Rahul Gandhi: ಅಯೋಧ್ಯೆಯಂತೆಯೇ ಗುಜರಾತ್‌ನಲ್ಲೂ ನರೇಂದ್ರ ಮೋದಿ, ಬಿಜೆಪಿಯನ್ನು ಸೋಲಿಸುತ್ತೇವೆ; ರಾಹುಲ್ ಗಾಂಧಿ ಸವಾಲು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಗುಜರಾತ್​ಗೆ ಭೇಟಿ ನೀಡಿದ್ದಾರೆ. ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದಾಗ ಅಲ್ಲಿನ ರೈತರು ಭೂಮಿ ಕಳೆದುಕೊಂಡರು. ರಾಮಮಂದಿರದ ಉದ್ಘಾಟನೆಗೆ ಅಯೋಧ್ಯೆಯಿಂದ ಯಾರನ್ನೂ ಆಹ್ವಾನಿಸದಿರುವುದು ಅಯೋಧ್ಯೆಯ ಜನರಲ್ಲಿ ಅಸಮಾಧಾನ ಮೂಡಿಸಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Rahul Gandhi: ಅಯೋಧ್ಯೆಯಂತೆಯೇ ಗುಜರಾತ್‌ನಲ್ಲೂ ನರೇಂದ್ರ ಮೋದಿ, ಬಿಜೆಪಿಯನ್ನು ಸೋಲಿಸುತ್ತೇವೆ; ರಾಹುಲ್ ಗಾಂಧಿ ಸವಾಲು
ರಾಹುಲ್ ಗಾಂಧಿ
Follow us
ಸುಷ್ಮಾ ಚಕ್ರೆ
|

Updated on: Jul 06, 2024 | 2:57 PM

ಅಹಮದಾಬಾದ್: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಗುಜರಾತ್ ಪ್ರವಾಸದಲ್ಲಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಜುಲೈ 6) ಅಹಮದಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಬಿಜೆಪಿಯ ಆಂದೋಲನವು ರಾಮಮಂದಿರವನ್ನು ಆಧರಿಸಿದೆ. ಇದನ್ನು ಎಲ್‌ಕೆ ಅಡ್ವಾಣಿ ಪ್ರಾರಂಭಿಸಿದರು. ಅವರು ರಥಯಾತ್ರೆಯನ್ನು ನಡೆಸಿದ್ದರು. ಅದರಲ್ಲಿ ಪ್ರಧಾನಿ ಮೋದಿ ಅಡ್ವಾಣಿ ಅವರಿಗೆ ಸಹಾಯ ಮಾಡಿದರು. ಇದೀಗ ಬಿಜೆಪಿಯವರು ರಾಮಮಂದಿರವನ್ನು ಉದ್ಘಾಟಿಸಿದ್ದಾರೆ. ಈ ಸಮಾರಂಭದಲ್ಲಿ ನಾವು ಅದಾನಿ, ಅಂಬಾನಿ ಅವರನ್ನು ನೋಡಿದ್ದೇವೆ. ಆದರೆ ಬಡವರು ಯಾರೂ ಇರಲಿಲ್ಲ” ಎಂದು ಅಹಮದಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಇಂದು ಗುಜರಾತ್​ಗೆ ಪ್ರವಾಸ; ರಾಜ್‌ಕೋಟ್, ಮೋರ್ಬಿ ದುರಂತ ಸಂತ್ರಸ್ತರ ಭೇಟಿ

ನಾವು ಬಿಜೆಪಿಯನ್ನು ಗುಜರಾತ್‌ನಲ್ಲಿ ಸೋಲಿಸಲಿದ್ದೇವೆ. ಅಯೋಧ್ಯೆಯಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಸೋಲಿಸಿದಂತೆಯೇ ಗುಜರಾತ್‌ನಲ್ಲಿಯೂ ಸೋಲಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ವಿಮಾನ ನಿಲ್ದಾಣ ನಿರ್ಮಾಣವಾದಾಗ ಅಯೋಧ್ಯೆಯ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡರು. ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆಯಿಂದ ಯಾರನ್ನೂ ಆಹ್ವಾನಿಸದಿದ್ದಕ್ಕಾಗಿ ಅಯೋಧ್ಯೆಯ ಜನರು ಅಸಮಾಧಾನಗೊಂಡಿದ್ದರು. ಅಡ್ವಾಣಿ ಅವರು ಪ್ರಾರಂಭಿಸಿದ ಚಳುವಳಿ ಅವರ ಕೇಂದ್ರವಾಗಿತ್ತು. ಇಂಡಿಯಾ ಬ್ಲಾಕ್ ಅಯೋಧ್ಯೆಯಲ್ಲಿ ಬಿಜೆಪಿಯ ಚಳವಳಿಯನ್ನು ಸೋಲಿಸಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

“ಪ್ರಧಾನಿ ಮೋದಿ ಅಯೋಧ್ಯೆಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು. ಆದರೆ ಅವರ ಸರ್ವೇಯರ್‌ಗಳು ಅವರನ್ನು ಸೋಲಿಸುತ್ತಾರೆ ಮತ್ತು ಅವರ ರಾಜಕೀಯ ಜೀವನವು ಕೊನೆಗೊಳ್ಳುತ್ತದೆ” ಎಂದು ರಾಹುಲ್ ಗಾಂಧಿ ಅಹಮದಾಬಾದ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಆಗಸ್ಟ್​​ನಲ್ಲಿ ಮೋದಿ ಸರ್ಕಾರದ ಪತನ; ಲಾಲು ಪ್ರಸಾದ್ ಯಾದವ್ ಸ್ಫೋಟಕ ಹೇಳಿಕೆ

ಲೋಕಸಭೆಯಲ್ಲಿ ರಾಹುಲ್ ಗಾಂಧಿಯ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ (ಜಿಪಿಸಿಸಿ) ಕಚೇರಿಯ ಹೊರಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ ನೀಡಿದ್ದಾರೆ. ಈ ಘರ್ಷಣೆಯ ನಂತರ, ಎರಡೂ ಕಡೆಯಿಂದ ಪರಸ್ಪರ ದೂರುಗಳು ದಾಖಲಾಗಿವೆ ಮತ್ತು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇದರಿಂದ ಐವರು ಕಾಂಗ್ರೆಸ್ ಕಾರ್ಯಕರ್ತರು ಬಂಧಿತರಾಗಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಸೇರಿದ ಸುಮಾರು 450 ಕಾರ್ಯಕರ್ತರ ವಿರುದ್ಧ ಪೊಲೀಸರೇ ಒಂದು ಎಫ್‌ಐಆರ್ ದಾಖಲಿಸಿದ್ದರೆ, ಬಿಜೆಪಿಯ ಅಹಮದಾಬಾದ್ ಘಟಕದ ಯುವ ಘಟಕ ನೀಡಿದ ದೂರಿನ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ