ಸಮಾಜವಾದಿ ಪಕ್ಷದ ನಾಯಕ ಮುಲಾಯಾಂ ಸಿಂಗ್​ ಯಾದವ್ ಸೊಸೆ ಇಂದು ಬಿಜೆಪಿಗೆ ಸೇರ್ಪಡೆ; ಟ್ವೀಟ್​ ಮಾಡಿದ ಬಿಜೆಪಿ ನಾಯಕ

ಸಾಲುಸಾಲು ಬಿಜೆಪಿ ಶಾಸಕರು ಪಕ್ಷ ಬಿಟ್ಟಿದ್ದರಿಂದ ಉಂಟಾಗಿರುವ ಹಾನಿಯನ್ನು ಸರಿಪಡಿಸಿಕೊಳ್ಳಲು ಬಿಜೆಪಿಗೆ ಇದೊಂದು ಸದಾವಕಾಶ. ಹಿಂದುಳಿದ ವರ್ಗಗಳ ನಾಯಕರಾಗಿದ್ದ ಸ್ವಾಮಿ ಪ್ರಸಾದ್​ ಮೌರ್ಯ ಬಿಜೆಪಿ ಸೇರುತ್ತಿದ್ದಂತೆ, ಅವರ ಹಿಂದೆ ಹಲವರು ಹೋಗಿದ್ದರು.

ಸಮಾಜವಾದಿ ಪಕ್ಷದ ನಾಯಕ ಮುಲಾಯಾಂ ಸಿಂಗ್​ ಯಾದವ್ ಸೊಸೆ ಇಂದು ಬಿಜೆಪಿಗೆ ಸೇರ್ಪಡೆ; ಟ್ವೀಟ್​ ಮಾಡಿದ ಬಿಜೆಪಿ ನಾಯಕ
ಅಪರ್ಣಾ ಯಾದವ್​
Follow us
TV9 Web
| Updated By: Lakshmi Hegde

Updated on:Jan 19, 2022 | 7:54 AM

 ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಾಂ ಸಿಂಗ್​ ಯಾದವ್​ ಸೊಸೆ ಅಪರ್ಣಾ ಯಾದವ್​ ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಬಲವಾದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ನಿನ್ನೆ ರಾತ್ರಿಯೇ ಅವರು ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷ ಧ್ಯಾನಶಂಕರ್​ ಸಿಂಗ್​ ಜತೆ ದೆಹಲಿಗೆ ತೆರಳಿದ್ದು, ಇಂದು ರಾಷ್ಟ್ರೀಯ ಅಧ್ಯಕ್ಷ  ಜೆಪಿ ನಡ್ಡಾ ಸಮ್ಮುಖದಲ್ಲಿ ಕಮಲ ಪಕ್ಷಕ್ಕೆ ಸೇರಲಿದ್ದಾರೆ ಎಂದು ಹೇಳಲಾಗಿದೆ. ಅಪರ್ಣಾ ಯಾದವ್​ ಅವರು  ಮುಲಾಯಾಂ ಸಿಂಗ್​ ಕಿರಿಯ ಪುತ್ರ ಪ್ರತೀಕ್​ ಯಾದವ್​ ಪತ್ನಿ. ಇವರು 2017ರ ವಿಧಾನಸಭೆ ಚುನಾವಣೆಯಲ್ಲಿ ಲಖನೌದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಆಗ ಬಿಜೆಪಿಯ ಬಹುಗುಣ ಜೋಶಿ ವಿರುದ್ಧ ಸೋತಿದ್ದರು. ಇವರ ಪತಿ ಪ್ರತೀಕ್​ ಯಾದವ್​ ರಾಜಕೀಯದಿಂದ ದೂರವುಳಿದಿದ್ದಾರೆ. 

ಅಪರ್ಣಾ ಯಾದವ್​ ಬಿಜೆಪಿ ಸೇರುವ ಬಗ್ಗೆ ಹಲವು ದಿನಗಳಿಂದಲೂ ಮಾತು ಕೇಳಿಬರುತ್ತಿತ್ತು. ಆದರೆ ಯಾವುದೇ ವಿಷಯವೂ ದೃಢಪಟ್ಟಿರಲಿಲ್ಲ.ಇನ್ನು ಕಳೆದ ವಾರ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ಮೂರು ಸಚಿವರು ಸೇರಿ ಹಲವು ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇಬ್ಬರು ಶಾಸಕರು ಈಗಾಗಲೇ ಎಸ್​ಪಿಯಿಂದ ಬಿಜೆಪಿಗೆ ಬಂದಿದ್ದಾರೆ. ಈ ಮಧ್ಯೆ ಹರ್ಯಾಣ ಬಿಜೆಪಿ ಉಸ್ತುವಾರಿ ಅರುಣ್​ ಯಾದವ್​ ನಿನ್ನೆ ಟ್ವೀಟ್ ಮಾಡಿ, ಮುಲಾಯಂ ಸಿಂಗ್ ಯಾದವ್​ ಅವರ ಕಿರಿಯ ಪುತ್ರ ಪ್ರತೀಕ್​ ಯಾದವ್ ಪತ್ನಿ ಅಪರ್ಣಾ ಯಾದವ್​ ಬುಧವಾರ ಬಿಜೆಪಿ ಸೇರಲಿದ್ದಾರೆ. ಈ ವೇಳೆ ಯೋಗಿ ಆದಿತ್ಯನಾಥ್​ ಕೂಡ ಇರುವರು ಎಂದು ತಿಳಿಸಿದ್ದಾರೆ.

ಸಾಲುಸಾಲು ಬಿಜೆಪಿ ಶಾಸಕರು ಪಕ್ಷ ಬಿಟ್ಟಿದ್ದರಿಂದ ಉಂಟಾಗಿರುವ ಹಾನಿಯನ್ನು ಸರಿಪಡಿಸಿಕೊಳ್ಳಲು ಬಿಜೆಪಿಗೆ ಇದೊಂದು ಸದಾವಕಾಶ. ಹಿಂದುಳಿದ ವರ್ಗಗಳ ನಾಯಕರಾಗಿದ್ದ ಸ್ವಾಮಿ ಪ್ರಸಾದ್​ ಮೌರ್ಯ ಬಿಜೆಪಿ ಸೇರುತ್ತಿದ್ದಂತೆ, ಅವರ ಹಿಂದೆ ಹಲವರು ಹೋಗಿದ್ದರು. ಇದು ಬಿಜೆಪಿ ಪಾಲಿಗೂ ನುಂಗಲಾರದ ತುತ್ತು. ಅವರು ಬಿಜೆಪಿ ಬಿಡುತ್ತಿದ್ದಂತೆ,  ಇತರ ಹಿಂದುಳಿದ ವರ್ಗಕ್ಕೆ ಸೇರಿದವರ ಮತ ಗಳಿಸಲು ಬಿಜೆಪಿ ಇನ್ನಿಲ್ಲದಂತೆ ಪ್ರಯತ್ನ ಮಾಡುವ ಸ್ಥಿತಿ ಬಂದಿದೆ. ಇನ್ನು ಅಪರ್ಣಾ ಯಾದವ್​ ಸಮಾಜವಾದಿ ಪಕ್ಷ ಬಿಟ್ಟಿದ್ದು ಆ ಪಕ್ಷಕ್ಕೆ ಹಿನ್ನೆಡೆಯೂ ಹೌದು. ಫೆ.10ರಿಂದ ಒಟ್ಟು ಏಳುಹಂತದಲ್ಲಿ ಉತ್ತರಪ್ರದೇಶ ಚುನಾವಣೆ ನಡೆಯಲಿದ್ದು, ಮಾರ್ಚ್​ 10ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಡಿಯೋಡರೆಂಟ್ ಬಳಕೆ ಕ್ಯಾನ್ಸರ್​ಗೆ ಕಾರಣವಾಗುತ್ತದೆಯೇ? ಇಲ್ಲಿದೆ ಮಾಹಿತಿ ಪರಿಶೀಲಿಸಿ

Published On - 7:53 am, Wed, 19 January 22