ಮುಂಬೈ: ತಾನೊಂದು ಬಗೆದರೆ ದೈವವೊಂದು ಬಗೆಯಿತು, ಅತ್ತೆಯನ್ನು ಬೆಂಕಿ ಹಚ್ಚಿ ಕೊಲ್ಲಲು ಹೋಗಿ ತಾನೂ ಸುಟ್ಟು ಕರಕಲಾದ
ಅತ್ತೆಯನ್ನು ಕೊಲ್ಲಲು ಹೋಗಿದ್ದ ವ್ಯಕ್ತಿಯೊಬ್ಬ ತಾನೂ ಸುಟ್ಟು ಕರಕಲಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿಯ ತಾಯಿಯನ್ನು ಬೆಂಕಿ ಹಚ್ಚಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಮಾಲುಂಡ್ ಪೂರ್ವದಲ್ಲಿ ಈ ಘಟನೆ ನಡೆದಿದೆ. ಆತ ಅತ್ತೆಯ ಮೇಲೆ ಭಾರದ ವಸ್ತುವಿನಿಂದ ಹಲ್ಲೆ ನಡೆಸಿ, ಬಳಿಕ ಸುಟ್ಟು ಹಾಕಿದ್ದಾನೆ.

ಮುಂಬೈ, ಫೆಬ್ರವರಿ 26: ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬ ಮಾತು ಅಕ್ಷರಶಃ ಸತ್ಯ. ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿಯ ತಾಯಿಯನ್ನು ಬೆಂಕಿ ಹಚ್ಚಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಮಾಲುಂಡ್ ಪೂರ್ವದಲ್ಲಿ ಈ ಘಟನೆ ನಡೆದಿದೆ. ಆತ ಅತ್ತೆಯ ಮೇಲೆ ಭಾರದ ವಸ್ತುವಿನಿಂದ ಹಲ್ಲೆ ನಡೆಸಿ, ಬಳಿಕ ಸುಟ್ಟು ಹಾಕಿದ್ದಾನೆ.
ಆರೋಪಿಯನ್ನು 55 ವರ್ಷದ ಕೃಷ್ಣ ದಾಜಿ ಹಸ್ತಂಕರ್ ಎಂದು ತಿಳಿದುಬಂದಿದೆ, ಆತ ಅತ್ತೆಯನ್ನು ಟೆಂಪೋದಲ್ಲಿ ಮಲಗಿಸಿ ಬೆಂಕಿ ಹಚ್ಚಿದ್ದಾನೆ. ಆದರೆ ಸರಿಯಾದ ಸಮಯದಕ್ಕೆ ತಾನೂ ಟೆಂಪೋದಿಂದ ಇಳಿಯಲಾಗದೆ ಸುಟ್ಟು ಕರಕಲಾಗಿದ್ದಾನೆ. ತನ್ನ ಮತ್ತು ಪತ್ನಿಯ ನಡುವಿನ ಬಿರುಕಿಗೆ ಹಾಗೂ ತಾವು ವಿಚ್ಛೇದನ ಪಡೆಯಲು ಅತ್ತೆಯೇ ಕಾರಣ ಎಂದು ಆಕೆಯ ಹತ್ಯೆಗೆ ಮುಂದಾಗಿದ್ದ.
ಮೃತ ಮಹಿಳೆಯ ಮಗಳು ಹತ್ತು ವರ್ಷಗಳ ಹಿಂದೆ ಹಸ್ತಂಕರ್ ಅವರಿಂದ ವಿಚ್ಛೇದನ ಪಡೆದು ತನ್ನ ಮಗನ ಜತೆಯಲ್ಲಿ ತಾಯಿಯ ಮನೆಯಲ್ಲಿ ವಾಸವಿದ್ದಾಳೆ. ಮಗನ ವಯಸ್ಸು ಈಗ 20 ವರ್ಷ. ಹಸ್ತಂಕರ್ ತನ್ನ ಮಾಜಿ ಪತ್ನಿ ಹಾಗೂ ಮಗನನ್ನು ಭೇಟಿಯಾಗಲು ಹೋಗುತ್ತಿದ್ದ, ಇದು ಆತನ ಅತ್ತೆಗೆ ಇಷ್ಟವಾಗದೆ ಪದೇ ಪದೇ ಜಗಳವಾಗುತ್ತಿತ್ತು.
ಮತ್ತಷ್ಟು ಓದಿ: ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆ ಮೇಲೆ ಅನುಮಾನ: ಸಂತೆಯಿಂದ ಮಚ್ಚು ತಂದು ಸಿನಿಮೀಯವಾಗಿ ಮೂವರ ಹತ್ಯೆ ಮಾಡಿದ ವ್ಯಕ್ತಿ
ತನ್ನೊಂದಿಗೆ ವಿಚ್ಛೇದನ ಪಡೆಯುವಂತೆ ಆಕೆಯೇ ಪತ್ನಿಯ ತಲೆ ಕೆಡಿಸಿದ್ದಾಳೆ ಎಂದು ಕೋಪಗೊಂಡಿದ್ದ. ಹಾಗಾಗಿ ಕೊಲೆ ಮಾಡಲು ನಿರ್ಧರಿಸಿದ್ದ. ಚಾಲಕನಾಗಿ ಕೆಲಸ ಮಾಡುತ್ತಿದ್ದ ಹಸ್ತಂಕರ್ ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮುಲುಂಡ್ ಪೂರ್ವದ ನಾನೆಪಾಡ ಪ್ರದೇಶದಲ್ಲಿರುವ ಹುಸಾರೆ ಅವರ ಮನೆಗೆ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಹೋಗಿದ್ದ.
ಹುಸಾರೆ ಅವರ ಮನೆಯ ಬಳಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಆಕೆ ಮತ್ತು ಹಸ್ತಂಕರ್ ಅವರು ತಮ್ಮ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ನಿಲ್ಲಿಸಿದ್ದ ತನ್ನ ಟೆಂಪೋ ಬಳಿ ಬರುತ್ತಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಸ್ತಂಕರ್ ಹುಸಾರೆ ಅವರನ್ನು ಟೆಂಪೋದ ಹಿಂಭಾಗದಲ್ಲಿ ಕೂರಿಸಿ, ನಂತರ ಸ್ವತಃ ಒಳಗೆ ಹೋಗಿ ಒಳಗಿನಿಂದ ಲಾಕ್ ಮಾಡಿದ್ದಾನೆ. ನಂತರ ಹುಸಾರೆ ಅವರ ತಲೆಗೆ ಸುತ್ತಿಗೆಯಿಂದ ಮೂರರಿಂದ ನಾಲ್ಕು ಬಾರಿ ಹೊಡೆದು ಪ್ರಜ್ಞೆ ತಪ್ಪುವಂತೆ ಮಾಡಿ, ನಂತರ ಸೀಮೆಎಣ್ಣೆ ಸುರಿದು ಸುಟ್ಟು ಹಾಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಟೆಂಪೋ ಒಳಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಅಲ್ಲೇ ಇದ್ದವರು ಗಮನಿಸಿದ ತಕ್ಷಣ, ಅವರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಕರೆ ಮಾಡಿದರು. ಬೆಂಕಿಯನ್ನು ನಂದಿಸಿದ ನಂತರ, ಅಧಿಕಾರಿಗಳಿಗೆ ಟೆಂಪೋ ಒಳಗೆ ಸುತ್ತಿಗೆ, ಸೀಮೆಎಣ್ಣೆ ಬಾಟಲಿ ಮತ್ತು ಲೈಟರ್ ಕಂಡಿತ್ತು. ಆತ ಸರಿಯಾದ ಸಮಯಕ್ಕೆ ಟೆಂಪೋದಿಂದ ಇಳಿಯಲು ಸಾಧ್ಯವಾಗದ ಕಾರಣ ಸುಟ್ಟು ಕರಕಲಾಗಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ