AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯರಿಲ್ಲ, ಫೋನ್​ ನೋಡಿಕೊಂಡು ಗರ್ಭಿಣಿಯ ಹೊಟ್ಟೆ ಕೊಯ್ದ ನರ್ಸ್, ಅವಳಿ ಶಿಶುಗಳ ಸಾವು

 ಮೊಬೈಲ್​ನಲ್ಲಿ ವೈದ್ಯರ ಸೂಚನೆ ಪಡೆಯುತ್ತಾ,  ನರ್ಸ್ ಒಬ್ಬರು​ ಗರ್ಭಿಣಿ(Pregnant)ಗೆ ಸಿಸೇರಿಯನ್ ಮಾಡಿದ್ದಾರೆ, ಶಸ್ತ್ರಚಿಕಿತ್ಸೆ ನಡೆದು ಕೆಲವೇ ನಿಮಿಷಗಳಲ್ಲಿ ಅವಳಿ ಶಿಶುಗಳು ಸಾವನ್ನಪ್ಪಿವೆ. ಈ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯಕೀಯ ನಿರ್ಲಕ್ಷ್ಯದ ಕುರಿತು ಆಕ್ರೋಶ ಭುಗಿಲೆದ್ದಿದೆ. ಆಸ್ಪತ್ರೆಯಲ್ಲಿಲ್ಲದ ವೈದ್ಯರು ಅಲ್ಲೆಲ್ಲೋ ಕುಳಿತುಕೊಂಡು ನರ್ಸ್​ಗೆ ಸೂಚನೆ ನೀಡುತ್ತಿದ್ದರು. ಗರ್ಭಿಣಿ ಐವಿಎಫ್​ ಮಾಡಿಸಿಕೊಂಡಿದ್ದರು. ಈ ಪ್ರಕರಣವು ಸಾಧಾರಣ ಹೆರಿಗೆಯಂತಿರಲಿಲ್ಲ, ತುಂಬಾ ಸೂಕ್ಷ್ಮವಾಗಿತ್ತು.

ವೈದ್ಯರಿಲ್ಲ, ಫೋನ್​ ನೋಡಿಕೊಂಡು ಗರ್ಭಿಣಿಯ ಹೊಟ್ಟೆ ಕೊಯ್ದ ನರ್ಸ್, ಅವಳಿ ಶಿಶುಗಳ ಸಾವು
ಮಗು Image Credit source: Live Action
ನಯನಾ ರಾಜೀವ್
|

Updated on: May 06, 2025 | 2:46 PM

Share

ತೆಲಂಗಾಣ, ಮೇ 06:   ಮೊಬೈಲ್​ನಲ್ಲಿ ವೈದ್ಯರ ಸೂಚನೆ ಪಡೆಯುತ್ತಾ,  ನರ್ಸ್ ಒಬ್ಬರು​ ಗರ್ಭಿಣಿ(Pregnant)ಗೆ ಸಿಸೇರಿಯನ್ ಮಾಡಿದ್ದಾರೆ, ಶಸ್ತ್ರಚಿಕಿತ್ಸೆ ನಡೆದು ಕೆಲವೇ ನಿಮಿಷಗಳಲ್ಲಿ ಅವಳಿ ಶಿಶುಗಳು ಸಾವನ್ನಪ್ಪಿವೆ. ಈ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯಕೀಯ ನಿರ್ಲಕ್ಷ್ಯದ ಕುರಿತು ಆಕ್ರೋಶ ಭುಗಿಲೆದ್ದಿದೆ.

ಆಸ್ಪತ್ರೆಯಲ್ಲಿಲ್ಲದ ವೈದ್ಯರು ಅಲ್ಲೆಲ್ಲೋ ಕುಳಿತುಕೊಂಡು ನರ್ಸ್​ಗೆ ಸೂಚನೆ ನೀಡುತ್ತಿದ್ದರು. ಗರ್ಭಿಣಿ ಐವಿಎಫ್​ ಮಾಡಿಸಿಕೊಂಡಿದ್ದರು. ಈ ಪ್ರಕರಣವು ಸಾಧಾರಣ ಹೆರಿಗೆಯಂತಿರಲಿಲ್ಲ, ತುಂಬಾ ಸೂಕ್ಷ್ಮವಾಗಿತ್ತು. ವಾರಗಳು ತುಂಬುವ ಮುನ್ನವೇ 18 ವಾರಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಶಿಶುಗಳನ್ನು ಹೊರತೆಗೆದಿದ್ದರು. ತಾಯಿಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಶಸ್ತ್ರ ಚಿಕಿತ್ಸೆ ಮುಗಿದು ಕೆಲವೇ ಗಂಟೆಗಳಲ್ಲಿ ಶಿಶುಗಳು ಸಾನ್ನಪ್ಪಿವೆ.

ಈ ಘಟನೆಯು ಆಸ್ಪತ್ರೆಯ ಹೊರಗೆ ಭಾರಿ ಪ್ರತಿಭಟನೆಗೆ ಕಾರಣವಾಯಿತು. ವೈದ್ಯರು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಇರುವ ಬದಲು ಮೊಬೈಲ್​ ಮೂಲಕ ಸೂಚನೆ ನೀಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಸಂಬಂಧಿಕರು ಧರಣಿ ನಡೆಸಿದರು ಮತ್ತು ನಂತರ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಅಧಿಕೃತ ದೂರು ದಾಖಲಿಸಿದರು, ತೀವ್ರ ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಹೊರಿಸಿದರು.

ಇದನ್ನೂ ಓದಿ
Image
ಬೇಸಿಗೆಯ ಧಗೆಯಿಂದ ಕಷ್ಟ ಆಗುತ್ತಾ? ಚಿಂತೆ ಬಿಟ್ಟು ಹಸಿ ಈರುಳ್ಳಿ ಸೇವನೆ ಮಾಡಿ
Image
ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಾ? ಬುಧವಾರ, ಶನಿವಾರ ಸಂಜೆ ಈ ರೀತಿ ಮಾಡಿ
Image
ಹಾಸಿಗೆ ಬಿಟ್ಟು ನೆಲದ ಮೇಲೆ ಮಲಗುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದೋ, ಅಲ್ಲವೋ?
Image
ನಿಮ್ಮ ನಾಲಿಗೆ ನೀಡುವ ಈ ರೀತಿಯ ಸಂದೇಶಗಳನ್ನು ಎಂದಿಗೂ ಕಡೆಗಣಿಸಬೇಡಿ

ಮತ್ತಷ್ಟು ಓದಿ: ಗರ್ಭಿಣಿಯರು ಯಾವುದೇ ಕಾರಣಕ್ಕೂ ಬ್ಯೂಟಿ ಪಾರ್ಲರ್​​​ಗಳಲ್ಲಿ ಇವುಗಳನ್ನು ಮಾಡಿಸಬಾರದು

ಸಾರ್ವಜನಿಕರ ಆಕ್ರೋಶಕ್ಕೆ ಸ್ಪಂದಿಸಿದ ರಂಗಾರೆಡ್ಡಿ ಜಿಲ್ಲೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಸೇರಿದಂತೆ, ಖಾಸಗಿ ಆಸ್ಪತ್ರೆಯನ್ನು ತಕ್ಷಣವೇ ಪರಿಶೀಲಿಸಿದರು. ಯಾವುದೇ ಶಸ್ತ್ರಚಿಕಿತ್ಸೆ ನಡೆಸಲು, ಹಿರಿಯ ವೈದ್ಯರು ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ದೈಹಿಕವಾಗಿ ಹಾಜರಿರಬೇಕು,ಪ್ರಸೂತಿ ತಜ್ಞರಿಂದ ದೂರವಾಣಿ ಮೂಲಕ ಸೂಚನೆಗಳನ್ನು ಪಡೆಯುತ್ತಾ ನರ್ಸ್​ ಆಪರೇಷನ್ ನಡೆಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ ತನಿಖೆ ನಡೆಸುತ್ತಿದ್ದೇವೆ, ಸಧ್ಯಕ್ಕೆ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ