ಜಮ್ಮು ಕಾಶ್ಮೀರದ ಗಡಿಯಲ್ಲಿ ಶೂಟ್ ಮಾಡಿಕೊಂಡು ಬಿಎಸ್​ಎಫ್​ ಸಬ್ ಇನ್​ಸ್ಪೆಕ್ಟರ್ ಆತ್ಮಹತ್ಯೆ

ರಾಮ್​ದೇವ್ ಸಿಂಗ್ 12ನೇ ಬೆಟಾಲಿಯನ್‌ಗೆ ಸೇರಿದವರಾಗಿದ್ದು, ಬಿಎಸ್‌ಎಫ್‌ನ ತುಕಡಿಗೆ ಕಮಾಂಡರ್ ಆಗಿದ್ದರು. ಅವರು ತಮ್ಮ ಸರ್ವಿಸ್ ರಿವಾಲ್ವರ್​​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಮ್ಮು ಕಾಶ್ಮೀರದ ಗಡಿಯಲ್ಲಿ ಶೂಟ್ ಮಾಡಿಕೊಂಡು ಬಿಎಸ್​ಎಫ್​ ಸಬ್ ಇನ್​ಸ್ಪೆಕ್ಟರ್ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
TV9kannada Web Team

| Edited By: Sushma Chakre

Jul 25, 2022 | 11:15 AM

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿರುವ (Jammu Kashmir) ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ (BSF) ಸಬ್ ಇನ್ಸ್‌ಪೆಕ್ಟರ್ ಇಂದು ಮುಂಜಾನೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಬಿಎಸ್​ಎಫ್ ಸಬ್ ಇನ್​ಸ್ಪೆಕ್ಟರ್​ ರಾಮ್‌ದೇವ್ ಸಿಂಗ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಅವರ ಸಹೋದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು.

ಬಿಎಸ್​ಎಫ್​ ಕಿರಿಯ ಶ್ರೇಣಿಯ ಸೈನಿಕ ಇಂದು ಬೆಳಿಗ್ಗೆ 6.35ರ ಸುಮಾರಿಗೆ ರಾಮ್​ದೇವ್ ಸಿಂಗ್ ಅವರ ರೂಮ್​ಗೆ ಹೋಗಿ ನೋಡಿದಾಗ ಅವರು ತಮ್ಮ ಪಿಸ್ತೂಲ್​ನಿಂದ ಶೂಟ್ ಮಾಡಿಕೊಂಡು, ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ.

ಇದನ್ನೂ ಓದಿ: Jammu Kashmir: ಜಮ್ಮು ಕಾಶ್ಮೀರದಲ್ಲಿ ಉಗ್ರರ ಗುಂಡೇಟಿಗೆ ಪೊಲೀಸ್ ಅಧಿಕಾರಿ ಬಲಿ; ಹಲವರಿಗೆ ಗಾಯ

ರಾಮ್​ದೇವ್ ಸಿಂಗ್ 12ನೇ ಬೆಟಾಲಿಯನ್‌ಗೆ ಸೇರಿದವರಾಗಿದ್ದು, ಬಿಎಸ್‌ಎಫ್‌ನ ತುಕಡಿಗೆ ಕಮಾಂಡರ್ ಆಗಿದ್ದರು. ಅವರು ತಮ್ಮ ಸರ್ವಿಸ್ ರಿವಾಲ್ವರ್​​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮ್​ದೇವ್ ಸಿಂಗ್ ಅವರ ಸಾವಿಗೆ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಮತ್ತು ಬಿಎಸ್‌ಎಫ್ ನ್ಯಾಯಾಲಯದ ವಿಚಾರಣೆ ನಡೆಸಲಾಗುತ್ತಿದೆ. ಅವರು ರಾಜಸ್ಥಾನದ ಸಿಕರ್ ಜಿಲ್ಲೆಯವರಾಗಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada