Kedarnath: ಕೇದಾರ ದೇವಸ್ಥಾನದ ಗೋಡೆಗಳಿಗೆ ಚಿನ್ನದ ಹಾಳೆ ಅಳವಡಿಸಲು 230 ಕೆಜಿ ಚಿನ್ನ ಅರ್ಪಿಸಿದ ಮುಂಬೈನ ವಜ್ರ ವ್ಯಾಪಾರಿ!

ಉತ್ತರಾಖಂಡದ ವಿಶ್ವವಿಖ್ಯಾತ ಶ್ರೀ ಕೇದಾರನಾಥ ದೇವಾಲಯದ ಗರ್ಭಗುಡಿಯ ಒಳಗಿನ ಗೋಡೆಯನ್ನು ಈಗ ಚಿನ್ನ ಹಾಳೆಗಳಿಂದ ಜೋಡಿಸಲಾಗುವುದು. ದೀಪಾವಳಿಯ ಶುಭ ಮುಹೂರ್ತದಲ್ಲಿ ಕೇದಾರನಾಥನ ಗರ್ಭಗುಡಿಯ ಗೋಡೆಯನ್ನು ಚಿನ್ನದಿಂದ ನಿರ್ಮಿಸಿದ ನಂತರ ಇದು ಭಕ್ತರ ಮತ್ತಷ್ಟು ಆಕರ್ಷಣೀಯ ಕೇಂದ್ರವಾಗಲಿದೆ.

Kedarnath: ಕೇದಾರ ದೇವಸ್ಥಾನದ ಗೋಡೆಗಳಿಗೆ ಚಿನ್ನದ ಹಾಳೆ ಅಳವಡಿಸಲು 230 ಕೆಜಿ ಚಿನ್ನ ಅರ್ಪಿಸಿದ ಮುಂಬೈನ ವಜ್ರ ವ್ಯಾಪಾರಿ!
ಕೇದಾರನಾಥ ದೇವಸ್ಥಾನದ ಗೋಡೆಗಳ ಮೇಲೆ ಚಿನ್ನದ ತಟ್ಟೆ ಅಳವಡಿಸಲು 230 ಕೆಜಿ ಚಿನ್ನ ಅರ್ಪಿಸಿದ ಮುಂಬೈ ಉದ್ಯಮಿ!
Edited By: ಸಾಧು ಶ್ರೀನಾಥ್​

Updated on: Oct 25, 2022 | 2:25 PM

ಮುಂಬೈನ ವಜ್ರ ವ್ಯಾಪಾರಿಯೊಬ್ಬರು (Diamond Merchant) ಕೇದಾರನಾಥ ದೇವಸ್ಥಾನದ (Kedarnath Temple) ಗೋಡೆಗಳ ಮೇಲೆ ಚಿನ್ನದ ಹಾಳೆಗಳನ್ನು (Gold plating) ಅಳವಡಿಸಲು 230 ಕೆಜಿ ಚಿನ್ನವನ್ನು ಅರ್ಪಿಸಿದ್ದಾರೆ. ಕೇದಾರನಾಥ ದೇವಾಲಯದ ಗರ್ಭಗುಡಿಯ ಸುತ್ತಲಿನ ಗೋಡೆಗಳ ಮೇಲೆ ಚಿನ್ನದ ಫಲಕಗಳನ್ನು ಅಳವಡಿಸಲು ಭಾರೀ ಮೊತ್ತದ ಈ ಚಿನ್ನವನ್ನು ಸದುಪಯೋಗಪಡಿಸಿಕೊಳ್ಳಲಾಗುವುದು ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ಉತ್ತರಾಖಂಡದ ವಿಶ್ವವಿಖ್ಯಾತ ಶ್ರೀ ಕೇದಾರನಾಥ ದೇವಾಲಯದ ಗರ್ಭಗುಡಿಯ ಒಳಗಿನ ಗೋಡೆಯನ್ನು ಈಗ ಚಿನ್ನ ಹಾಳೆಗಳಿಂದ ಜೋಡಿಸಲಾಗುವುದು. ದೀಪಾವಳಿಯ ಶುಭ ಮುಹೂರ್ತದಲ್ಲಿ ಕೇದಾರನಾಥನ ಗರ್ಭಗುಡಿಯ ಗೋಡೆಯನ್ನು ಚಿನ್ನದಿಂದ ನಿರ್ಮಿಸಿದ ನಂತರ ಇದು ಭಕ್ತರ ಮತ್ತಷ್ಟು ಆಕರ್ಷಣೀಯ ಕೇಂದ್ರವಾಗಲಿದೆ. ಈ ಚಿನ್ನದ ಗೋಡೆಯನ್ನು ಮಾಡಲು ಮುಂಬೈನ ಉದ್ಯಮಿಯೊಬ್ಬರು ಸುಮಾರು 230 ಕೆಜಿ ಚಿನ್ನವನ್ನು ನೀಡಿದ್ದಾರೆ.

ಈ ಹಿಂದೆ ಕೇದಾರನಾಥ ಧಾಮದ ಗರ್ಭಗುಡಿಯ ಗೋಡೆಯನ್ನು ಬೆಳ್ಳಿಯಿಂದ ಜೋಡಿಸಲಾಗಿದೆ. ಈಗ ದೇಗುಲ ಆವರಣದ ಇತರೆ ಭಾಗಗಳಲ್ಲಿ ಚಿನ್ನದ ಲೇಪನ ಮಾಡಲಾಗುವುದು. ಈ ಚಿನ್ನದ ತಟ್ಟೆಯಲ್ಲಿ ಶಂಕರನ ಸಂಕೇತವಾದ ಶಂಖ, ತ್ರಿಶೂಲ, ಡಮರು ಮುಂತಾದ ಚಿಹ್ನೆಗಳನ್ನು ಕೆತ್ತಲಾಗಿದೆ.

ಇದಲ್ಲದೇ ಗೋಡೆಯ ಮೇಲಿನ ಈ ಚಿನ್ನದ ಹಾಳೆಯ ಮೇಲೆ ಜೈ ಬಾಬಾ ಕೇದಾರ, ಹರಹರ ಮಹಾದೇವ್ ಎಂದು ಬರೆಯಲಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ನಿರ್ಮಿಸಲಾದ ಈ ಗೋಡೆಯು 230 ಕೆಜಿ ಚಿನ್ನದಿಂದ ಮಾಡಲ್ಪಟ್ಟಿದೆ. ಮುಂಬೈನ ಉದ್ಯಮಿಯೊಬ್ಬರು ಈ ಚಿನ್ನವನ್ನು ನೀಡಿದ್ದಾರೆ.

ಗರ್ಭಗುಡಿಯಲ್ಲಿದ್ದ ಬೆಳ್ಳಿಗೋಡೆ ತೆಗೆದು ಚಿನ್ನದ ಗೋಡೆ ಸಿದ್ಧ:

230 ಕೆಜಿ ಚಿನ್ನವನ್ನು ದಾನ ಮಾಡಿರುವ ಆ ಉದ್ಯಮಿ, ಬೆಳ್ಳಿ ಗೋಡೆಯನ್ನು ನೋಡಿದ ನಂತರ ದೇವರ ಗರ್ಭಗುಡಿಯ ಗೋಡೆಯನ್ನು ಚಿನ್ನದಿಂದ ಏಕೆ ಮಾಡಬಾರದು ಎಂದು ಆಗಾಗ್ಗೆ ಯೋಚಿಸುತ್ತೇನೆ ಎಂದು ಹೇಳಿದ್ದರು. ಇದಾದ ಬಳಿಕ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈ ಚಿನ್ನದ ಗೋಡೆ ಸಿದ್ಧಪಡಿಸಲಾಗಿದೆ. ಇದಾದ ನಂತರ ದೀಪಾವಳಿಯ ಶುಭ ಮುಹೂರ್ತದಲ್ಲಿ ಚಿನ್ನದ ತಗಡಿನ ಗೋಡೆಯನ್ನು ಸ್ಥಾಪಿಸಲಾಯಿತು ಎಂದು ದೇಗುಲದ ಮೂಲಗಳು ಹೇಳಿವೆ.

ಚಿನ್ನದ ಗೋಡೆ ನಿರ್ಮಾಣಕ್ಕೆ ಸ್ಥಳೀಯ ಅರ್ಚಕರ ವಿರೋಧ:

ಬದರಿ ಕೇದಾರ ನಾಥ ದೇವಸ್ಥಾನ ಸಮಿತಿ ಮತ್ತು ಉತ್ತರಾಖಂಡ ಸರ್ಕಾರ ಈ ಚಿನ್ನದ ಲೇಪನ ಕಾಮಗಾರಿಗೆ ಅನುಮತಿ ನೀಡಿದೆ. ಆದರೆ ಸ್ಥಳೀಯ ಅರ್ಚಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಅರ್ಚಕರು ಪ್ರತಿಭಟನೆ ನಡೆಸಿ, ಉಪವಾಸ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಆದರೆ ದೇವಸ್ಥಾನದ ಗೋಡೆಗೆ ಚಿನ್ನದ ತಗಡುಗಳನ್ನು ಅಳವಡಿಸಿರುವ ಮುಂಬೈ ಉದ್ಯಮಿಗೆ ರಾಜ್ಯ ಸರ್ಕಾರ ಮತ್ತು ದೇವಸ್ಥಾನ ಸಮಿತಿ ಬೆಂಬಲ ನೀಡಿದ್ದಲ್ಲದೆ, ಅವರಿಗೆ ಕೃತಜ್ಞತೆಯನ್ನೂ ವ್ಯಕ್ತಪಡಿಸಿದೆ.

ಇಂದು ಸೂರ್ಯಗ್ರಹಣದ ಸಂದರ್ಭದಲ್ಲಿ ದೇವಾಲಯದ ಬಾಗಿಲು ಬಂದ್:

ಇಂದು ಸೂರ್ಯಗ್ರಹಣದಿಂದಾಗಿ ಬಾಬಾ ಕೇದಾರನಾಥ ದೇವಾಲಯವನ್ನು ಮುಚ್ಚಲಾಗಿದೆ. ಇದಲ್ಲದೇ ಬಂಡಾರಿ-ಕೇದಾರ ದೇವಾಲಯ ಸಮಿತಿ ವ್ಯಾಪ್ತಿಯ ಎಲ್ಲಾ ದೇವಾಲಯಗಳು ಮುಚ್ಚಲ್ಪಡುತ್ತವೆ. ದೇವಾಲಯದ ಬಾಗಿಲುಗಳು ಬೆಳಿಗ್ಗೆ 4:26 ರಿಂದ ಸಂಜೆ 5:32 ರವರೆಗೆ ಅಂದರೆ ಗ್ರಹಣ ಅವಧಿಯಲ್ಲಿ ಮುಚ್ಚಿರುತ್ತದೆ.

TV9 Web

TV9 Kannada

Read More
Loading...
Unable to load recommendations.
Follow Us