ಮುಂಬೈ-ಗೋವಾ ಹೆದ್ದಾರಿಯಲ್ಲಿ ಟ್ರಕ್​ಗೆ ಬಸ್​ ಡಿಕ್ಕಿ, ಓರ್ವ ಸಾವು, 28 ಮಂದಿಗೆ ಗಾಯ

ಮುಂಬೈ-ಗೋವಾ ಹೆದ್ದಾರಿಯಲ್ಲಿ ಕಂಟೈನರ್ ಟ್ರಕ್​ಗೆ ರಾಜ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು, 28 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಬಸ್ ಮತ್ತು ಕಂಟೈನರ್ ಟ್ರಕ್ ಅಕ್ಕಪಕ್ಕದಲ್ಲಿ ಚಲಿಸುತ್ತಿದ್ದಾಗ ತಾಲೇಗಾಂವ್ ಗ್ರಾಮದ ಮಂಗಾವ್ ಬಳಿ ಈ ಘಟನೆ ನಡೆದಿದೆ ಎಂದು ರಾಯಗಢ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮುಂಬೈ-ಗೋವಾ ಹೆದ್ದಾರಿಯಲ್ಲಿ ಟ್ರಕ್​ಗೆ ಬಸ್​ ಡಿಕ್ಕಿ, ಓರ್ವ ಸಾವು, 28 ಮಂದಿಗೆ ಗಾಯ
ಅಪಘಾತ
Follow us
ನಯನಾ ರಾಜೀವ್
|

Updated on:Sep 17, 2023 | 12:33 PM

ಮುಂಬೈ-ಗೋವಾ ಹೆದ್ದಾರಿಯಲ್ಲಿ ಕಂಟೈನರ್ ಟ್ರಕ್​ಗೆ ರಾಜ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು, 28 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಬಸ್ ಮತ್ತು ಕಂಟೈನರ್ ಟ್ರಕ್ ಅಕ್ಕಪಕ್ಕದಲ್ಲಿ ಚಲಿಸುತ್ತಿದ್ದಾಗ ತಾಲೇಗಾಂವ್ ಗ್ರಾಮದ ಮಂಗಾವ್ ಬಳಿ ಈ ಘಟನೆ ನಡೆದಿದೆ ಎಂದು ರಾಯಗಢ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಪ್ರಯಾಣಿಕ ಡೊಂಬಿವಲಿ ನಿವಾಸಿ ವಿನೋದ್ ತರಳೆ (38) ಮೃತಪಟ್ಟರೆ, ಅವರ ಪತ್ನಿ ವೈಷ್ಣವಿ ಮತ್ತು 15 ವರ್ಷದ ಮಗ ಅಥರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಒಂಬತ್ತು ಮಹಿಳೆಯರು, ಮೂವರು ಹುಡುಗಿಯರು ಸೇರಿದಂತೆ ಒಟ್ಟು 28 ಪ್ರಯಾಣಿಕರು ಮತ್ತು ಐದು ಮಕ್ಕಳು ಗಾಯಗೊಂಡಿದ್ದಾರೆ.

ಮತ್ತಷ್ಟು ಓದಿ: Uttarakhand: ಹೋಟೆಲ್​ನಲ್ಲಿ ಅಗ್ನಿ ಅವಘಡ, ಸುಟ್ಟು ಕರಕಲಾದ ವಾಹನಗಳು

ಘಟನೆಯ ನಂತರ MSRTC ಅಧಿಕಾರಿಗಳು ಪ್ರಯಾಣಿಕರನ್ನು ಅವರು ತಲುಪಬೇಕಾದ ಸ್ಥಳಕ್ಕೆ ಸಾಗಿಸಲು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:32 pm, Sun, 17 September 23