AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಸೇರಲು ಹೋಗಿದ್ದ ಮಾಜಿ ಸಚಿವ ಈಟಲ ರಾಜೇಂದರ್​ ಭಾರಿ ಅನಾಹುತದಿಂದ ಪಾರು: ಪೈಲೆಟ್ ಅಲರ್ಟ್, ಎಲ್ಲರೂ ಸೇಫ್

ಈಟಲ ರಾಜೇಂದರ್ ದೆಹಲಿಯಿಂದ ಬರುತ್ತಿದ್ದ ವಿಮಾನದಲ್ಲಿ ಸಾಂಕೇತಿಕ ಸಮಸ್ಯೆ ಕಾಣಿಸಿಕೊಂಡಿದ್ದು ಪೈಲಟ್ ಅಲರ್ಟ್ ಆದ ಕಾರಣ ಭಾರಿ ಅನಾಹುತ ತಪ್ಪಿದೆ. ವಿಮಾನ ಟೇಕಪ್ ವೇಳೆ ರನ್ ವೇ ಮೇಲಿರುವಾಗಲೇ ಸಾಂಕೇತಿಕ ಲೋಪ ಗುರುತಿಸಿದ ಪೈಲೆಟ್, ಗಾಳಿಯಲ್ಲಿ ಹಾರುವಾಗ ಅಲರ್ಟ್ ಆಗಿದ್ದಾರೆ....

ಬಿಜೆಪಿ ಸೇರಲು ಹೋಗಿದ್ದ ಮಾಜಿ ಸಚಿವ ಈಟಲ ರಾಜೇಂದರ್​ ಭಾರಿ ಅನಾಹುತದಿಂದ ಪಾರು: ಪೈಲೆಟ್ ಅಲರ್ಟ್, ಎಲ್ಲರೂ ಸೇಫ್
ಎಟೆಲಾ ರಾಜೇಂದರ್​
TV9 Web
| Edited By: |

Updated on: Jun 15, 2021 | 2:16 PM

Share

ದೆಹಲಿ: ತೆಲಂಗಾಣದ ಮಾಜಿ ಸಚಿವ ಈಟಲ ರಾಜೇಂದರ್ ಸೋಮವಾರ ಬಿಜೆಪಿ ಸೇರಿದ್ದಾರೆ. ಸದ್ಯ ಅದೃಷ್ಟವಶಾತ್ ದೆಹಲಿಯಲ್ಲಿ ಬಿಜೆಪಿ ಪಕ್ಷ ಸೇರಲು ಹೋಗಿದ್ದ ಈಟಲ ರಾಜೇಂದರ್ಗೆ ಭಾರಿ ಪ್ರಮಾದ ತಪ್ಪಿದೆ.

ಈಟಲ ರಾಜೇಂದರ್ ದೆಹಲಿಯಿಂದ ಬರುತ್ತಿದ್ದ ವಿಮಾನದಲ್ಲಿ ಸಾಂಕೇತಿಕ ಸಮಸ್ಯೆ ಕಾಣಿಸಿಕೊಂಡಿದ್ದು ಪೈಲಟ್ ಅಲರ್ಟ್ ಆದ ಕಾರಣ ಭಾರಿ ಅನಾಹುತ ತಪ್ಪಿದೆ. ವಿಮಾನ ಟೇಕಪ್ ವೇಳೆ ರನ್ ವೇ ಮೇಲಿರುವಾಗಲೇ ಸಾಂಕೇತಿಕ ಲೋಪ ಗುರುತಿಸಿದ ಪೈಲೆಟ್, ಗಾಳಿಯಲ್ಲಿ ಹಾರುವಾಗ ಅಲರ್ಟ್ ಆಗಿದ್ದಾರೆ. ನಂತರ ಸಣ್ಣ ಸಮಸ್ಯೆ ಎಂದು ಗಂಟೆಗಟ್ಟಲೇ ಕಾಯುವಂತೆ ಮಾಡಿದ್ದಾರೆ. ಕಾದು ಕಾದು ಸುಸ್ತಾದ ಈಟಲ ರಾಜೇಂದರ್ ದೆಹಲಿಯಿಂದ ವಿದೇಶಿ ವಿಮಾನದಲ್ಲಿ ಹೈದರಾಬಾದ್ಗೆ ಹೊರಟ್ಟಿದ್ದಾರೆ. ಈ ವೇಳೆ ವಿಮಾನದಲ್ಲಿ ಈಟಲ ರಾಜೇಂದರ್ ಜೊತೆಯಲ್ಲಿ ಶಾಸಕ ರಘುನಂದನ್, ವಿವೇಕ್, ಎನುಗು ರವೀಂದರ್ ರೆಡ್ಡಿ, ತುಲಾ ಉಮಾ ಸೇರಿ ಒಟ್ಟು 184 ಜನರಿದ್ದರು.

ಬಿಜೆಪಿ ಸೇರಿದ ಮಾಜಿ ಸಚಿವ ಟಿಆರ್ಎಸ್ನಲ್ಲಿ ಹಿರಿಯ ನಾಯಕರಾಗಿದ್ದ ರಾಜೇಂದರ್ ಕೆಲ ದಿನಗಳ ಹಿಂದೆ ಹುಜುರಾಬಾದ್ ಶಾಸಕ ಸ್ಥಾನಕ್ಕೆ ಹಾಗೂ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಇವರು ಕೆ.ಚಂದ್ರಶೇಖರ್ ಅವರ ಸರ್ಕಾರದಲ್ಲಿ ಸಚಿವರಾಗಿ ಹಣಕಾಸು, ಆರೋಗ್ಯ ಸೇರಿದಂತೆ ಪ್ರಮುಖ ಖಾತೆಗಳನ್ನು ನೋಡಿಕೊಳ್ಳುತ್ತಿದ್ದರು. ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಆರೋಪಗಳು ಕೇಳಿ ಬಂದಿದ್ದರಿಂದ ಸಂಪುಟದಿಂದ ಅವರನ್ನು ಕೈಬಿಡಲಾಗಿತ್ತು.

ಇದನ್ನೂ ಓದಿ: ಗ್ರಾಮದಿಂದ ರೈತ ಕುಟುಂಬವನ್ನು ಬಹಿಷ್ಕರಿಸಿದ ಆರೋಪ; ನ್ಯಾಯಕ್ಕಾಗಿ ಆಗ್ರಹಿಸಿ ಗದಗ ಜಿಲ್ಲಾ ಕಚೇರಿ ಮುಂದೆ ಧರಣಿ

ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ರಾಶಿಕಾ ಬಗ್ಗೆ ಅಪರೂಪದ ವಿಷಯಗಳ ಹೇಳಿದ ತಾಯಿ
ರಾಶಿಕಾ ಬಗ್ಗೆ ಅಪರೂಪದ ವಿಷಯಗಳ ಹೇಳಿದ ತಾಯಿ
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?