ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ರಷ್ಯಾ(Russia) ಜೊತೆಗಿನ ಬಾಂಧವ್ಯ ದೀರ್ಘಕಾಲದ ಮತ್ತು ಮಹೋನ್ನತವಾಗಿದೆ. ಮೋದಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಶೃಂಗ ಮಟ್ಟದ ಮಾತುಕತೆಗಾಗಿ ಮಾಸ್ಕೋಗೆ ಭೇಟಿ ನೀಡುತ್ತಿರುವಾಗ, ಪ್ರಧಾನಿ ನರೇಂದ್ರ ಮೋದಿಯವರ ಜೀವನ ಪಯಣವನ್ನು ವಿವರಿಸುವ ವೆಬ್‌ಸೈಟ್ ‘ಮೋದಿ’ಆರ್ಕೈವ್’ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯದಿಂದ ಉಭಯ ದೇಶಗಳ ನಡುವಿನ ಸಂಬಂಧವನ್ನು ಹೇಗೆ ಬಲಪಡಿಸಿದರು ಎಂಬುದನ್ನು ಹಂಚಿಕೊಂಡಿದೆ.
ಮೋದಿ ಆರ್ಕೈವ್ ತನ್ನ ಎಕ್ಸ್ ಪೋಸ್ಟ್ನಲ್ಲಿ ರಷ್ಯಾದೊಂದಿಗೆ ನಿಕಟ ಸಂಬಂಧವನ್ನು ಸ್ಥಾಪಿಸಲು ನರೇಂದ್ರ ಮೋದಿಯವರು ತೆಗೆದುಕೊಂಡಿರುವ ಕ್ರಮಗಳ ಪಟ್ಟಿ ಮಾಡುವ ಫೋಟೊಗಳ ಸಹಿತ ಮಾಹಿತಿ ಹಂಚಿಕೊಂಡಿದೆ.
ನವೆಂಬರ್ 2001 ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಯೋಗದ ಭಾಗವಾಗಿ ಪ್ರಧಾನಿ ಮೋದಿ ಮೊದಲು ರಷ್ಯಾಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗಿದೆ.
ಮತ್ತಷ್ಟು ಓದಿ: ನಾಲ್ಕು ದಿನಗಳ ವಿದೇಶ ಪ್ರವಾಸ, ಇಂದು ರಷ್ಯಾಗೆ ಹೊರಟ ಪ್ರಧಾನಿ ಮೋದಿ, ಹೇಳಿದ್ದೇನು?
ನರೇಂದ್ರ ಮೋದಿ ಅವರು ನವೆಂಬರ್ 6, 2001 ರಂದು ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಭಾರತ-ರಷ್ಯಾ ಶೃಂಗಸಭೆಗಾಗಿ ಮಾಸ್ಕೋಗೆ ತೆರಳಿದಾಗ ಅದು ಮೋದಿಯವರ ಮೊದಲ ರಷ್ಯಾ ಭೇಟಿಯಾಗಿತ್ತು.
ಪ್ರಧಾನಿ ಮೋದಿ ಭೇಟಿಯ ಹಲವು ನೆನಪುಗಳನ್ನು ಹೊಂದಿದ್ದಾರೆ ಮತ್ತು 2019 ರಲ್ಲಿ ನಡೆದ ಸಮಾರಂಭದಲ್ಲಿ ಅವರು ಅಧ್ಯಕ್ಷ ಪುಟಿನ್ ಅವರ ಆತಿಥ್ಯವನ್ನು ನೆನಪಿಸಿಕೊಂಡರು. ಸಣ್ಣ ರಾಜ್ಯದವರಾಗಿದ್ದರೂ ಮತ್ತು ಅಂತಾರಾರಾಷ್ಟ್ರೀಯ ವೇದಿಕೆಗೆ ತುಲನಾತ್ಮಕವಾಗಿ ಹೊಸಬರಾಗಿದ್ದರೂ ಮೋದಿಯನ್ನು ಬಹಳ ಗೌರವದಿಂದ ನಡೆಸಿಕೊಂಡರು ಎಂದಿದೆ.
The longstanding relationship between India and Russia has deep historical roots, significantly strengthened by Prime Minister @narendramodi during his tenure as Chief Minister of Gujarat.
Narendra Modi’s first visit to #Russia was on November 6, 2001, when he was the Chief… pic.twitter.com/E0fBxhMip0
— Modi Archive (@modiarchive) July 8, 2024
ರಷ್ಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅವರು ತಮ್ಮ ರಾಜ್ಯ, ಗುಜರಾತ್ ಮತ್ತು ರಷ್ಯಾದ ಪ್ರಾಂತ್ಯದ ಅಸ್ಟ್ರಾಖಾನ್ ನಡುವಿನ ಸಹಕಾರಕ್ಕಾಗಿ ಪ್ರೋಟೋಕಾಲ್ ಒಪ್ಪಂದಕ್ಕೆ ಸಹಿ ಹಾಕಿದರು, ಅಲ್ಲಿ ಎರಡೂ ರಾಜ್ಯಗಳು ಪೆಟ್ರೋಲಿಯಂ ಮತ್ತು ಹೈಡ್ರೋಕಾರ್ಬನ್, ವ್ಯಾಪಾರ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕದಲ್ಲಿ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡವು.
2006ರಲ್ಲಿ ಮತ್ತೆ ಭೇಟಿಯಾದರು, ಆ ಸಮಯದಲ್ಲಿ ಗವರ್ನರ್ ಅಲೆಕ್ಸಾಂಡರ್ ಝಿಲ್ಕಿನ್ ಅವರನ್ನು ಭೇಟಿಯಾಗಿ, ಒಪ್ಪಂದವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು 2009 ರಲ್ಲಿ ಮಾಸ್ಕೋದಲ್ಲಿ ನಡೆದ ಇಂಧನ ಸಮ್ಮೇಳನದಲ್ಲಿ ರಷ್ಯನ್ ಭಾಷೆಯಲ್ಲಿ ಪ್ರಸ್ತುತಿ ನೀಡಿ ರಷ್ಯಾದ ಉದ್ಯಮಿಗಳನ್ನು ಬೆರಗುಗೊಳಿಸಿದರು.
ಮತ್ತಷ್ಟು ಓದಿ:
PM Modi Russia Visit: ಪ್ರಧಾನಿ ನರೇಂದ್ರ ಮೋದಿ ರಷ್ಯಾ ಪ್ರವಾಸ, ಇಂದಿನಿಂದ ಶುರು
ನರೇಂದ್ರ ಮೋದಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದರು ಮತ್ತು 4 ನೇ ಅಂತಾರಾಷ್ಟ್ರೀಯ ಇಂಧನ ಸಪ್ತಾಹದ ಸಮ್ಮೇಳನದಲ್ಲಿ ಭಾಗವಹಿಸಲು ರಷ್ಯಾಕ್ಕೆ ಭೇಟಿ ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲು ಮಾಸ್ಕೋಗೆ ತೆರಳಿದಾಗ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. ಜುಲೈ 8 ಮತ್ತು 9 ರಂದು ನಡೆಯಲಿರುವ 22 ನೇ ಭಾರತ-ರಷ್ಯಾ ಶೃಂಗಸಭೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಆಹ್ವಾನಿಸಿದ್ದಾರೆ.
ನನ್ನ ಸ್ನೇಹಿತ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಹಕಾರದ ಎಲ್ಲಾ ಅಂಶಗಳನ್ನು ಪರಿಶೀಲಿಸಲು ಮತ್ತು ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ನಾನು ಸಿದ್ಧನಾಗಿದ್ದೇನೆ ಎಂದು ಮೋದಿ ಹೇಳಿದ್ದಾರೆ.
2019 ರಲ್ಲಿ ಅವರು ರಷ್ಯಾದ ದೂರದ ಪೂರ್ವ ಪ್ರದೇಶದಲ್ಲಿ ವ್ಲಾಡಿವೋಸ್ಟಾಕ್‌ನಲ್ಲಿ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಿದಾಗ ಅದು ಅವರ ಕೊನೆಯ ಭೇಟಿಯಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ