AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿ ಒಡೆಯ ಜಮೀರ್ ಮೇಲೆ ಇ.ಡಿ ಕಣ್ಣು, ಇಂದು ನಾಳೆ ದಾಖಲೆಗಳ ಪರಿಶೀಲನೆ ಬಳಿಕ ವಿಚಾರಣೆಗೆ ಕರೆಯುವ ಸಾಧ್ಯತೆ

Zameer Ahmed Khan: ಇಡಿ ತೆಗೆದುಕೊಂಡು ಹೋದ ದಾಖಲೆಗಳ ಪರಿಶೀಲನೆ ಮಾಡಿ ಮತ್ತೆ ಜಮೀರ್ರನ್ನ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಇಡಿಯಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.

ಕೋಟಿ ಒಡೆಯ ಜಮೀರ್ ಮೇಲೆ ಇ.ಡಿ ಕಣ್ಣು, ಇಂದು ನಾಳೆ ದಾಖಲೆಗಳ ಪರಿಶೀಲನೆ ಬಳಿಕ ವಿಚಾರಣೆಗೆ ಕರೆಯುವ ಸಾಧ್ಯತೆ
ಶಾಸಕ ಜಮೀರ್ ಅಹಮದ್ ಖಾನ್
TV9 Web
| Updated By: ಆಯೇಷಾ ಬಾನು|

Updated on:Aug 06, 2021 | 11:17 AM

Share

ಬೆಂಗಳೂರು: ಜುಲೈ 5ರಂದು ಇ.ಡಿ(ED) ಅಧಿಕಾರಿಗಳು ಏಕಕಾಲಕ್ಕೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್‌ ಖಾನ್ಗೆ(Zameer Ahmed Khan) ಸಂಬಂಧಿಸಿದ ಆರು ಕಡೆ ದಾಳಿ ನಡೆಸಿದ್ರು. ಜಮೀರ್‌ಗೆ ಸೇರಿದ ಮೂರು ಮನೆ, ಯುಬಿ ಸಿಟಿಯಲ್ಲಿರೋ ಫ್ಲ್ಯಾಟ್, ನ್ಯಾಷನಲ್‌ ಟ್ರಾವೆಲ್ಸ್ ಕಚೇರಿ, ಕಂಟೋನ್ಮೆಂಟ್ ಬಳಿಯ ಬಂಗಲೆ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಸತತ 23 ಗಂಟೆಗಳ ಕಾಲ ಇಡಿ ಶೋಧ ಕಾರ್ಯ ನಡೆಸಿ SBI, ಜನತಾ ಕೋ-ಆಪರೇಟಿವ್ ಬ್ಯಾಂಕ್ನ ವಹಿವಾಟು ಸ್ಟೇಟ್ಮೆಂಟ್, ಬ್ಯಾಂಕ್‌ ದಾಖಲೆಗಳನ್ನ ಕೊಂಡೊಯ್ದಿದ್ದಾರೆ. ಹಾಗೂ ಇಡಿ ಅಧಿಕಾರಿಗಳು 2004ರಲ್ಲಿ ಇದ್ದ ಬಂಬೂ ಬಜಾರ್‌ ಬಳಿಯ ಜಾಗದ ಸ್ಟ್ಯಾಂಡರ್ಡ್‌ ರೇಟ್‌ ಲೆಕ್ಕ ಹಾಕಿದ್ದಾರೆ. ಮನೆ ನಿರ್ಮಾಣದ ಸಮಯದಲ್ಲಿ ಹಣ ಪಾವತಿ ಮಾಹಿತಿ, ಆದಾಯ ಮೂಲದ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಹಾಗೂ ಭವ್ಯ ಬಂಗಲೆ, ಜಮೀನಿನ ಹಿಂದಿನ ವೆಚ್ಚದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಇ.ಡಿ ತೆಗೆದುಕೊಂಡು ಹೋದ ದಾಖಲೆಗಳ ಪರಿಶೀಲನೆ ಮಾಡಿ ಮತ್ತೆ ಜಮೀರ್ರನ್ನ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಇಡಿಯಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.

ಜಮೀರ್ ನಿವಾಸಕ್ಕೆ ಮಾಜಿ ಪೊಲೀಸ್ ಅಧಿಕಾರಿ ಜಿ.ಎ ಬಾವ ಆಗಮಿಸಿದ್ದು ಜಮೀರ್ ನಿದ್ದೆಯಲ್ಲಿರುವ ಕಾರಣ ಭೇಟಿಗೆ ನಿರಾಕರಿಸಿದ್ದಾರೆ. ಹೀಗಾಗಿ ವಾಪಸ್ ತೆರಳಿದ್ದಾರೆ.

ಜಮೀರ್​ ಮನೆ ಮೇಲೆ ED ದಾಳಿ ಹಿಂದೆ ಡಿಕೆಶಿ ಕೈವಾಡ ಜಮೀರ್ ಮನೆ ಮೇಲೆ ದಾಳಿ ಕೇಸ್​ ಸಂಬಂಧ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಇ.ಡಿ ದಾಳಿಕೆ ಡಿಕೆ ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಪದೇಪದೆ ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುತ್ತಿದ್ದರು. ಇದು ಡಿ.ಕೆ.ಶಿವಕುಮಾರ್‌ಗೆ ಅಜೀರ್ಣವಾಗಿರಬೇಕು. ಡಿ.ಕೆ.ಶಿವಕುಮಾರ್‌ಗೆ ಐಟಿ, ಇಡಿ ಲಿಂಕ್ ಜಾಸ್ತಿ ಬೆಳೆದಿದೆ. ಹೀಗಾಗಿ ಅವರೇ ಏಕೆ ED ದಾಳಿ ಮಾಡಿಸಿರಬಾರದು? ಐಟಿ, ಇಡಿ ಅಧಿಕಾರಿಗಳು ಅವರ ಕೆಲಸ ಅವರು ಮಾಡ್ತಾರೆ. ವ್ಯವಹಾರಗಳು ಸರಿ ಇದ್ದಾಗ ಹೆದರುವ ಅಗತ್ಯವೇ ಇರಲ್ಲ. ಐಟಿ, ಇಡಿಯವರು ಕೇಳಿದ ದಾಖಲೆಗಳನ್ನು ಕೊಟ್ಟರೆ ಸಾಕು. ಇದನ್ನ ನೋಡಿದರೆ ಏನೋ ವ್ಯವಹಾರ ಸರಿ ಇಲ್ಲ ಅನಿಸ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಜಮೀರ್‌ಗೆ ಕಂಟಕವಾಗಿದ್ದೇ 90 ಕೋಟಿಯ ಅವ್ಯವಹಾರ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿ ವಿಚಾರವಾಗಿ ಡೀಲ್ ಮಾಡಿದ್ದ ಜಮೀರ್, ರಿಚ್‌ಮಂಡ್‌ ಟೌನ್ ಬಳಿಯ ಆಸ್ತಿಯನ್ನ ಬರೋಬ್ಬರಿ 90 ಕೋಟಿ ರೂಪಾಯಿಗೆ ಮಾರಿದ್ರಂತೆ. ಆದ್ರೆ, 90 ಕೋಟಿಗೆ ಸೇಲ್ ಆಗಿದ್ದ ಆಸ್ತಿಯನ್ನ ಕೇವಲ 9.38 ಕೋಟಿ ರೂಪಾಯಿಗೆ ಮಾರಿದ್ದಾಗೆ ಜಮೀರ್ ಮಾಹಿತಿ ನೀಡಿದ್ರು ಎನ್ನಲಾಗಿದೆ. ಈ ಡೀಲ್‌ನಲ್ಲಿ 80 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಅಂತಾ ಆರೋಪಿಸಿ ಬಿಜೆಪಿ ಮುಖಂಡ ಎನ್‌.ಆರ್ ರಮೇಶ್ ಇಡಿಗೆ ದೂರು ಕೊಟ್ಟಿದ್ರು. ಇದೇ 90 ಕೋಟಿ ರೂಪಾಯಿ ಮೇಲೆ ಕಣ್ಣಿಟ್ಟಿದ್ದ ಇ.ಡಿ ದಾಳಿ ನಡೆಸಿದೆ ಎನ್ನಲಾಗಿದೆ.

ಕೋಟಿ ಕೋಟಿ ಬೆಲೆ ಬಾಳುವ ಭವ್ಯ ಬಂಗಲೆ ಇನ್ನು ಜಮೀರ್‌ ಕಣ್ಣು ಕುಕ್ಕೋ ಬಂಗಲೆಯನ್ನು ಕಟ್ಟಿದ್ದಾರೆ. ಅರಮನೆಯನ್ನೂ ಮೀರಿಸೋ ಭವ್ಯ ಬಂಗಲೆಯನ್ನ ಕೋಟಿ ಕೋಟಿ ವೆಚ್ಚದಲ್ಲಿ ಜಮೀರ್ ನಿರ್ಮಿಸಿದ್ರು. ಆದ್ರೀಗ ಕೋಟಿ ಕೋಟೆಯನ್ನು ಇಂಚಿಂಚೂ ಅಳತೆ ಮಾಡಿರೋ ಇ.ಡಿ, ಬಂಗಲೆಗೆ ಸಂಬಂಧಿಸಿದ ದಾಖಲೆ ಪರಿಶೀಲಿಸಿದೆ. ಇದೇ ಬಂಗಲೆಗೆ ಸುರಿದ ದುಡ್ಡಿನ ಮೂಲವೇ ಈಗ ಜಮೀರ್‌ಗೆ ಉರುಳಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.

ಅಂದಹಾಗೆ ಮೂರು ಮನೆಯ ಜತೆಗೆ ಯುಬಿ ಸಿಟಿಯಲ್ಲಿ ಫ್ಲ್ಯಾಟ್ ಹೊಂದಿರುವ ಜಮೀರ್, ಕಂಟೋನ್ಮೆಂಟ್ ಬಳಿ ಕೋಟ್ಯಂತರ ಭವ್ಯ ಬಂಗಲೆಯನ್ನ ನಿರ್ಮಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಬ್ಯುಸಿನೆಸ್ ಮನ್ ಆಗಿರೋ ಜಮೀರ್, ನ್ಯಾಷನಲ್ ಟ್ರಾವೆಲ್ಸ್ ನಡೆಸ್ತಿದ್ದು ಕೋಟ್ಯಂತರ ರೂಪಾಯಿ ವ್ಯವಹಾರ ಮಾಡಿರೋ ಆರೋಪವಿದೆ. ಹಾಗೆಯೇ ರಿಚ್‌ಮಂಡ್ ಟೌನ್‌ ಬಳಿ ₹7 ಕೋಟಿ ರೂಪಾಯಿ ಒಡೆತನದ ಸ್ಥಿರಾಸ್ತಿ, ಶಿವಾಜಿನಗರದ ಸ್ಟೇಷನ್ ರಸ್ತೆ ಬಳಿಯೂ ₹30 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅಲ್ಲದೇ, ಸದಾಶಿವನಗರದಲ್ಲಿ ₹2.34 ಕೋಟಿ ಆಸ್ತಿ ಹೊಂದಿರುವ ಜಮೀರ್, ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸ್ತಿರುವ ಅನುಮಾನವೂ ಇಡಿ ಅಧಿಕಾರಿಗಳಿಗೆ ಇದೆ.

ಇದನ್ನೂ ಓದಿ: ಇ.ಡಿ. ಅಧಿಕಾರಿಗಳು ಸಮಾಧಾನಗೊಂಡಿದ್ದಾರೆ; ಯಾವುದೇ ನೋಟಿಸ್ ಕೊಟ್ಟಿಲ್ಲ: ಶಾಸಕ ಜಮೀರ್

Published On - 11:05 am, Fri, 6 August 21