AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಬಾರಿ ಪ್ರಮಾಣವಚನ ಸ್ವೀಕರಿಸಿದ ಮಧ್ಯಪ್ರದೇಶ ಬಿಜೆಪಿ ಶಾಸಕ

ತಪ್ಪಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಶಾಸಕ ರಾಮ್​ನಿವಾಸ್ ಎರಡನೇ ಬಾರಿಗೆ ಮತ್ತೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಎರಡು ಬಾರಿ ಪ್ರಮಾಣವಚನ ಸ್ವೀಕರಿಸಿದ ಮಧ್ಯಪ್ರದೇಶ ಬಿಜೆಪಿ ಶಾಸಕ
ರಾಮ್​ನಿವಾಸ್
ನಯನಾ ರಾಜೀವ್
|

Updated on: Jul 08, 2024 | 3:07 PM

Share

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್(Mohan Yadav) ಅವರು ಅಧಿಕಾರ ವಹಿಸಿಕೊಂಡ ಸುಮಾರು ಏಳು ತಿಂಗಳ ನಂತರ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ರಾಮ್​ನಿವಾಸ್ ರಾವತ್ ಅವರು ಸೋಮವಾರ ಮಧ್ಯಪ್ರದೇಶದಲ್ಲಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾವತ್ ಪ್ರಮಾಣವಚನ ಸ್ವೀಕರಿಸುವಾಗ ರಾಜ್ಯದ ಮಂತ್ರಿ ಎನ್ನುವ ಬದಲು ರಾಜ್ಯ ಮಂತ್ರಿ ಎಂದು ತಪ್ಪಾಗಿ ಓದಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಬೇಕಾಯಿತು.

ಇದರಿಂದ ಅವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೋ ಅಥವಾ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೋ ಎಂಬ ಗೊಂದಲ ಮೂಡಿತ್ತು. ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿದಾಗ, ರಾವತ್ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಲಾಯಿತು.

ಮತ್ತಷ್ಟು ಓದಿ: ಶಾಲಾ ಪಠ್ಯಕ್ರಮದಲ್ಲಿ ‘ತುರ್ತು ಪರಿಸ್ಥಿತಿ’ ಕುರಿತು ಪಾಠ

ರಾಜಭವನದ ಸಾಂದೀಪನಿ ಸಭಾಂಗಣದಲ್ಲಿ ಆರಂಭಿಕ ಕಾರ್ಯಕ್ರಮ ನಡೆದರೆ, ನಂತರ ಅದೇ ಕಾರ್ಯಕ್ರಮವು ರಾಜ್ಯಪಾಲರ ಭವನದ ದರ್ಬಾರ್ ಹಾಲ್‌ನಲ್ಲಿ ನಡೆಯಿತು. ಸಿಎಂ ಯಾದವ್ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ದರ್ಬಾರ್ ಹಾಲ್‌ನಲ್ಲಿ ರಾಜ್ಯಪಾಲ ಮಂಗುಭಾಯ್ ಪಟೇಲ್ ಅವರು ರಾವತ್ ಅವರಿಗೆ ಮತ್ತೆ ಪ್ರಮಾಣವಚನ ಬೋಧಿಸಿದರು.

ನಂತರ, ರಾಜಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮೋಹನ್ ಯಾದವ್, ರಾಮ್​ನಿವಾಸ್ ರಾವತ್ ಇಂದು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಶಿಯೋಪುರ ಜಿಲ್ಲೆಯ ವಿಜಯಪುರದಿಂದ ಆರು ಬಾರಿ ಶಾಸಕರಾಗಿರುವ ರಾವತ್ ಅವರು ಏಪ್ರಿಲ್ 30 ರಂದು ಲೋಕಸಭೆ ಪ್ರಚಾರದ ವೇಳೆ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡರು.

ರಾವತ್ ಬಿಜೆಪಿ ಸೇರಿದರೂ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ಇನ್ನೂ ರಾಜೀನಾಮೆ ನೀಡಿಲ್ಲ. ರಾವತ್ ಸೇರ್ಪಡೆಯೊಂದಿಗೆ, ಮುಖ್ಯಮಂತ್ರಿ ಸೇರಿದಂತೆ ಯಾದವ್ ಸಂಪುಟದ ಬಲವು 32 ಕ್ಕೆ ಏರಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ