ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ; ಆಘಾತವಾಗಿದೆ ಎಂದ ರಾಹುಲ್ ಗಾಂಧಿ
ತಮಿಳುನಾಡು ಕಾಂಗ್ರೆಸ್ ನಾಯಕರು ತಮಿಳುನಾಡು ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ತಪ್ಪಿತಸ್ಥರನ್ನು ಶೀಘ್ರವಾಗಿ ನ್ಯಾಯದ ಮುಂದೆ ತರುವುದನ್ನು ಸರ್ಕಾರ ಖಚಿತಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕೆ ಆರ್ಮ್‌ಸ್ಟ್ರಾಂಗ್ ಅವರನ್ನು ಆರು ಮಂದಿಯ ಗ್ಯಾಂಗ್ ಶುಕ್ರವಾರ ಚೆನ್ನೈನಲ್ಲಿ ಅವರ ಮನೆಯ ಸಮೀಪವೇ ಬರ್ಬರವಾಗಿ ಹತ್ಯೆ ಮಾಡಿತ್ತು.
ದೆಹಲಿ ಜುಲೈ 06: ಚೆನ್ನೈನಲ್ಲಿ ಬಹುಜನ ಸಮಾಜ ಪಕ್ಷದ (BSP) ರಾಜ್ಯಾಧ್ಯಕ್ಷ ಕೆ ಆರ್ಮ್‌ಸ್ಟ್ರಾಂಗ್ (Armstrong) ಅವರ ಹತ್ಯೆಯಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ (LoP) ರಾಹುಲ್ ಗಾಂಧಿ (Rahul Gandhi) ಶನಿವಾರ ಹೇಳಿದ್ದಾರೆ. ಬಹುಜನ ಸಮಾಜ ಪಕ್ಷದ ತಮಿಳುನಾಡು ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಅವj ಹತ್ಯೆಯಿಂದ ತೀವ್ರ ಆಘಾತವಾಗಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅನುಯಾಯಿಗಳಿಗೆ ನನ್ನ ಸಂತಾಪಗಳು” ಎಂದು ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮಿಳುನಾಡಿನಲ್ಲಿರುವ ತಮ್ಮ ಪಕ್ಷದ ಘಟಕದ ನಾಯಕರು ರಾಜ್ಯ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.
ತಮಿಳುನಾಡು ಕಾಂಗ್ರೆಸ್ ನಾಯಕರು ತಮಿಳುನಾಡು ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ತಪ್ಪಿತಸ್ಥರನ್ನು ಶೀಘ್ರವಾಗಿ ನ್ಯಾಯದ ಮುಂದೆ ತರುವುದನ್ನು ಸರ್ಕಾರ ಖಚಿತಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕೆ ಆರ್ಮ್‌ಸ್ಟ್ರಾಂಗ್ ಅವರನ್ನು ಆರು ಮಂದಿಯ ಗ್ಯಾಂಗ್ ಶುಕ್ರವಾರ ಚೆನ್ನೈನಲ್ಲಿ ಅವರ ಮನೆಯ ಸಮೀಪವೇ ಬರ್ಬರವಾಗಿ ಹತ್ಯೆ ಮಾಡಿತ್ತು.
ರಾಹುಲ್ ಟ್ವೀಟ್
Deeply shocked by the brutal and abhorrent killing of Thiru Armstrong, the Tamil Nadu Chief of the Bahujan Samaj Party.
My heartfelt condolences go out to his family, friends and followers.
Tamil Nadu Congress leaders are in constant touch with the Government of Tamil Nadu, and…
— Rahul Gandhi (@RahulGandhi) July 6, 2024
ಚೆನ್ನೈ ಕಾರ್ಪೊರೇಷನ್‌ನ ಮಾಜಿ ಕೌನ್ಸಿಲರ್ ಆಗಿದ್ದ ಆರ್ಮ್‌ಸ್ಟ್ರಾಂಗ್ ಅವರ ಮೇಲೆ ಪೆರಂಬೂರ್‌ನಲ್ಲಿರುವ ಅವರ ಮನೆಯ ಸಮೀಪವೇ ದಾಳಿ ನಡೆಸಿದ ದುಷ್ಕರ್ಮಿಗಳ ತಂಡ ಪರಾರಿಯಾಗಿತ್ತು. ಆರ್ಮ್‌ಸ್ಟ್ರಾಂಗ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಆರ್ಮ್‌ಸ್ಟ್ರಾಂಗ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಎಂಟು ಶಂಕಿತರನ್ನು ಬಂಧಿಸಿದ್ದಾರೆ.
“ನಾವು ಇದುವರೆಗೆ ಎಂಟು ಶಂಕಿತರನ್ನು ಬಂಧಿಸಿದ್ದೇವೆ. ಇದು ಆರಂಭಿಕ ತನಿಖೆ, ಪ್ರಾಥಮಿಕ ತನಿಖೆ. ಆದ್ದರಿಂದ ಸ್ವಲ್ಪ ಸಮಯದ ನಂತರ, ಹೆಚ್ಚಿನ ಸಂಗತಿಗಳು ಮತ್ತು ಸಂದರ್ಭಗಳು ಬೆಳಕಿಗೆ ಬರುವುದರೊಂದಿಗೆ ಸ್ಪಷ್ಟ ಮತ್ತು ಉತ್ತಮ ಚಿತ್ರಣ ಹೊರಹೊಮ್ಮುತ್ತದೆ” ಎಂದು ಹೆಚ್ಚುವರಿ ಕಮಿಷನರ್ (ಉತ್ತರ) ಆಸ್ರಾ ಗಾರ್ಗ್ ಹೇಳಿದ್ದಾರೆ.
ಆರ್ಮ್‌ಸ್ಟ್ರಾಂಗ್ ಹತ್ಯೆಯ ಹಿಂದೆ ಕೆಲವು “ಎರಡರಿಂದ ಮೂರು ಅನುಮಾನಾಸ್ಪದ ಉದ್ದೇಶಗಳು” ಇವೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಶಂಕಿತರ ವಿಚಾರಣೆಯ ನಂತರವೇ ನಿಖರವಾದ ಕಾರಣ ಬೆಳಕಿಗೆ ಬರಲಿದೆ ಎಂದು ಗಾರ್ಗ್ ಹೇಳಿದರು.
ಇದನ್ನೂ ಓದಿ: Rahul Gandhi: ಅಯೋಧ್ಯೆಯಂತೆಯೇ ಗುಜರಾತ್‌ನಲ್ಲೂ ನರೇಂದ್ರ ಮೋದಿ, ಬಿಜೆಪಿಯನ್ನು ಸೋಲಿಸುತ್ತೇವೆ; ರಾಹುಲ್ ಗಾಂಧಿ ಸವಾಲು
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಆರ್ಮ್‌ಸ್ಟ್ರಾಂಗ್ ಹತ್ಯೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ತನಿಖೆಯನ್ನು ತ್ವರಿತವಾಗಿ ನಡೆಸುವಂತೆ ಮತ್ತು ಅಪರಾಧಿಗಳಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಪೊಲೀಸರಿಗೆ ಆದೇಶಿಸಿರುವುದಾಗಿ ಹೇಳಿದ್ದಾರೆ. ದುಃಖತಪ್ತ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ