ಶಾಲಾ ಪಠ್ಯಕ್ರಮದಲ್ಲಿ ‘ತುರ್ತು ಪರಿಸ್ಥಿತಿ’ ಕುರಿತು ಪಾಠ

ಮಧ್ಯಪ್ರದೇಶದ ಶಾಲೆಗಳಲ್ಲಿ ಇನ್ನುಮುಂದೆ 1975-77ರಲ್ಲಿ ದೇಶ ಕಂಡ ತುರ್ತು ಪರಿಸ್ಥಿತಿಯ ಕುರಿತು ಪಾಠವನ್ನು ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದ್ದಾರೆ. ಆ ಸಮಯದಲ್ಲಿ ದೌರ್ಜನ್ಯ ಮತ್ತು ದಮನವನ್ನು ವಿರೋಧಿಸಿದವರು ನಡೆಸಿದ ಹೋರಾಟವನ್ನು ವಿವರಿಸುವ ಅಧ್ಯಾಯವನ್ನು ರಾಜ್ಯದ ಶಾಲಾ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಹೇಳಿದರು.

ಶಾಲಾ ಪಠ್ಯಕ್ರಮದಲ್ಲಿ ‘ತುರ್ತು ಪರಿಸ್ಥಿತಿ’ ಕುರಿತು ಪಾಠ
ಮೋಹನ್ ಯಾದವ್
Follow us
ನಯನಾ ರಾಜೀವ್
| Updated By: Digi Tech Desk

Updated on:Jun 27, 2024 | 11:14 AM

ಒಂದೆಡೆ 1975ರಲ್ಲಿ ಇಂದಿರಾ ಸರ್ಕಾರ ಹೇರಿದ್ದ ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ಸದನದಲ್ಲಿ ಗದ್ದಲ ಎದ್ದಿದ್ದರೆ, ಇನ್ನೊಂದೆಡೆ ಮಧ್ಯಪ್ರದೇಶ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಅವರು ಶಾಲಾ ಪಠ್ಯಕ್ರಮದಲ್ಲಿ ತುರ್ತು ಪರಿಸ್ಥಿತಿ ಕುರಿತು ಅಧ್ಯಾಯವೊಂದನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆ. ಬುಧವಾರ ರಾಜಧಾನಿ ಭೋಪಾಲ್‌ನಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ಲೋಕತಂತ್ರ ಸೇನಾನಿ ಸಮ್ಮಾನ್ ಸಮಾರಂಭ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನರ ಹೋರಾಟಗಳನ್ನು ಸ್ಮರಿಸಿದರು.

ಅಲ್ಲದೆ ರಾಜ್ಯದ ಶಾಲೆಗಳ ಪಠ್ಯಕ್ರಮದಲ್ಲಿ ತುರ್ತು ಪರಿಸ್ಥಿತಿಯನ್ನು ಸೇರಿಸುವುದಾಗಿ ಘೋಷಿಸಲಾಗಿದೆ. ಸ್ವಾತಂತ್ರ್ಯ ಬಂದು ಕೆಲವೇ ವರ್ಷಗಳಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು, ಆದರೆ ಪ್ರಜಾಪ್ರಭುತ್ವ ಹೋರಾಟಗಾರರ ಹೋರಾಟದಿಂದ ಇಂದು ದೇಶ ಬಲಿಷ್ಠ ಪ್ರಜಾಪ್ರಭುತ್ವ ಹೊಂದಿರುವ ದೇಶವಾಗಿ ಮಾರ್ಪಟ್ಟಿದೆ ಎಂದರು.

ಮತ್ತಷ್ಟು ಓದಿ: ತುರ್ತು ಪರಿಸ್ಥಿತಿಯನ್ನು ಕರಾಳ ಅವಧಿ ಎಂದ ಸ್ಪೀಕರ್ ಓಂ ಬಿರ್ಲಾ; ಸದನದಲ್ಲಿ 2 ನಿಮಿಷ ಮೌನಾಚರಣೆ

ತುರ್ತು ಪರಿಸ್ಥಿತಿಯಲ್ಲಿ ಬಂಧಿಸಲ್ಪಟ್ಟವರನ್ನು ಮಿಸಾಬಂದಿ ಎಂದು ಕರೆಯುತ್ತಾರೆ, ಬಿಜೆಪಿ ಅವರನ್ನು ಲೋಕತಂತ್ರ ಸೇನಾನಿ ಎಂದು ಹೆಸರಿಸಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿಸಲ್ಪಟ್ಟ ಜನರನ್ನು MISA ಅಂದರೆ ಆಂತರಿಕ ಭದ್ರತಾ ಕಾಯಿದೆಯ ನಿರ್ವಹಣೆಯ ಅಡಿಯಲ್ಲಿ ಬಂಧಿಸಲಾಯಿತು.

ಪ್ರಜಾಪ್ರಭುತ್ವ ಹೋರಾಟಗಾರರಿಗೆ ಸರ್ಕಾರಿ ಅತಿಥಿ ಗೃಹಗಳಲ್ಲಿ ಮೂರು ದಿನಗಳ ಕಾಲ ಶೇ.50 ರಿಯಾಯಿತಿ ದರದಲ್ಲಿ ತಂಗಲು ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ಅವರು ಹೆದ್ದಾರಿಯಲ್ಲಿ ಟೋಲ್ ಪಾವತಿಸುವಲ್ಲಿ ವಿನಾಯಿತಿ ಪಡೆಯುತ್ತಾರೆ. ಆಯುಷ್ಮಾನ್ ಹೆಲ್ತ್ ಕಾರ್ಡ್ ಮೂಲಕ ಪ್ರಜಾಪ್ರಭುತ್ವ ಹೋರಾಟಗಾರರಿಗೆ ಚಿಕಿತ್ಸಾ ವೆಚ್ಚ ಪಾವತಿಸಲು ವಿಳಂಬ ಮಾಡುವುದಿಲ್ಲ ಎಂದು ಕೂಡ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:09 am, Thu, 27 June 24