Monkeypox Case: ಕಾಮರೆಡ್ಡಿಯಲ್ಲಿ ತೆಲಂಗಾಣದ ಮೊದಲ ಮಂಕಿಪಾಕ್ಸ್​​ ಪ್ರಕರಣ ಪತ್ತೆ

| Updated By: ಸುಷ್ಮಾ ಚಕ್ರೆ

Updated on: Jul 25, 2022 | 11:43 AM

Telangana News: ತೆಲಂಗಾಣದಲ್ಲಿ ಹೊಸ ಮಂಕಿಪಾಕ್ಸ್​ ಪ್ರಕರಣ ಪತ್ತೆಯಾಗುವ ಮೂಲಕ ಭಾರತದಲ್ಲಿ 5ನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾದಂತಾಗಿದೆ.

Monkeypox Case: ಕಾಮರೆಡ್ಡಿಯಲ್ಲಿ ತೆಲಂಗಾಣದ ಮೊದಲ ಮಂಕಿಪಾಕ್ಸ್​​ ಪ್ರಕರಣ ಪತ್ತೆ
ಮಂಕಿಪಾಕ್ಸ್​
Follow us on

ಹೈದರಾಬಾದ್: ಕೇರಳದಲ್ಲಿ ಭಾರತದ ಮೊದಲ ಮಂಕಿಪಾಕ್ಸ್​ ಪ್ರಕರಣ (Monkeypox Case) ಪತ್ತೆಯಾದಾಗಿನಿಂದ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿದೆ. ಈಗಾಗಲೇ ಕೇರಳದಲ್ಲಿ 3 ಮಂಕಿಪಾಕ್ಸ್​ ಪ್ರಕರಣಗಳು ಪತ್ತೆಯಾಗಿವೆ. ಇದರ ಬೆನ್ನಲ್ಲೇ ನೆರೆಯ ರಾಜ್ಯವಾದ ತೆಲಂಗಾಣದಲ್ಲಿ (Telangana Monkeypox) ಕೂಡ ಮೊದಲ ಮಂಕಿಪಾಕ್ಸ್​ ಕೇಸ್ ದೃಢಪಟ್ಟಿದೆ. ತೆಲಂಗಾಣದಲ್ಲಿ ಇದು ಮೊದಲ ಮಂಕಿಪಾಕ್ಸ್​ ಪ್ರಕರಣವಾಗಿದ್ದು, ಕಾಮರೆಡ್ಡಿ ಜಿಲ್ಲೆಯಲ್ಲಿ ಭಾನುವಾರ ಈ ಪ್ರಕರಣ ಪತ್ತೆಯಾಗಿದೆ.

ಕಾಮರೆಡ್ಡಿ ಜಿಲ್ಲೆಯ ಇಂದಿರಾನಗರ ಕಾಲೋನಿಯ 40 ವರ್ಷದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್​ ಲಕ್ಷಣಗಳು ಕಾಣಿಸಿಕೊಂಡಿವೆ. ಜುಲೈ 6ರಂದು ಕುವೈತ್‌ನಿಂದ ಹಿಂತಿರುಗಿದ ರೋಗಿಯನ್ನು ನಲ್ಲಕುಂಟಾದ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್​​ನಲ್ಲಿ ಇರಿಸಲಾಗಿತ್ತು. ಅವರನ್ನು ಭಾನುವಾರ ಸಂಜೆ ಪರೀಕ್ಷಿಸಿದಾಗ ಮಂಕಿಪಾಕ್ಸ್​ ತಗುಲಿರುವುದು ಖಚಿತವಾಗಿದೆ.

ಜುಲೈ 20ರಂದು ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಜುಲೈ 23ರಂದು ಅವರಿಗೆ ದದ್ದುಗಳು ಕಾಣಿಸಿಕೊಂಡಿತ್ತು. ಅವರ ಜೊತೆ ಸಂಪರ್ಕದಲ್ಲಿದ್ದ 6 ಮಂದಿಯ ಪೈಕಿ ಯಾರಿಗೂ ಯಾವುದೇ ರೋಗಲಕ್ಷಣಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ
Monkeypox: ಭಾರತದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ; ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆ
Monkeypox: ಮಕ್ಕಳಿಗೂ ವಕ್ಕರಿಸಿದ ಮಂಕಿಪಾಕ್ಸ್; ಯುಎಸ್​ನಲ್ಲಿ ಅಂಬೆಗಾಲಿಡುವ ಮಗುವಿನಲ್ಲಿ ಮಂಕಿಪಾಕ್ಸ್ ಪತ್ತೆ
Monkeypox in Kerala: ಕೇರಳದ ಮಲಪ್ಪುರಂನಲ್ಲಿ 3ನೇ ಮಂಕಿಪಾಕ್ಸ್​ ಪ್ರಕರಣ ಪತ್ತೆ

ಇದನ್ನೂ ಓದಿ: Monkeypox: ಭಾರತದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ; ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆ

ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕ ಜಿ. ಶ್ರೀನಿವಾಸ್ ರಾವ್ ಅವರು ಪ್ರಕಟಣೆಯಲ್ಲಿ ಈ ಬಗ್ಗೆ ತಿಳಿಸಿದ್ದು, ”ಖಾಸಗಿ ಆಸ್ಪತ್ರೆ ವೈದ್ಯರು ಮಂಕಿಪಾಕ್ಸ್​ ಲಕ್ಷಣಗಳನ್ನು ಗುರುತಿಸಿ ಒಬ್ಬ ವ್ಯಕ್ತಿಯನ್ನು ಕಾಮರೆಡ್ಡಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿಂದ ಅವರನ್ನು ಫೀವರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಆ ವರದಿಯ ಫಲಿತಾಂಶ ಬರುವವರೆಗೆ ಅವರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತದೆ. ಅಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುವುದು. ಆ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಹೊಂದಿದ್ದ 6 ಜನರನ್ನು ನಾವು ಗುರುತಿಸಿದ್ದೇವೆ. ಅವರಲ್ಲಿ ಯಾರಿಗೂ ರೋಗಲಕ್ಷಣಗಳು ಕಂಡುಬಂದಿಲ್ಲ. ಆದರೂ ಅವರನ್ನು ಕ್ವಾರಂಟೈನ್​​ನಲ್ಲಿ ಇರಿಸಲಾಗಿದೆ.” ಎಂದು ಹೇಳಿದ್ದಾರೆ.

ಇದನ್ನೂ ಓದಿ: Monkeypox: ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ ಡಬ್ಲ್ಯುಹೆಚ್‌ಒ

ತೆಲಂಗಾಣದಲ್ಲಿ ಹೊಸ ಮಂಕಿಪಾಕ್ಸ್​ ಪ್ರಕರಣ ಪತ್ತೆಯಾಗುವ ಮೂಲಕ ಭಾರತದಲ್ಲಿ 5ನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾದಂತಾಗಿದೆ. ಭಾರತದಲ್ಲಿ ಮಂಕಿಪಾಕ್ಸ್ ವೈರಸ್‌ನ 4ನೇ ಪ್ರಕರಣ ಭಾನುವಾರ ದೆಹಲಿಯಲ್ಲಿ ಪತ್ತೆಯಾಗಿತ್ತು. 34 ವರ್ಷದ ವ್ಯಕ್ತಿ ಇತ್ತೀಚೆಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದ ಸ್ಟಾಗ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಮೂರು ದಿನಗಳ ಹಿಂದೆ ಜ್ವರ ಮತ್ತು ಚರ್ಮದ ಗಾಯಗಳಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಮಂಕಿಪಾಕ್ಸ್​ ದೃಢಪಟ್ಟಿದೆ. ಲ್ಯಾಬ್ ಪರೀಕ್ಷೆಯಲ್ಲಿ ತೆಲಂಗಾಣದ ವ್ಯಕ್ತಿಗೆ ಮಂಕಿಪಾಕ್ಸ್​ ತಗುಲಿರುವುದು ದೃಢಪಟ್ಟರೆ ಭಾರತದಲ್ಲಿ 5 ಮಂಕಿಪಾಕ್ಸ್​ ಕೇಸುಗಳು ದೃಢಪಟ್ಟಂತಾಗುತ್ತದೆ.

Published On - 11:42 am, Mon, 25 July 22