ಆಂಧ್ರದ ವಿಶಾಖಪಟ್ಟಣದಲ್ಲಿ ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ಮಲ್ಟಿ ಸಿಸ್ಟಮ್ ಇನ್ಫ್ಲಾಮೇಟರೈ ಸಿಸ್ಟಂ ಇನ್ ಚಿಲ್ಡ್ರನ್ ‘ಮಿಸ್ಸಿ’ ಸಮಸ್ಯೆ ಕಾಣಿಸಿಕೊಂಡಿದೆ. ಚಿಕ್ಕ ಮಕ್ಕಳು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಕೊರೊನಾದಿಂದ ಗುಣಮುಖರಾದ ಹದಿನಾರು ವರ್ಷದ ಮಕ್ಕಳು ಹೆಚ್ಚಾಗಿ ಈ ರೋಗಕ್ಕೆ ತುತ್ತಾಗಿದ್ದಾರೆ.
ವಿಶಾಖಪಟ್ಟಣಂನ ಕೆಜಿಹೆಚ್ ಆಸ್ಪತ್ರೆಯಲ್ಲಿ 10ಕ್ಕೂ ಅಧಿಕ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸೋಂಕಿಗೆ ಫಿಟ್ಸ್, ಚರ್ಮದ ಮೇಲೆ ಗುಳ್ಳೆಗಳು, ಮೂಳೆಗಳು ಮುರಿದಂತಾಗುವ ಕೆಲ ಲಕ್ಷಣಗಳು ಕಾಣಿಸಿಕೊಂಡಿವೆ. ಒಂದೊಂದು ಮಗುವಿನಲ್ಲಿ ಒಂದೊಂದು ರೀತಿಯ ಲಕ್ಷಣಗಳು ಕಂಡು ಬಂದಿವೆ. ಸರಿಯಾದ ಸಮಯಕ್ಕೆ ಈ ರೋಗವನ್ನು ಗುರುತಿಸದಿದ್ದರೆ ಮಕ್ಕಳಿಗೆ ಪ್ರಾಣಪಾಯವಾಗುವ ಸಂಭವವಿದೆ ಎಂದು ವೈದ್ಯರು ಹೇಳುತ್ತಾರೆ. ಇದರಿಂಧ ಮಕ್ಕಳ ಮೆದುಳು, ಹೃದಯ, ಶ್ವಸಕೋಶಕ್ಕೆ ಭಾರಿ ಹಾನಿಯಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಾಗಲಕೋಟೆಯಲ್ಲೂ ಕಾಣಿಸಿಕೊಂಡಿದ್ದ ಸೋಂಕು
ಬಾಗಲಕೋಟೆ ನಗರದಲ್ಲೂ ಐವರು ಮಕ್ಕಳಲ್ಲಿ MISC ಕಾಣಿಸಿಕೊಂಡಿದ್ದು ಕುಮಾರೇಶ್ವರ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವು. ಚಿಕಿತ್ಸೆ ಬಳಿಕ ಎರಡು ನವಜಾತ ಶಿಶುಗಳು ಡಿಸ್ಚಾರ್ಜ್ ಆಗಿದ್ದವು. ಕೊರೊನಾದಿಂದ ಗುಣಮುಖರಾಗಿ 3 ವಾರದಿಂದ 3 ತಿಂಗಳು ಬಳಿಕ ಈ ರೋಗ ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ ಎರಡಕ್ಕಿಂತ ಹೆಚ್ಚು ಗಂಭೀರ ಕಾಯಿಲೆ ಕಾಣಿಸುವ ಲಕ್ಷಣಗಳು ಇರುತ್ತವೆ.
ಉಸಿರಾಟ, ಹೃದಯ, ಮಿದುಳು, ಲೀವರ್ ಸೇರಿದಂತೆ ಎರಡಕ್ಕಿಂತ ಹೆಚ್ಚು ಕಾಯಿಲೆ ಕಾಣಿಸುವ ಸಾಧ್ಯತೆ ಇರುತ್ತದೆ. ಕೊರೊನಾದಿಂದ ಗುಣಮುಖರಾದ ಬಳಿಕ ಈ ಕಾಯಿಲೆ ಬರುವುದರಿಂದ ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿದರೆ ಮಕ್ಕಳ ತಜ್ಞರನ್ನು ಭೇಟಿ ಮಾಡಿ ಸಲಹೆ, ಚಿಕಿತ್ಸೆ ಪಡೆಯಬೇಕು ಎಂದು ಎಸ್.ಎನ್ ಮೆಡಿಕಲ್ ಕಾಲೇಜಿನ ಕುಮಾರೇಶ್ವರ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಶೋಕ ಬಡಕಲಿ ಈ ಬಗ್ಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಹಾವೇರಿಯಲ್ಲಿ ಮಿಸ್ಸಿಂಗ್ ಪ್ರಕರಣಗಳ ಸಂಖ್ಯೆ ಹೆಚ್ಚಳ; ಕಾಣೆಯಾಗಿರುವ 48 ಜನರಲ್ಲಿ ಯುವತಿಯರೇ ಹೆಚ್ಚು