ಈ ಬಾರಿ ಮುಂಗಾರು ಮಳೆ ಶೇಕಡಾ 100ರಷ್ಟು ಉತ್ತಮ

ಕರ್ನಾಟಕದ ಹಲವೆಡೆ ಭಾರೀ ಮಳೆ ಸಾಧ್ಯತೆ
ದೆಹಲಿ: ಕೊರೊನಾ ವೈರಸ್ನಿಂದ ದೇಶಾದ್ಯಂತ ಮೇ 3ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿರುವ ಬೆನ್ನಲ್ಲೇ ಸಮಾಧಾನಕರ ಸಂಗತಿಯೊಂದು ಹೊರಬಂದಿದೆ. ಈ ಬಾರಿ ಮುಂಗಾರು ಮಳೆಯು ಎಂದಿನಂತೆ ಸಾಮಾನ್ಯವಾಗಿ ಬೀಳಲಿದೆ ಎಂದು ಕೇಂದ್ರದ ಭೂ ವಿಜ್ಞಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್ವರೆಗಿನ ಮುಂಗಾರು ಮಳೆಯು ಶೇ.100ರಷ್ಟು ಉತ್ತಮವಾಗಿ ಬೀಳುವ ನಿರೀಕ್ಷೆಯಿದೆ. ಹಾಗಾಗಿ ಕೊರೊನಾದಿಂದ ಕಂಗೆಟ್ಟಿದ್ದ ರೈತರಿಗೆ ಇದು ಸಿಹಿ ಸುದ್ದಿಯಾಗಿದೆ. ಈಗಾಗಲೇ ಲಾಕ್ಡೌನ್ನಿಂದ ರೈತರು ನಷ್ಟ ಅನುಭವಿಸಿದ್ದಾರೆ. ಮುಂಗಾರು ಮಳೆಗಾಲದ ವೇಳೆಗೆ ಕೊರೊನಾ ಕ್ಲಿಯರ್ ಆಗಿ ರೈತರಿಗೆ […]
ದೆಹಲಿ: ಕೊರೊನಾ ವೈರಸ್ನಿಂದ ದೇಶಾದ್ಯಂತ ಮೇ 3ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿರುವ ಬೆನ್ನಲ್ಲೇ ಸಮಾಧಾನಕರ ಸಂಗತಿಯೊಂದು ಹೊರಬಂದಿದೆ. ಈ ಬಾರಿ ಮುಂಗಾರು ಮಳೆಯು ಎಂದಿನಂತೆ ಸಾಮಾನ್ಯವಾಗಿ ಬೀಳಲಿದೆ ಎಂದು ಕೇಂದ್ರದ ಭೂ ವಿಜ್ಞಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ ತಿಂಗಳಿನಿಂದ ಸೆಪ್ಟೆಂಬರ್ವರೆಗಿನ ಮುಂಗಾರು ಮಳೆಯು ಶೇ.100ರಷ್ಟು ಉತ್ತಮವಾಗಿ ಬೀಳುವ ನಿರೀಕ್ಷೆಯಿದೆ. ಹಾಗಾಗಿ ಕೊರೊನಾದಿಂದ ಕಂಗೆಟ್ಟಿದ್ದ ರೈತರಿಗೆ ಇದು ಸಿಹಿ ಸುದ್ದಿಯಾಗಿದೆ. ಈಗಾಗಲೇ ಲಾಕ್ಡೌನ್ನಿಂದ ರೈತರು ನಷ್ಟ ಅನುಭವಿಸಿದ್ದಾರೆ. ಮುಂಗಾರು ಮಳೆಗಾಲದ ವೇಳೆಗೆ ಕೊರೊನಾ ಕ್ಲಿಯರ್ ಆಗಿ ರೈತರಿಗೆ ಶುಭಸುದ್ದಿ ತರುತ್ತಾ ಎಂಬುದು ಕಾದುನೋಡಬೇಕಾಗಿದೆ.