AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

E Madhusudhanan Death: ಎಐಎಡಿಎಂಕೆ ಹಿರಿಯ ನಾಯಕ, ಪ್ರೆಸಿಡಿಯಂ ಅಧ್ಯಕ್ಷ ಇ. ಮಧುಸೂದನನ್ ನಿಧನ

2007ರಿಂದಲೂ ಮಧುಸೂದನನ್​ ಅವರು ಪಕ್ಷದ ಪ್ರೆಸಿಡಿಯಮ್​ ಅಧ್ಯಕ್ಷರಾಗಿದ್ದರು. ಎಐಎಡಿಎಂಕೆ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್​ ಅವರ ಉತ್ಕಟ ಅಭಿಮಾನಿಯಾಗಿದ್ದರು.

E Madhusudhanan Death: ಎಐಎಡಿಎಂಕೆ ಹಿರಿಯ ನಾಯಕ, ಪ್ರೆಸಿಡಿಯಂ ಅಧ್ಯಕ್ಷ ಇ. ಮಧುಸೂದನನ್ ನಿಧನ
ಇ.ಮಧುಸೂದನನ್​
TV9 Web
| Edited By: |

Updated on: Aug 06, 2021 | 11:58 AM

Share

ಚೆನ್ನೈ: ಎಐಎಡಿಎಂಕೆ ಹಿರಿಯ ನಾಯಕ (AIADMK Senior Leader), ಮಾಜಿ ಸಚಿವರ ಪಕ್ಷಗಳ ಪ್ರೆಸಿಡಿಯಂ ಅಧ್ಯಕ್ಷರೂ ಆಗಿದ್ದ ಇ. ಮಧುಸೂದನನ್ (E Madhusudhanan)​ ಅವರು ಇಂದು ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 81ವರ್ಷ ವಯಸ್ಸಾಗಿತ್ತು. ಬಹು ಅಂಗಾಂಗ ಸಮಸ್ಯೆಯಿಂದ ಅವರು ಜುಲೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವರ್ಷ ಏಪ್ರಿಲ್​ನಲ್ಲಿ ಮಧುಸೂಧನನ್ ಅವರ ಪತ್ನಿ ಸಿ.ಜೀವಾ ಕೊವಿಡ್ 19 (Covid 19) ಸೋಂಕಿನಿಂದ ತೀರಿಕೊಂಡಿದ್ದರು. ಈ ದಂಪತಿಗೆ ಮಕ್ಕಳಿಲ್ಲ.

ಎಐಎಡಿಎಂಕೆ ಸಂಘಟಕ ಒ.ಪನೀರಸೆಲ್ವಂ ಮತ್ತು ಜಂಟಿ ಸಂಘಟಕ ಇ.ಕೆ.ಪಳನಿಸ್ವಾಮಿ ಅವರು ಮಧುಸೂದನನ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹಾಗೇ, ಪಕ್ಷದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಹಾಗೇ, ಪಕ್ಷದ ಬಾವುಟವನ್ನು ಅರ್ಧ ಎತ್ತರಕ್ಕೆ ಹಾರಿಸಲಾಗುವುದು ಎಂದೂ ಹೇಳಿದ್ದಾರೆ.

2007ರಿಂದಲೂ ಮಧುಸೂದನನ್​ ಅವರು ಪಕ್ಷದ ಪ್ರೆಸಿಡಿಯಮ್​ ಅಧ್ಯಕ್ಷರಾಗಿದ್ದರು. ಎಐಎಡಿಎಂಕೆ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್​ ಅವರ ಉತ್ಕಟ ಅಭಿಮಾನಿಯಾಗಿದ್ದರು. ಹಾಗೇ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ತುಂಬ ನಿಷ್ಠಾವಂತರಾಗಿದ್ದರು. 1991-96ರವರೆಗೆ ಕೈಮಗ್ಗ ಮತ್ತು ಜವಳಿ ಖಾತೆ ಸಚಿವರಾಗಿದ್ದರು. ಅದಕ್ಕೂ ಮೊದಲು 1984ರಲ್ಲಿ ಇವರನ್ನು ಎಂಜಿಆರ್​ ಮದ್ರಾಸ್ ವಿಧಾನಪರಿಷತ್​​ಗೆ ನಾಮನಿರ್ದೇಶನ ಮಾಡಿದ್ದರು. ಅದಾದ ನಂತರ ಡಾ. ರಾಧಾಕೃಷ್ಣನಗರದಲ್ಲಿ ಗೆದ್ದು ಶಾಸಕರಾದ ಅವರು 1991ರಲ್ಲಿ ಜಯಲಲಿತಾ ಕ್ಯಾಬಿನೆಟ್​ ಸೇರಿದ್ದರು. ಇದೀಗ ಪಕ್ಷ ಒಬ್ಬ ಹಿರಿಯ ನಾಯಕನನ್ನು ಕಳೆದುಕೊಂಡಿದೆ.

ಇದನ್ನೂ ಓದಿ: Anna Bhagya Scheme Rice: ಪೊದೆಯಲ್ಲಿ ಬಚ್ಚಿಟ್ಟಿದ್ದ 146 ಚೀಲ ಅನ್ನಭಾಗ್ಯ ಅಕ್ಕಿ ವಶ

LPG Cashback Offer: ಪೇಟಿಎಂ ಮೂಲಕ ಎಲ್​ಪಿಜಿ ಸಿಲಿಂಡರ್​ ಬುಕ್​ ಮಾಡಿ 2700 ರೂ. ತನಕ ಕ್ಯಾಶ್​ಬ್ಯಾಕ್ ಪಡೆಯಿರಿ

AIADMK Presidium Chairman E Madhusudhanan and Senior Leader E Madhusudhanan Died

Follow Us
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ