ಕರ್ನಾಟಕ, ದೆಹಲಿ ಸೇರಿದಂತೆ 259 ಸ್ಥಳಗಳಲ್ಲಿ ನಾಳೆ ಮಾಕ್ ಡ್ರಿಲ್; ಇಲ್ಲಿದೆ ಪೂರ್ತಿ ಪಟ್ಟಿ

ಭಾರತದಲ್ಲಿ ನಾಳೆ ರಕ್ಷಣಾ ಅಣಕು ಕವಾಯತು ನಡೆಯಲಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಹೆಚ್ಚಿರುವ ಭದ್ರತಾ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವಾಲಯ ಬುಧವಾರ ಮಾಕ್ ಡ್ರಿಲ್ ನಡೆಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಈ ಮಾಕ್ ಡ್ರಿಲ್​ನಲ್ಲಿ ಭಾಗವಹಿಸುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಲ್ಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಕರ್ನಾಟಕ, ದೆಹಲಿ ಸೇರಿದಂತೆ 259 ಸ್ಥಳಗಳಲ್ಲಿ ನಾಳೆ ಮಾಕ್ ಡ್ರಿಲ್; ಇಲ್ಲಿದೆ ಪೂರ್ತಿ ಪಟ್ಟಿ
Representative Image

Updated on: May 06, 2025 | 4:06 PM

ನವದೆಹಲಿ, ಮೇ 6: ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Terror Attack) ನಂತರ ಭಾರತ-ಪಾಕಿಸ್ತಾನ ಉದ್ವಿಗ್ನತೆ ಹೆಚ್ಚುತ್ತಿದೆ. ಎರಡೂ ದೇಶಗಳ ನಡುವೆ ಯುದ್ಧ ಉಂಟಾಗಬಹುದೆಂಬ ಭೀತಿ ಎದುರಾಗಿದೆ. ಈ ನಡುವೆ ಕೇಂದ್ರ ಗೃಹ ಸಚಿವಾಲಯ ನಾಳೆ ( ಮೇ 7) ಮಾಕ್ ಡ್ರಿಲ್ (Mock Drill) ನಡೆಸುವಂತೆ ರಾಜ್ಯಗಳಿಗೆ ಸೂಚಿಸಿತ್ತು. ನಾಳೆ ಭಾರತದ 259 ಸ್ಥಳಗಳಲ್ಲಿ ನಾಗರಿಕ ರಕ್ಷಣಾ ಡ್ರಿಲ್ ನಡೆಯಲಿದೆ. ಈ ಅಣಕು ಡ್ರಿಲ್‌ನಲ್ಲಿ ವಾಯುದಾಳಿ ಸೈರನ್‌ಗಳು, ಬ್ಲ್ಯಾಕ್‌ಔಟ್ ಪ್ರೋಟೋಕಾಲ್‌ಗಳು ಮತ್ತು ಸಾರ್ವಜನಿಕ ತರಬೇತಿ ನಡೆಯಲಿದ್ದು, ಅಧಿಕಾರಿಗಳು ಟಾರ್ಚ್‌ಗಳು, ಮೇಣದಬತ್ತಿಗಳು ಮತ್ತು ಹಣವನ್ನು ಸಿದ್ಧವಾಗಿಟ್ಟುಕೊಳ್ಳಲು ನಾಗರಿಕರಿಗೆ ಸೂಚಿಸಿದ್ದಾರೆ.

ಆಪತ್ಕಾಲದಲ್ಲಿ ಅಥವಾ ಯುದ್ಧದ ಸಮಯದಲ್ಲಿ ಮಾಡಿಕೊಳ್ಳಬೇಕಾದ ಸಿದ್ಧತೆಯನ್ನು ಪರಿಶೀಲಿಸಲು ಗೃಹ ಸಚಿವಾಲಯ ಸೋಮವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಣಕು ಕವಾಯತುಗಳನ್ನು ನಡೆಸುವಂತೆ ನಿರ್ದೇಶನ ನೀಡಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ಮಧ್ಯೆ ಈ ನಿರ್ದೇಶನ ಬಂದಿದೆ. ಮೇ 7 ರಂದು ದೇಶಾದ್ಯಂತ ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ಈ ಕವಾಯತುಗಳನ್ನು ನಡೆಸಲಾಗುವುದು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ. “ಪ್ರತಿಕೂಲ ದಾಳಿ”ಯ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ವಾಯುದಾಳಿ ಎಚ್ಚರಿಕೆ ಸೈರನ್‌ಗಳ ಕಾರ್ಯಾಚರಣೆಗೆ ಸಿದ್ಧತೆಯನ್ನು ಪರಿಶೀಲಿಸುವುದು ಮತ್ತು ಜನರಿಗೆ ರಕ್ಷಣಾ ಅಂಶಗಳ ಕುರಿತು ತರಬೇತಿ ನೀಡುವುದು ತರಬೇತಿ ಈ ಮಾಕ್​ ಡ್ರಿಲ್​ನಲ್ಲಿ ಇರಲಿದೆ.

ಇದನ್ನೂ ಓದಿ
ಮಾಕ್ ಡ್ರಿಲ್ ಅಂದ್ರೇನು? ಬೆಂಗಳೂರಿನಲ್ಲಿ ಎಲ್ಲೆಲ್ಲಿ ನಡೆಯುತ್ತೆ?
ಭಾರತದ ಕಟ್ಟುನಿಟ್ಟಿನ ಕ್ರಮಗಳಿಂದ ಪಾಕ್ ಪರಿಸ್ಥಿತಿ ಮುಂದೆ ಏನಾಗುತ್ತೆ?
ಯುದ್ಧ ಭೀತಿ ಇದೆ ಎಂದ ಪಾಕ್ ರಕ್ಷಣಾ ಸಚಿವ ಖ್ವಾಜಾ
ಯುದ್ಧ ಮಾಡದಿರಲು ಭಾರತ- ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯ ಮುಖ್ಯಸ್ಥ ಒತ್ತಾಯ

ಇದನ್ನೂ ಓದಿ: ಯುದ್ಧಕ್ಕೆ ಸಜ್ಜಾಯಿತಾ ಭಾರತ?; ಮೇ 7ರಂದು ರಕ್ಷಣಾ ಕವಾಯತು ನಡೆಸಲು ರಾಜ್ಯಗಳಿಗೆ ಸೂಚನೆ

ಈ ಮಾಕ್ ಡ್ರಿಲ್ ಕ್ರ್ಯಾಶ್-ಬ್ಲಾಕ್ಔಟ್ ಕ್ರಮಗಳು, ಪ್ರಮುಖ ಸ್ಥಾವರಗಳು ಮತ್ತು ಕಟ್ಟಡಗಳ ಆರಂಭಿಕ ಮರೆಮಾಚುವಿಕೆ, ಜನರನ್ನು ಸ್ಥಳಾಂತರಿಸುವ ಯೋಜನೆಗಳನ್ನು ನವೀಕರಿಸುವುದನ್ನು ಒಳಗೊಂಡಿರುತ್ತವೆ. ಭಾರತೀಯ ವಾಯುಪಡೆ (IAF)ಯೊಂದಿಗೆ ಹಾಟ್‌ಲೈನ್ ಮತ್ತು ರೇಡಿಯೋ-ಸಂವಹನ ಸಂಪರ್ಕಗಳ ಕಾರ್ಯಾಚರಣೆ, ನಿಯಂತ್ರಣ ಕೊಠಡಿಗಳು ಮತ್ತು ನೆರಳು ನಿಯಂತ್ರಣ ಕೊಠಡಿಗಳ ಕಾರ್ಯವನ್ನು ಪರೀಕ್ಷಿಸುವುದನ್ನು ಮಾಕ್ ಡ್ರಿಲ್ ಒಳಗೊಂಡಿರುತ್ತವೆ. ನಾಳೆ ಯಾವೆಲ್ಲ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ ಎಂಬ ಪಟ್ಟಿ ಇಲ್ಲಿದೆ.


ಇದನ್ನೂ ಓದಿ: ಭಾರತ ಪಾಕಿಸ್ತಾನ ಯುದ್ಧ ಕಾರ್ಮೋಡ: ಹೇಗಿರಲಿದೆ ಅಣಕು ಕಾರ್ಯಾಚರಣೆ? ಸಾರ್ವಜನಿಕರ ಜವಾಬ್ದಾರಿ ಏನು?

ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ಬುಧವಾರ ನಡೆಯಲಿರುವ ರಾಷ್ಟ್ರವ್ಯಾಪಿ ಅಣಕು ಡ್ರಿಲ್‌ನಲ್ಲಿ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 259 ಜಿಲ್ಲೆಗಳು ಭಾಗವಹಿಸಲಿವೆ. ಅವುಗಳಲ್ಲಿ ಕರ್ನಾಟಕದ ಬೆಂಗಳೂರು ನಗರ, ಮಲ್ಲೇಶ್ವರ, ರಾಯಚೂರು ಕೂಡ ಸೇರಿವೆ. ಹಾಗೇ, ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಂತಹ ಗಡಿ ರಾಜ್ಯಗಳಲ್ಲಿ ನೆಲೆಗೊಂಡಿರುವ ಜಿಲ್ಲೆಗಳಿಗೆ ಬಹು-ಅಪಾಯದ ಸನ್ನಿವೇಶಗಳನ್ನು ಅನುಕರಿಸುವ ಡ್ರಿಲ್ ಅನ್ನು ನಡೆಸಲು ಸೂಚನೆ ನೀಡಲಾಗಿದೆ. ದೆಹಲಿ, ಚೆನ್ನೈ, ಮುಂಬೈ, ಬೆಂಗಳೂರು, ಅಹಮದಾಬಾದ್ ಮುಂತಾದ ಮೆಟ್ರೋ ಸಿಟಿಗಳಲ್ಲೂ ಮಾಕ್ ಡ್ರಿಲ್ ನಡೆಯಲಿದೆ.


ಇಂದು ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಮೇ 7ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಮಾಕ್ ಡ್ರಿಲ್​ಗೆ ಮುಂಚಿತವಾಗಿ ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ನಾಗರಿಕ ರಕ್ಷಣಾ ಮುಖ್ಯಸ್ಥರು ಭಾಗವಹಿಸಿದ್ದಾರೆ. 1971ರ ನಂತರ ಇದೇ ಮೊದಲ ಬಾರಿಗೆ ಮಾಕ್ ಡ್ರಿಲ್ ನಡೆಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ