ದೆಹಲಿ: ಭಾರತ ಉಪಖಂಡಕ್ಕೆ ಈ ವರ್ಷದ ಮುಂಗಾರು 2 ದಿನ ತಡವಾಗಿ ಬರಲಿದೆ. ಕೇರಳ ಕರಾವಳಿಗೆ ಮುಂಗಾರು ಮಳೆ ಜೂನ್ 3ರಂದು ಅಪ್ಪಳಿಸಬಹುದು. ಚಂಡಮಾರುತದ ಪ್ರಭಾವದಿಂದ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಜೂನ್ 1ರಿಂದ 3ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಭಾನುವಾರ ಹೇಳಿದೆ.
ಹವಾಮಾನದ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿರುವ ತಜ್ಞರು ಮುಂಗಾರು ಜೂನ್ 1ರಿಂದ ಮತ್ತಷ್ಟು ತೀಕ್ಷ್ನಗೊಳ್ಳಬಹುದು. ಕೇರಳದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಜೂನ್ 3ರಂದೇ ಕೇರಳಕ್ಕೆ ಮುಂಗಾರು ಅಪ್ಪಳಿಸಲಿದೆ’ ಎಂದು ಹೇಳಿದ್ದಾರೆ. ಹವಾಮಾನ ಇಲಾಖೆಯ ದತ್ತಾಂಶಗಳನ್ನು ಉಲ್ಲೇಖಿಸಿ ಭಾರತ ಸರ್ಕಾರವೂ ಹೇಳಿಕೆ ಬಿಡುಗಡೆ ಮಾಡಿದೆ. ಕೇರಳ ಮತ್ತು ಮಾಹೆಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದೂ ಹವಾಮಾನ ಇಲಾಖೆ ಹೇಳಿದೆ.
ಪಂಜಾಬ್ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ಸಮುದ್ರಮಟ್ಟದಿಂದ 1.5 ಕಿಲೋಮೀಟರ್ ಮೇಲ್ಭಾಗದಲ್ಲಿ ಮೋಡಗಳು ದಟ್ಟೈಸಿವೆ. ಕರ್ನಾಟಕದ ಕರಾವಳಿಯಲ್ಲಿ 3.1 ಕಿಲೋಮೀಟರ್ ಮೇಲ್ಭಾಗದಲ್ಲಿ ಮೋಡಗಳು ಸಾಂದ್ರಗೊಂಡಿವೆ. ವಾಯವ್ಯ ಮಾರುತಗಳು ಪ್ರಬಲವಾಗಿ ಬೀಸುತ್ತಿಲ್ಲ. ಹೀಗಾಗಿ ಮುಂಗಾರು ತಡವಾಗಿದೆ ಎಂದು ಹವಾಮಾನ ಇಲಾಖೆಯ ಮುಖ್ಯಸ್ಥ ಡಾ.ಎಂ.ಮಹಾಪಾತ್ರ ಹೇಳಿದ್ದಾರೆ. ‘ಜೂನ್ 1ರಿಂದ ಪರಿಸ್ಥಿತಿ ಸುಧಾರಿಸಲಿದ್ದು, ಕೇರಳದಲ್ಲಿ ಜೂನ್ 3ರಂದು ಮುಂಗಾರು ಮಳೆ ಆರಂಭವಾಗಬಹುದು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೈತರ ಪಾಲಿಗೆ ಈ ನೈಋತ್ಯ ಮುಂಗಾರು ಮಳೆ ಜೀವನಾಡಿಯಾಗಿದೆ. ದೇಶದಲ್ಲಿ ಅರ್ಧದಷ್ಟು ಕೃಷಿಭೂಮಿಗೆ ನೀರಾವರಿ ಸೌಕರ್ಯ ಇಲ್ಲ. ಭತ್ತ, ಕಬ್ಬು, ಜೋಳ, ಹತ್ತಿ ಮತ್ತು ಸೋಯಾಬಿನ್ ಬೆಳೆಗಾರರು ಈ ಜೂನ್ ಮತ್ತು ಸೆಪ್ಟೆಂಬರ್ ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುತ್ತಿದ್ದಾರೆ. ಮುಂಗಾರು ವಿಳಂಬವಾದಷ್ಟೂ ಅವರಿಗೆ ತೊಂದರೆ ತಪ್ಪಿದ್ದಲ್ಲ.
ಈ ವರ್ಷ ವಾಡಿಕೆಯಂತೆ ಸಾಮಾನ್ಯ ಮುಂಗಾರು ಮಳೆ ಆಗಲಿದೆ ಎಂಬ ನಿರೀಕ್ಷೆ ಇರುವುದಾಗಿ ಕಳೆದ ತಿಂಗಳು ಹವಾಮಾನ ಇಲಾಖೆ ಹೇಳಿತ್ತು. ಇದು ಭಾರತದ ಆರ್ಥಿಕತೆ ಪ್ರಮುಖ ಮೂಲವಾಗಿರುವ ಕೃಷಿಗೆ ಪೂರಕವಾಗಿದೆ. ಇನ್ನು ಈ ವರ್ಷ ಪ್ರಾರಂಭವಾದ ಮೇಲೆ ಈಗಾಗಲೇ 2 ಚಂಡಮಾರುತಗಳು ಎದ್ದಿದ್ದು, ಅವುಗಳ ಪ್ರಭಾವದಿಂದ ದೇಶದ ಬಹುತೇಕ ಕಡೆ ಪ್ರತಿದಿನ ಮಳೆಯಾಗುತ್ತಲೇ ಇದೆ.
Isolated heavy rainfall likely over Kerala & Mahe during next 5 days; Coastal Karnataka on 01st-03rd June and South Interior Karnataka on 02nd & 03rd June.
♦ Isolated Heat Wave conditions very likely over West Rajasthan on today, the 30th May, 2021.@ndmaindia pic.twitter.com/fhYt4lj0UR— India Meteorological Department (@Indiametdept) May 30, 2021
(Monsoon Likely To Hit Kerala Coast On June 3 two Days Behind Schedule)
ಇದನ್ನೂ ಓದಿ: Karnataka Weather: ಕರಾವಳಿ, ಮಲೆನಾಡು, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಭಾಗದಲ್ಲಿ ಮಳೆ ಸಾಧ್ಯತೆ
ಇದನ್ನೂ ಓದಿ: ಕೊವಿಡ್ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ 3 ಲಕ್ಷ ರೂ.ಪರಿಹಾರ, ಪ್ರತಿ ತಿಂಗಳೂ 2000 ರೂ.: ಕೇರಳ ಸಿಎಂ ಘೋಷಣೆ
Published On - 8:28 pm, Sun, 30 May 21