ಪ್ರೀತಿಗೆ ಒಪ್ಪದ ಅಮ್ಮನ ಹತ್ಯೆ ಮಾಡಿದ ಬಾಲಕಿ; ವಿಡಿಯೋ ಕಾಲ್​​ನಲ್ಲೇ ಕೊಲೆ ಮಾಡುವುದನ್ನು ಕಲಿಸಿದ ಪ್ರಿಯತಮ

ಘಟನೆ ನಡೆದಿದ್ದು ಜುಲೈ 10ರ ಮಧ್ಯರಾತ್ರಿ. ಇತ್ತೀಚೆಗೆ ಬೆಳಕಿಗೆ ಬಂದಿದೆ. ತನ್ನ ಪ್ರೀತಿಗೆ ಒಪ್ಪಿಗೆ ಕೊಡದ ಅಮ್ಮನ ಮೇಲೆ ಸಿಟ್ಟಾಗಿದ್ದ ಬಾಲಕಿ ತನ್ನ ಪ್ರಿಯತಮನೊಂದಿಗೆ ಸೇರಿ ಈ ಕೃತ್ಯ ನಡೆಸಿದ್ದಾಳೆ.

ಪ್ರೀತಿಗೆ ಒಪ್ಪದ ಅಮ್ಮನ ಹತ್ಯೆ ಮಾಡಿದ ಬಾಲಕಿ; ವಿಡಿಯೋ ಕಾಲ್​​ನಲ್ಲೇ ಕೊಲೆ ಮಾಡುವುದನ್ನು ಕಲಿಸಿದ ಪ್ರಿಯತಮ
ಪ್ರಾತಿನಿಧಿಕ ಚಿತ್ರ
Edited By:

Updated on: Aug 06, 2021 | 9:58 AM

ಫರಿದಾಬಾದ್: ಅಪ್ರಾಪ್ತೆ (Minor)ಯೊಬ್ಬಳು ಅಮ್ಮನನ್ನೇ ಹತ್ಯೆ ಮಾಡಿದ ದುರಂತ ಘಟನೆ ಹರ್ಯಾಣದ ಫರಿದಾಬಾದ್​ ಜಿಲ್ಲೆಯಲ್ಲಿ ನಡೆದಿದೆ. ಈಕೆಗೆ 16 ವರ್ಷ. 18ವರ್ಷದ ಯುವಕನೊಬ್ಬನನ್ನು ಪ್ರೀತಿ ಮಾಡಿದ್ದಳು. ಆತನೂ ಈಕೆಯನ್ನು ಪ್ರೀತಿಸುತ್ತಿದ್ದ. ಆದರೆ ಇವರ ಸಂಬಂಧಕ್ಕೆ ಬಾಲಕಿಯ ಅಮ್ಮನ ವಿರೋಧವಿತ್ತು. ಇದರಿಂದ ಕೋಪಗೊಂಡ ಹುಡುಗಿ, ಅಮ್ಮನನ್ನು ಹತ್ಯೆ ಮಾಡಿದ್ದಾಳೆ. ಇದೊಂದು ಶಾಕಿಂಗ್​ ಘಟನೆ ಎಂದು ಪೊಲೀಸರೇ ಹೇಳಿದ್ದಾರೆ. ಸದ್ಯ ಆರೋಪಿಗಳಾದ ಬಾಲಕಿ ಮತ್ತು ಆಕೆಯ ಪ್ರಿಯತಮ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.  

ಘಟನೆ ನಡೆದಿದ್ದು ಜುಲೈ 10ರ ಮಧ್ಯರಾತ್ರಿ. ಇತ್ತೀಚೆಗೆ ಬೆಳಕಿಗೆ ಬಂದಿದೆ. ತನ್ನ ಪ್ರೀತಿಗೆ ಒಪ್ಪಿಗೆ ಕೊಡದ ಅಮ್ಮನ ಮೇಲೆ ಸಿಟ್ಟಾಗಿದ್ದ ಬಾಲಕಿ ತನ್ನ ಪ್ರಿಯತಮನೊಂದಿಗೆ ಸೇರಿ ಈ ಕೃತ್ಯ ನಡೆಸಿದ್ದಾಳೆ. ಹತ್ಯೆಯಾದ ದಿನ ಬಾಲಕಿಯ ಬಾಯ್​ಫ್ರೆಂಡ್​ ತಾನಿದ್ದಲ್ಲಿಂದಲೇ ಕುಳಿತು ವಿಡಿಯೋ ಕಾಲ್​ ಮೂಲಕ ಆಕೆಗೆ ಸೂಚನೆ ನೀಡುತ್ತಿದ್ದ. ಅವನು ಹೇಳಿದ್ದನ್ನು ಕೇಳುತ್ತ ಅಮ್ಮನನ್ನು ಕೊಂದಿದ್ದಳು. ನಂತರ ಬಾಲಕಿಯ ಸೋದರ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

ಜುಲೈ 10ರಂದು ಅಪ್ರಾಪ್ತೆಯ ಬಾಯ್​ಫ್ರೆಂಡ್ ಮೊದಲು ಆಕೆಯ ಮನೆ ಬಳಿ ಬಂದು ನಿದ್ದೆ ಮಾತ್ರೆ ಕೊಟ್ಟು ಹೋಗಿದ್ದ. ನಂತರ ಮನೆಗೆ ಹೋಗಿದ್ದ. ಅಂದು ರಾತ್ರಿ ವಿಡಿಯೋ ಕಾಲ್​ ಮೂಲಕ ಆ ಮಾತ್ರೆಯನ್ನು ಹೇಗೆ ಕೊಡಬೇಕು? ಎಷ್ಟು ಕೊಡಬೇಕು? ಏನು ಮಾಡಬೇಕು ಎಂಬಿತ್ಯಾದಿ ಸೂಚನೆ ನೀಡಿದ್ದ. ಅದನ್ನು ನೋಡಿಕೊಂಡು ಈ ಬಾಲಕಿ ಅಮ್ಮನಿಗೆ ನಿದ್ದೆ ಮಾತ್ರೆ ಕೊಟ್ಟಿದ್ದಳು. ಲಿಂಬೆ ಪಾನಕದಲ್ಲಿ ಬೆರೆಸಿಕೊಟ್ಟು ಹತ್ಯೆ ಮಾಡಿದ್ದಾಳೆ.  ಇಬ್ಬರನ್ನೂ ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಲಾಗಿದೆ. 18 ವರ್ಷದ ಯುವಕನನ್ನು ಜೈಲಿಗೆ ಹಾಕಲಾಗುತ್ತದೆ ಮತ್ತು ಹುಡುಗಿ ಇನ್ನೂ ಅಪ್ರಾಪ್ತಳಾಗಿದ್ದರಿಂದ ಬಾಲಾಪರಾಧ ಕೇಂದ್ರಕ್ಕೆ ಕಳಿಸುತ್ತೇವೆ ಎಂದು ಫರಿದಾಬಾದ್​ ಪೊಲೀಸ್​ ಪಿಆರ್​ಒ ಸ್ಯೂಬ್​ ಸಿಂಗ್​ ತಿಳಿಸಿದ್ದಾರೆ.

ಇದನ್ನೂ ಓದಿ: ‘ಅಂದು ನನ್ನ ಜೀವನ ಮುಗಿಯಿತು ಅಂದುಕೊಂಡಿದ್ದೆ’; ಭೀಕರ ಅಪಘಾತ ನೆನಪಿಸಿಕೊಂಡ ಮಂಜು ಪಾವಗಡ

Tokyo Olympics: ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟ ಕುಸ್ತಿಪಟು ಭಜರಂಗ್‌ ಪುನಿಯ: ಸೀಮಾ ಬಿಸ್ಲಾಗೆ ಸೋಲು

Published On - 9:54 am, Fri, 6 August 21