Poverty and Motherhood: ಹೆತ್ತಮ್ಮನೇ ತನ್ನ ಮಗುವನ್ನು ಮಾರಾಟ ಮಾಡಿದಳು, ಪೊಲೀಸರು ಅರೆಸ್ಟ್ ಮಾಡಿದರು

child sold by mother: ಕುಟುಂಬದಲ್ಲಿನ ಬಡತನದಿಂದ ಹಣಕ್ಕಾಗಿ ತನ್ನ 8 ತಿಂಗಳ ಮಗನನ್ನು ಹೆತ್ತಮ್ಮಾನೇ ಮಾರಾಟ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಗಾಂಧಿನಗರ ಪ್ರದೇಶದಲ್ಲಿ ಪಾನಿಹಟಿ ಪಟ್ಟಣದಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

Poverty and Motherhood: ಹೆತ್ತಮ್ಮನೇ ತನ್ನ ಮಗುವನ್ನು ಮಾರಾಟ ಮಾಡಿದಳು, ಪೊಲೀಸರು ಅರೆಸ್ಟ್ ಮಾಡಿದರು
ಹೆತ್ತಮ್ಮನೇ ತನ್ನ ಮಗುವನ್ನು ಮಾರಾಟ ಮಾಡಿದಳು
Follow us
ಸಾಧು ಶ್ರೀನಾಥ್​
|

Updated on: Jul 25, 2023 | 1:38 PM

ಪಾನಿಹಟಿ (ಪಶ್ಚಿಮ ಬಂಗಾಳ): ತಾಯ್ತನ ಬಡತನಕ್ಕೆ ಶರಣಾಗಿದೆ. ಕುಟುಂಬದ ತೀವ್ರ ಬಡತನ (poverty), ಕುಡುಕ ಪತಿಯಿಂದಾಗಿ ಒಬ್ಬ ತಾಯಿ ಗಾಂಧಿನಗರದಲ್ಲಿರುವ ಎನ್ 24 ಪರಗಣದ (North 24 Pargana, Kolkata) ಪಾನಿಹಟಿ (Panihati) ಪಟ್ಟಣದಲ್ಲಿ ದಾರುಣ ನಿರ್ಧಾರಕ್ಕೆ (Motherhood) ಬರುವಂತಾಗಿದೆ. ಏನೆಂದರೆ ಹೆತ್ತಮ್ಮ ತನ್ನ ಮಗುವನ್ನು (Child) ಮಾರಾಟ ಮಾಡಿದ್ದಾಳೆ.

ಕುಟುಂಬದಲ್ಲಿನ ಬಡತನದಿಂದ ಹಣಕ್ಕಾಗಿ ತನ್ನ 8 ತಿಂಗಳ ಮಗನನ್ನು ಹೆತ್ತಮ್ಮಾನೇ ಮಾರಾಟ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಗಾಂಧಿನಗರ ಪ್ರದೇಶದಲ್ಲಿ ಪಾನಿಹಟಿ ಪಟ್ಟಣದಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಆರೋಪಿ ಮಹಿಳೆ ಸತಿದೇವಿ ಚೌಧುರಿಯನ್ನು ಖರ್ದಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಳಿಕ ಮಗುವಿನ ತಂದೆ ತಲೆಮರೆಸಿಕೊಂಡಿದ್ದಾನೆ. ಘಟನೆಯಿಂದ ಪಾನಿಹಟಿ ಪುರಸಭೆಯ ವಾರ್ಡ್ ನಂ. 11ರಲ್ಲಿ ಉದ್ವಿಗ್ನತೆ ಉಂಟಾಗಿದೆ.

Also Read:  ಈ ಫೋಟೋ ಸಾಕು ಎಲ್ಲವನ್ನೂ ಹೇಳುತ್ತಿದೆ, ಆಂಬ್ಯುಲೆನ್ಸ್ ಸಿಗದೇ ಬೈಕ್​ ಮೇಲೆ ಮಂಚ ಕಟ್ಟಿ, ಸ್ವಗ್ರಾಮಕ್ಕೆ ಅಣ್ಣನ ಶವ ಸಾಗಿಸಿದ ತಮ್ಮ!

ಮೂಲಗಳ ಪ್ರಕಾರ, ಘಟನೆಯ ಸುದ್ದಿ ಹೊರಬಿದ್ದಾಗ ಸತಿದೇವಿ ಅವರ ಪತಿ ಸ್ಥಳಲ್ಲಿದ್ದ. ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದಾರೆ. ಪೊಲೀಸರಿಗೂ ಸುದ್ದಿ ತಲುಪಿಸಿದ್ದಾರೆ. ಅಷ್ಟರಲ್ಲಾಗಲೇ ಮಗುವಿನ ಅಪ್ಪ ಆ ಪ್ರದೇಶವನ್ನು ತೊರೆದಿದ್ದ. ಪೊಲೀಸರು ಬಂದು ಸತಿದೇವಿಯನ್ನು ಬಂಧಿಸಿದ್ದಾರೆ. ಇದೀಗ ಆಕೆಯ ವಿಚಾರಣೆ ನಡೆಸಲಾಗುತ್ತಿದೆ. ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪಟ್ಟಣದ ಜನ ಆಗ್ರಹಿಸಿದ್ದಾರೆ.

ಬಡತನದಿಂದಾಗಿ ಮಗುವನ್ನು ಸ್ಥಳೀಯ ಮಹಿಳೆಗೆ ಮಾರಾಟ ಮಾಡಿರುವುದಾಗಿ ಸತಿದೇವಿ ಒಪ್ಪಿಕೊಂಡಿದ್ದಾಳೆ. ಆದರೆ, 100 ರೂಪಾಯಿಗೆ ಮಾರಾಟ ಮಾಡುವುದಾಗಿ ಹೇಳಲಾಗಿದ್ದರೂ 100 ರೂ ಅಲ್ಲ; 2 ಲಕ್ಷ ರೂಪಾಯಿಗೆ ಎಂದು ಕೆಲವರು ಇನ್ನು ಹಲವರು 70,000 ರೂಪಾಯಿಗೆ ಮಹಿಳೆ ತನ್ನ ಮಗುವನ್ನು ಮಾರಾಟ ಮಾಡಿರುವುದಾಗಿ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ