆ. ಕರ್ನಾಟಕ ಸರ್ಕಾರ ಇಂದು ಫೆಬ್ರವರಿ 15ರವರೆಗೆ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಇದನ್ನೂ ಓದಿ:
ಮುಸ್ಲಿಮರ ಹಿಜಾಬ್ ಮುಟ್ಟಲು ಬಂದವರ ಕೈ ಕತ್ತರಿಸುತ್ತೇನೆ; ಸಮಾಜವಾದಿ ಪಾರ್ಟಿ ನಾಯಕಿಯಿಂದ ಎಚ್ಚರಿಕೆ
ಕರ್ನಾಟಕ ಹಿಜಾಬ್ ವಿವಾದ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಭಾರತದ ಗುಪ್ತಚರ ಸಂಸ್ಥೆಗಳು