Money Laundering Case : ಛತ್ತೀಸ್‌ಗಢ ಮುಖ್ಯಮಂತ್ರಿಯ ಉಪ ಕಾರ್ಯದರ್ಶಿಯನ್ನು ಬಂಧಿಸಿದ ಇಡಿ

| Updated By: ರಶ್ಮಿ ಕಲ್ಲಕಟ್ಟ

Updated on: Dec 02, 2022 | 6:27 PM

ಛತ್ತೀಸ್‌ಗಢ ಮುಖ್ಯಮಂತ್ರಿಯ ಉಪ ಕಾರ್ಯದರ್ಶಿಯನ್ನು ಕೇಂದ್ರ ಏಜೆನ್ಸಿ ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಸೌಮ್ಯ ಚೌರಾಸಿಯಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

Money Laundering Case : ಛತ್ತೀಸ್‌ಗಢ ಮುಖ್ಯಮಂತ್ರಿಯ ಉಪ ಕಾರ್ಯದರ್ಶಿಯನ್ನು ಬಂಧಿಸಿದ ಇಡಿ
Money Laundering case
Follow us on

ಛತ್ತೀಸ್‌ಗಢ: ಛತ್ತೀಸ್‌ಗಢ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿಯನ್ನು ಕೇಂದ್ರ ಏಜೆನ್ಸಿ ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಸೌಮ್ಯ ಚೌರಾಸಿಯಾ (Soumya Chaurasia) ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ.ಕಳೆದ ವರ್ಷ ಜೂನ್‌ನಲ್ಲಿ ಆದಾಯ ತೆರಿಗೆ ಇಲಾಖೆಯು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ದಾಳಿ ನಡೆಸಿದ ನಂತರ ₹ 100 ಕೋಟಿಗೂ ಹೆಚ್ಚು ಹವಾಲಾ ದಂಧೆಯನ್ನು ಪತ್ತೆಹಚ್ಚಿದೆ ಎಂದು ಹೇಳಿತ್ತು. ಹವಾಲಾ ವಹಿವಾಟಿನ ಅಡಿಯಲ್ಲಿ, ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಗೆ ಪ್ರವೇಶಿಸದೆಯೇ ನಗದು ಬೇರೆಡೆಗೆ ವರ್ಗಾವಣೆಯಾಗುತ್ತದೆ.ಫೆಬ್ರವರಿ 2020 ರಲ್ಲಿ ಚೌರಾಸಿಯಾ ಅವರ ಮನೆಯ ಮೇಲೂ ದಾಳಿ ನಡೆಸಲಾಯಿತು. ಕೇಂದ್ರೀಯ ಏಜೆನ್ಸಿಯ ದಾಳಿಯನ್ನು ಮುಖ್ಯಮಂತ್ರಿಗಳು “ರಾಜಕೀಯ ಸೇಡು” ಎಂದು ಕರೆದಿದ್ದು ಇದು ಸರ್ಕಾರವನ್ನು “ಅಸ್ಥಿರಗೊಳಿಸುವ” ಪ್ರಯತ್ನ ಎಂದಿದ್ದರು. ಬಂಧಿತ ಸರ್ಕಾರಿ ಅಧಿಕಾರಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕೇಂದ್ರ ಏಜೆನ್ಸಿಗಳ ನಿಗಾದಲ್ಲಿದ್ದರು. ಇಡಿ ಶೋಧಕ್ಕೆ  ಮುಂಚಿತವಾಗಿ ಆದಾಯ ತೆರಿಗೆ ಇಲಾಖೆಯು ಆಕೆಯ ಆಸ್ತಿಗಳ ಮೇಲೆ ದಾಳಿ ನಡೆಸಿತು. ಇಡಿ ವಿಚಾರಣೆಗೆ ಕರೆಸಿಕೊಂಡ ನಂತರ ಆಕೆಯನ್ನು ಬಂಧಿಸಲಾಯಿತು. ಕಳೆದ ಎರಡು ತಿಂಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಸೌಮ್ಯ ಅವರನ್ನು ಹಲವು ಬಾರಿ ವಿಚಾರಣೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

ಛತ್ತೀಸ್‌ಗಢದಲ್ಲಿ ಕಾರ್ಟೆಲ್‌ನಿಂದ ಸಾಗಿಸಲ್ಪಟ್ಟ ಪ್ರತಿ ಟನ್ ಕಲ್ಲಿದ್ದಲಿಗೆ ಪ್ರತಿ ಟನ್‌ಗೆ 25 ರೂಪಾಯಿಗಳ ಅಕ್ರಮ ಸುಲಿಗೆ ಮಾಡಲಾದ ಹಗರಣಕ್ಕೆ ಸಂಬಂಧಿಸಿದಂತೆ 2002 ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಇಡಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತು.

ಆದಾಯ ತೆರಿಗೆ ಇಲಾಖೆ ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಅಕ್ರಮ ಹಣ ಅವ್ಯವಹಾರ ತನಿಖೆಯನ್ನು ಪ್ರಾರಂಭಿಸಿತು. ಪ್ರಮುಖ ಸಂಚುಕೋರ, ಈ ಹಗರಣವನ್ನು ನಿರ್ಭಯದಿಂದ ಸುಗಮಗೊಳಿಸಿದ ಹಿರಿಯ ಅಧಿಕಾರಿಗಳ ಪಾತ್ರ ಮತ್ತು ಅಪರಾಧದ ಅಕ್ರಮ ಆದಾಯದ ಫಲಾನುಭವಿಗಳು ಸೇರಿದಂತೆ ಈ ಪಿತೂರಿಯ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

ಛತ್ತೀಸ್‌ಗಢ ಸಿಎಂ ಬಘೇಲ್ ಭಾನುವಾರ ಕೇಂದ್ರ ತನಿಖಾ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದು ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ‘ಹಿಂಸಾಚಾರ ಮತ್ತು ಬೆದರಿಕೆ’ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇಡಿ ಮತ್ತು ಐಟಿ ಅಧಿಕಾರಿಗಳ ಹಿಂಸಾಚಾರದ ದೂರುಗಳು ತನಗೆ ತಲುಪುತ್ತಿದ್ದು, ಇದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 5:41 pm, Fri, 2 December 22