AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶೇಷ ಸ್ಥಾನಮಾನ ರದ್ದುಗೊಳಿಸಿ 2ವರ್ಷ; ಶ್ರೀನಗರದಲ್ಲಿ ರಾಷ್ಟ್ರಧ್ವಜ ಹಾರಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್​ ಚುಗ್

ಶ್ರೀನಗರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ತರುಣ್​ ಚುಗ್​, ಜಮ್ಮು-ಕಾಶ್ಮೀರದಲ್ಲಿ ಅದೆಷ್ಟೋ ದಶಕಗಳ ನಂತರ ಈಗ ಪಾಕಿಸ್ತಾನ ಬೆಂಬಲಿತ ಉಗ್ರರಿಗೆ ತೀವ್ರ ಹಿನ್ನಡೆಯಾಗಿದೆ. ಕಾಶ್ಮೀರದ ಜನರು ನಿರಾಳವಾಗಿ ಉಸಿರಾಡುತ್ತಿದ್ದಾರೆ ಎಂದರು.

ವಿಶೇಷ ಸ್ಥಾನಮಾನ ರದ್ದುಗೊಳಿಸಿ 2ವರ್ಷ; ಶ್ರೀನಗರದಲ್ಲಿ ರಾಷ್ಟ್ರಧ್ವಜ ಹಾರಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್​ ಚುಗ್
ಜಮ್ಮು-ಕಾಶ್ಮೀರದಲ್ಲಿ ಆಗಸ್ಟ್​ 2ರಂದು ತರುಣ್​ ಚುಗ್​ ಸೇರಿ ಹಲವು ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Aug 06, 2021 | 2:19 PM

Share

ಜಮ್ಮು-ಕಾಶ್ಮಿರದ ವಿಶೇಷ ಸ್ಥಾನಮಾನ (Jammu-Kashmir Special Status) ರದ್ದುಗೊಳಿಸಿದ ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಜಮ್ಮು-ಕಾಶ್ಮೀರದ ಉಸ್ತುವಾರಿ ತರುಣ್​ ಚುಗ್ (Tarun Chug)​​ ಶ್ರೀನಗರದಲ್ಲಿ ಅಖಂಡ ಭಾರತದ ಧ್ವಜ ತ್ರಿವರ್ಣ ಧ್ವಜ (National Flag) ವನ್ನು ಹಾರಿಸಿದರು. ನಂತರ ಮಾತನಾಡಿ, ಇದು ಕಾಶ್ಮೀರದ ಪಾಲಿಗೆ ಐತಿಹಾಸಿಕ ದಿನವಾಗಿದೆ ಎಂದು ಹೇಳಿದರು. ಮೆಹಬೂಬಾ ಮುಫ್ತಿ ಮತ್ತು ಅಬ್ದುಲ್ಲಾ ಕುಟುಂಬಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಕಾಶ್ಮೀರದ ಹೆಸರು ಬಳಸಿಕೊಳ್ಳುತ್ತಿವೆ ಎಂದೂ ಆರೋಪಿಸಿದರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದ ಆರ್ಟಿಕಲ್​ 370ನ್ನು ರದ್ದುಗೊಳಿಸಿದ ಬಳಿಕ ಇಲ್ಲಿ ಹಲವು ಬದಲಾವಣೆಗಳಾಗಿವೆ. ಅದರಲ್ಲೂ ಮುಖ್ಯವಾಗಿ ಇಲ್ಲಿನ ವಿಭಜನಕಾರಿ ಮತ್ತು ಭಯೋತ್ಪಾದಕ ಶಕ್ತಿಗಳಿಗೆ ದೊಡ್ಡಮಟ್ಟದಲ್ಲಿ ಹಿನ್ನಡೆಯಾಗಿದೆ. ಇನ್ನು ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿ ಯುಗ ಶುರುವಾಗಿದೆ. ಈ ಪ್ರದೇಶ ಪ್ರಗತಿಯೆಡೆಗೆ ಸಾಗುತ್ತಿದೆ ಎಂಬ ಭಾವ ಇಲ್ಲಿನ ಜನರಲ್ಲಿ ಮೂಡಿದೆ. ಒಂದು ಹೊಸ ಆಶಾವಾದ ಹುಟ್ಟಿದೆ ಎಂದು ತರುಣ್ ಚುಗ್​ ಹೇಳಿದರು. ಹಾಗೇ, ಗುಪ್ಕಾರ್​ ಮೈತ್ರಿಕೂಟವನ್ನು, ಗುಪ್ಕಾರ್ ಗ್ಯಾಂಗ್​ ಎಂದು ಉಲ್ಲೇಖಿಸಿ ವ್ಯಂಗ್ಯ ಮಾಡಿದರು.

ಶ್ರೀನಗರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ತರುಣ್​ ಚುಗ್​, ಜಮ್ಮು-ಕಾಶ್ಮೀರದಲ್ಲಿ ಅದೆಷ್ಟೋ ದಶಕಗಳ ನಂತರ ಈಗ ಪಾಕಿಸ್ತಾನ ಬೆಂಬಲಿತ ಉಗ್ರರಿಗೆ ತೀವ್ರ ಹಿನ್ನಡೆಯಾಗಿದೆ. ಕಾಶ್ಮೀರದ ಜನರು ನಿರಾಳವಾಗಿ ಉಸಿರಾಡುತ್ತಿದ್ದಾರೆ. ಅದೆಷ್ಟೋ ಜನರಲ್ಲಿ ದೇಶ-ವಿರೋಧಿ ಭಾವನೆಗಳು ತಳೆದಿದ್ದವು..ಅದೀಗ ಅಭಿವೃದ್ಧಿ ಮತ್ತು ಪ್ರಗತಿಯ ಅಂತರ್ಗತ ವಿಚಾರವಾಗಿ ಬದಲಾಗಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನೂ ವೃದ್ಧಿಸಲಾಗಿದೆ. ಹಾಗಾಗಿ ಒಟ್ಟಾರೆ ಜಮ್ಮು-ಕಾಶ್ಮೀರ ಹಲವು ವಿಚಾರದಲ್ಲಿ ಗಮನಾರ್ಹವಾಗಿ ಸುಧಾರಣೆಕಂಡಿದೆ ಎಂದು ಹೇಳಿದರು

ಇದನ್ನೂ ಓದಿ: ಕೋಟಿ ಒಡೆಯ ಜಮೀರ್ ಮೇಲೆ ಇ.ಡಿ ಕಣ್ಣು, ಇಂದು ನಾಳೆ ದಾಖಲೆಗಳ ಪರಿಶೀಲನೆ ಬಳಿಕ ವಿಚಾರಣೆಗೆ ಕರೆಯುವ ಸಾಧ್ಯತೆ

Repo Rate: ಆರ್​ಬಿಐ ರೆಪೋ ದರ ಶೇ 4 ಹಾಗೂ ರಿವರ್ಸ್ ರೆಪೋ ದರ ಶೇ 3.35ರಲ್ಲಿ ಮುಂದುವರಿಕೆ

BJP National General Secretary Tarun Chugh unfurls the tricolor in Srinagar on the occasion of 5th August

Published On - 11:14 am, Fri, 6 August 21