ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಪ್ರಸ್ತಾಪವನ್ನು ನಿರಾಕರಿಸಿದ ಮುಕುಲ್ ರೋಹಟಗಿ

ಕೇಂದ್ರ ಸರ್ಕಾರ ಮುಕುಲ್ ರೋಹಟಗಿ ಅವರನ್ನು ಭಾರತದ ಮುಂದಿನ ಅಟಾರ್ನಿ ಜನರಲ್ ಆಗಿ ನೇಮಕ ಮಾಡಿತ್ತು, ಆದರೆ ಮುಕುಲ್ ರೋಹಟಗಿ ಅವರು ಕೇಂದ್ರ ಸರ್ಕಾರದ  ಪ್ರಸ್ತಾಪವನ್ನು ನಿರಾಕರಿಸಿದ್ದಾರೆ.

ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಪ್ರಸ್ತಾಪವನ್ನು ನಿರಾಕರಿಸಿದ ಮುಕುಲ್ ರೋಹಟಗಿ
ಹಿರಿಯ ವಕೀಲ ಮುಕುಲ್ ರೋಹಟಗಿ
TV9kannada Web Team

| Edited By: Vivek Biradar

Sep 25, 2022 | 11:04 PM

ನವದೆಹಲಿ: ಕೇಂದ್ರ ಸರ್ಕಾರ ಮುಕುಲ್ ರೋಹಟಗಿ (Mukul Rohatgi) ಅವರನ್ನು ಭಾರತದ ಮುಂದಿನ ಅಟಾರ್ನಿ ಜನರಲ್ (Attorney General) ಆಗಿ ನೇಮಕ ಮಾಡಿತ್ತು, ಆದರೆ ಮುಕುಲ್ ರೋಹಟಗಿ ಅವರು ಕೇಂದ್ರ ಸರ್ಕಾರದ  ಪ್ರಸ್ತಾಪವನ್ನು ನಿರಾಕರಿಸಿದ್ದಾರೆ. ಇವರ ನಿರಾಕರಣೆಗೆ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಮುಕುಲ್ ರೋಹಟಗಿ ಅಕ್ಟೋಬರ್ 1 ರಿಂದ ಭಾರತದ ಮುಂದಿನ ಅಟಾರ್ನಿ ಜನರಲ್ ಆಗಿ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಬೇಕಿತ್ತು. ಕೆಕೆ ವೇಣುಗೋಪಾಲ್ ಅವರ ಅಧಿಕಾರಾವಧಿಯು ಸೆಪ್ಟೆಂಬರ್ 30 ಕ್ಕೆ ಕೊನೆಗೊಳ್ಳಲಿದ್ದು, ಅವರ ಸ್ಥಾನವನ್ನು ರೋಹಟಗಿ ವಹಿಸಲಿದ್ದರು.

ರೋಹಟಗಿ ಅವರು ಈ ಹಿಂದೆ ಜೂನ್ 2014 ರಲ್ಲಿ ಅಟಾರ್ನಿ ಜನರಲ್ ಆಗಿ ನೇಮಕಗೊಂಡರು ಮತ್ತು ಜೂನ್ 2017 ರವರೆಗೆ ಸೇವೆ ಸಲ್ಲಿಸಿದರು. ಈಗ ಅವರನ್ನು ಎರಡನೇ ಬಾರಿಗೆ ಈ ನೇಮಕ ಮಾಡಲಾಗಿತ್ತು. ಪ್ರಸ್ತುತ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ಸೇವೆ ಜೂನ್ 30 ರಂದು ಕೊನೆಗೊಂಡಿದೆ, ಆದರೆ ಅವರ ಸೆ.30ರ ವರೆಗೆ ಸೇವೆಯನ್ನು ವಿಸ್ತರಿಸಲಾಗಿದೆ.

ವೇಣುಗೋಪಾಲ್ ಅವರು ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಸೆಪ್ಟೆಂಬರ್ 30 ರ ನಂತರ ಅಧಿಕಾರದಲ್ಲಿ ಇರುವುದಿಲ್ಲ ಎಂದು ಸೂಚಿಸಿದ್ದರು. ವೇಣುಗೋಪಾಲ್ ಅವರು ಮೊದಲು 1 ಜುಲೈ 2017 ರಂದು ಕೇಂದ್ರ ಸರ್ಕಾರದ ಉನ್ನತ ಕಾನೂನು ಅಧಿಕಾರಿಯಾಗಿ ಅಟಾರ್ನಿ ಜನರಲ್ ಆಗಿ ಅಧಿಕಾರ ವಹಿಸಿಕೊಂಡರು. ಸೇವೆ ಮುಗಿದ ನಂತರ, ಅವರಿಗೆ 3 ತಿಂಗಳ ವಿಸ್ತರಣೆಯನ್ನು ನೀಡಲಾಯಿತು. ವೇಣುಗೋಪಾಲ್ ಅವರು ಯಾವುದೇ ಹೆಚ್ಚಿನ ವಿಸ್ತರಣೆಯನ್ನು ತೆಗೆದುಕೊಳ್ಳಲು ನಿರಾಕರಿಸಿದರು, ಆದ್ದರಿಂದ ಸರ್ಕಾರವು ಹೊಸ ಅಟಾರ್ನಿ ಜನರಲ್ ಅನ್ನು ನೇಮಿಸಲು ನಿರ್ಧರಿಸಿತ್ತು

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada