ಧೋನಿ ತಂದೆ, ತಾಯಿ ಇಬ್ಬರಿಗೂ ಕೊರೊನಾ ಪಾಸಿಟಿವ್​; ರಾಂಚಿಯ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು

|

Updated on: Apr 21, 2021 | 11:07 AM

ಎಂ.ಎಸ್​.ಧೋನಿ ತಂದೆ ಪಾನ್​ ಸಿಂಗ್ ಹಾಗೂ ತಾಯಿ ದೇವಿಕಾ ದೇವಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇಬ್ಬರಿಗೂ ರಾಂಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಧೋನಿ ತಂದೆ, ತಾಯಿ ಇಬ್ಬರಿಗೂ ಕೊರೊನಾ ಪಾಸಿಟಿವ್​; ರಾಂಚಿಯ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು
ಎಂ.ಎಸ್.ಧೋನಿ
Follow us on

ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರ ತಂದೆ, ತಾಯಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ದೇಶದೆಲ್ಲೆಡೆ ಅತ್ಯಂತ ವೇಗವಾಗಿ ಹಬ್ಬುತ್ತಿರುವ ಕೊರೊನಾ ಸೋಂಕಿನ ಎರಡನೇ ಅಲೆ ಜನಜೀವನವನ್ನು ಮತ್ತೆ ಅಲ್ಲೋಲಕಲ್ಲೋಲಗೊಳಿಸಿದ್ದು, ಜನಸಾಮಾನ್ಯರಿಂದ ಅತಿ ಗಣ್ಯರ ತನಕ ಎಲ್ಲರೂ ಸೋಂಕಿಗೆ ತತ್ತರಿಸಿದ್ದಾರೆ. ಇದೀಗ ಕ್ರಿಕೆಟಿಗ ಧೋನಿ ಅವರ ತಂದೆ, ತಾಯಿ ಕೂಡ ಕೊರೊನಾ ಸೋಂಕಿಗೆ ತುತ್ತಾಗಿರುವುದು ತಿಳಿದುಬಂದಿದೆ.

ಎಂ.ಎಸ್​.ಧೋನಿ ತಂದೆ ಪಾನ್​ ಸಿಂಗ್ ಹಾಗೂ ತಾಯಿ ದೇವಿಕಾ ದೇವಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇಬ್ಬರಿಗೂ ರಾಂಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಧೋನಿ ಐಪಿಎಲ್ 14ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದು, ಇಂದು ಈ ಆವೃತ್ತಿಯ 15ನೇ ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡವನ್ನು ಎದುರಿಸಲಿದೆ.

ಸದ್ಯ ಧೋನಿಯ ತಂದೆ, ತಾಯಿ ಇಬ್ಬರಿಗೂ ರಾಂಚಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಳೇನೂ ಆಸ್ಪತ್ರೆ ಕಡೆಯಿಂದ ಲಭ್ಯವಾಗಿಲ್ಲ. ಕಳೆದ ಬಾರಿ ಯುಎಇ ಮೈದಾನಗಳಲ್ಲಿ ನಡೆದ ಐಪಿಎಲ್​ನಲ್ಲಿ ಭಾಗವಹಿಸಿದ ತವರಿಗೆ ವಾಪಾಸಾದ ನಂತರ ಧೋನಿ ಹೆಚ್ಚಿನ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆದಿದ್ದರು.

ಇದನ್ನೂ ಓದಿ:
ಕೊರೊನಾ ಮೂರನೇ ಬಾರಿಗೆ ರೂಪಾಂತರ; ಅಕ್ಟೋಬರ್​ನಲ್ಲೇ ಸುಳಿವಿದ್ದರೂ ಮೈಮರೆತುಬಿಟ್ಟಿತಾ ಭಾರತ? 

ಹೃದಯ ಸಂಬಂಧಿ ಚಿಕಿತ್ಸೆಗಾಗಿ ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್