ಕೇದಾರನಾಥ ಧಾಮದ (Kedarnath Dham) ಬಾಗಿಲು ತೆರೆದ ಐದನೇ ದಿನದಂದು ಸುಮಾರು 80,000 ಕ್ಕೂ ಹೆಚ್ಚು ಯಾತ್ರಿಕರು ದೇವಾಲಯಕ್ಕೆ ಭೇಟಿ ನೀಡಿ ಕೇದಾರನಾಥನ ದರ್ಶನ ಪಡೆದಿದ್ದಾರೆ. ಈ ಕುರಿತು ಎಎನ್ಐ ಜತೆ ಮಾತನಾಡಿರುವ ರುದ್ರಪ್ರಯಾಗದ ಎಸ್ಪಿ ಆಯುಷ್ ಅಗರ್ವಾಲ್, ‘‘ಕೇದಾರನಾಥ ಧಾಮಕ್ಕೆ ಯಾತ್ರಿಕರ ಪ್ರಯಾಣ ಸುಗಮವಾಗಿ ಸಾಗುತ್ತಿದೆ. ದರ್ಶನಕ್ಕಾಗಿ ಪ್ರಯಾಣಿಕರು ಸರದಿಯಲ್ಲಿ ಕಾದಿದ್ದಾರೆ’’ ಎಂದು ತಿಳಿಸಿದ್ದಾರೆ. ದೇವರ ದರ್ಶನ ಪಡೆಯಲು ಕೇದಾರನಾಥ ಧಾಮದಲ್ಲಿರುವ ಹೆಲಿಪ್ಯಾಡ್‌ನಿಂದ ದೇವಸ್ಥಾನದವರೆಗೆ ಭಕ್ತಾದಿಗಳು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕೆಟ್ಟ ಹವಾಮಾನದ ನಡುವೆಯೂ ಭಕ್ತರು ಭೇಟಿ ನೀಡುತ್ತಿದ್ದು, ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಯಾತ್ರೆಗೆ ಬಂದಿದ್ದ 6 ಮಂದಿ ಭಕ್ತರು ಆರೋಗ್ಯ ಹದಗೆಟ್ಟು ಸಾವನ್ನಪ್ಪಿದ್ದಾರೆ ಎಂದು ಆಯುಷ್ ಅಗರ್ವಾಲ್ ಇದೇ ವೇಳೆ ಎಎನ್ಐಗೆ ತಿಳಿಸಿದ್ದಾರೆ. ಕೆಟ್ಟ ಹವಾಮಾನದ ಕಾರಣದಿಂದ ಪ್ರಯಾಣಿಕರನ್ನು ಸೋನ್‌ಪ್ರಯಾಗದಲ್ಲಿ ನಿಲ್ಲಿಸಲಾಗಿದೆ. ಹವಾಮಾನದ ಬಗ್ಗೆ ಸ್ಪಷ್ಟ ಅರಿವು ಲಭಿಸಿದ ನಂತರ ಅವರನ್ನು ಸೋನ್‌ಪ್ರಯಾಗದಿಂದ ಕೇದಾರನಾಥ ಧಾಮಕ್ಕೆ ಕಳುಹಿಸಲಾಗುತ್ತಿದೆ ಎಂದು ಅಗರ್ವಾಲ್ ಮಾಹಿತಿ ನೀಡಿದ್ದಾರೆ
5ನೇ ದಿನ ವಾತಾವರಣ ಹೇಗಿತ್ತು? ವಿಡಿಯೋ ಇಲ್ಲಿದೆ:
#WATCH | Uttarakhand: Thousands of devotees queue up to offer prayers at the Kedarnath Temple, on the 5th day since its portals opened. pic.twitter.com/QzPXK3YA1w
— ANI UP/Uttarakhand (@ANINewsUP) May 10, 2022
ಮೇ 6ರಿಂದ ಭಕ್ತರಿಗೆ ದರ್ಶನ ಪಡೆಯಲು ಅವಕಾಶ:
ಕೇದಾರನಾಥ ದೇಗುಲದ ಬಾಗಿಲನ್ನು ಮೇ 6ರ ಶುಕ್ರವಾರ ಮುಂಜಾನೆ 6.25ಕ್ಕೆ ತೆರೆಯಲಾಗಿತ್ತು. ಮೊದಲ ದಿನ ಸುಮಾರು 10 ಸಾವಿರ ಭಕ್ತರು ದೇವರ ದರ್ಶನ ಪಡೆದಿದ್ದರು. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಅಂದು ಉಪಸ್ಥಿತರಿದ್ದರು. ಮೇ 3ರಂದು ಗಂಗೋತ್ರಿ ಧಾಮ, ಯಮುನೋತ್ರಿ ಧಾಮಗಳನ್ನು ಅಕ್ಷಯ ತೃತೀಯದ ಪ್ರಯುಕ್ತ ತೆರೆಯಲಾಗಿತ್ತು.
ಆರು ತಿಂಗಳ ನಂತರ ಕೇದಾರನಾಥ ದೇವಾಲಯದ ಬಾಗಿಲು ತೆರೆಯುವ ದೃಶ್ಯ:
#WATCH | The doors of Kedarnath Dham opened for devotees. Kedarnath’s Rawal Bhimashankar Linga opened the doors of Baba Kedar. On the occasion of the opening of the doors thousands of devotees were present in the Dham. pic.twitter.com/NWS4jtGstb
— ANI UP/Uttarakhand (@ANINewsUP) May 6, 2022
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ